ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಚಿತ್ರ ಜನವರಿ ಕೊನೆಯಲ್ಲಿ ತೆರೆಗೆ ಬರಲಿದೆ. ನಿರ್ಮಾಪಕ ಬಿ.ಕೆ.ಗಂಗಾಧರ್ ಚಿತ್ರವನ್ನು ಜನವರಿಯಲ್ಲಿ ತೆರೆಗೆ ತರೋದು ಪಕ್ಕಾ ಎನ್ನುತ್ತಿದ್ದಾರೆ. ಈ ನಡುವೆಯೇ ಧ್ರುವ ಸರ್ಜಾ “ದುಬಾರಿ’ ಚಿತ್ರವನ್ನು ಒಪ್ಪಿಕೊಂಡಿದ್ದು ಗೊತ್ತೇ ಇದೆ. ಉದಯ್ ಮೆಹ್ತಾ ನಿರ್ಮಾಣದ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಈಗ ಧ್ರುವ ಮತ್ತೂಂದು ಸಿನಿಮಾದ ಕಥೆ ಕೇಳಿ ಖುಷಿಯಾಗಿದ್ದಾರೆ.
ಅಷ್ಟಕ್ಕೂ ಯಾವ ನಿರ್ದೇಶಕರ ಕಥೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ರಾಘವೇಂದ್ರ ಹೆಗ್ಡೆ. ಈ ಹಿಂದೆ”ಜಗ್ಗುದಾದಾ’ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದರಾಘವೇಂದ್ರ ಅವರು ಈಗಹೊಸ ಸಿನಿಮಾ ಮಾಡಲುಮುಂದಾಗಿದ್ದಾರೆ. ಮೊದಲ ಹಂತವಾಗಿ ನಟ ಧ್ರುವ ಅವರಿಗೆ ಸಿನಿಮಾ ಕಥೆ ಹೇಳಿದ್ದಾರೆ.ಕಥೆ ಕೇಳಿ ಫಿದಾ ಆಗಿರುವ ಧ್ರುವ ಆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಇಂದಿನಿಂದ ತೆರೆಮೇಲೆ ಶಕೀಲಾ ಬಯೋಪಿಕ್
“ರಾಘವೇಂದ್ರ ಹೆಗ್ಡೆ ಅವರು ಹೇಳಿದ ಕಥೆ ಕೇಳಿದೆ. ಅದ್ಭುತವಾದ ಫಸ್ಟ್‌ಹಾಫ್ ಇದೆ. ಮನಸ್ಸಿಗೆ ಖುಷಿಯಾಯಿತು’ ಎಂದು ಟ್ವೀಟ್ ಮಾಡಿದ್ದಾರೆ. ಎಲ್ಲಾ ಓಕೆ, ಈ ಸಿನಿಮಾ ಯಾವಾಗ ಶುರುವಾಗಬಹುದು ಎಂದು ನೀವುಕೇಳಬಹುದು. “ದುಬಾರಿ’ ಮುಗಿದ ನಂತರ ಧ್ರುವ ಅವರ ಹೊಸ ಚಿತ್ರ ಆರಂಭವಾಗಬಹುದು. ಇನ್ನು, ಧ್ರುವ ಅಭಿನಯದ “ಪೊಗರು’ ಚಿತ್ರದ ಖರಾಬು ಸಾಂಗ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಇನ್ನು “ಪೊಗರು’ ಸಿನಿಮಾದಲ್ಲಿ ಸಂಪೂರ್ಣವಾಗಿ ಧ್ರುವ ಗೆಟಪ್ ಬದಲಾಗಿದೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಹೈಸ್ಕೂಲ್ ಹುಡುಗನ ಗೆಟಪ್‌ನಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದು. ಹೌದು, ಚಿತ್ರದ ಪ್ರಮುಖ ದೃಶ್ಯವೊಂದರಲ್ಲಿ ಧ್ರುವ ಸರ್ಜಾ ಹೈಸ್ಕೂಲ್ ಹುಡುಗ ಗೆಟಪ್‌ನಲ್ಲಿಕಾಣಿಸಿಕೊಂಡಿದ್ದಾರೆ.