Advertisement

ಐಪಿಎಲ್‌: ಮತ್ತೆ ಚೆನ್ನೆ „ ತೆಕ್ಕೆಗೆ ಧೋನಿ?

07:05 AM Oct 25, 2017 | Team Udayavani |

ಹೊಸದಿಲ್ಲಿ: ಮಾಲಕರ ಬೆಟ್ಟಿಂಗ್‌ ಪ್ರಕರಣದಿಂದಾಗಿ 2 ವರ್ಷ ಸುಪ್ರೀಂ ಕೋರ್ಟ್‌ನಿಂದ ಅಮಾನತುಗೊಂಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ನ ಮುಂದಿನ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ. ಈ ತಂಡವನ್ನು ಮತ್ತೆ ಮಹೇಂದ್ರ ಸಿಂಗ್‌ ಧೋನಿ ಮುನ್ನಡೆಸುವುದು ಖಚಿತ ಎನ್ನಲಾಗಿದೆ.

Advertisement

ಈ ಹಿಂದೆಯೂ ಇಂಥದೇ ಸುದ್ದಿ ಹರಡಿತ್ತು. ಇದೀಗ ಮತ್ತೆ ಧೋನಿ ಸಿಎಸ್‌ಕೆ ಸೇರಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಆದರೆ ಧೋನಿಯಾಗಲಿ ಅಥವಾ ತಂಡದ ಆಡಳಿತ ಮಂಡಳಿಯಾಗಲಿ ಸದ್ಯಕ್ಕೆ ಅಂತಹ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸದ್ಯ ಧೋನಿ ಪುಣೆ ಸೂಪರ್‌ಜೈಂಟ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 

ಕಳೆದ ಐಪಿಎಲ್‌ ವೇಳೆ ಧೋನಿ ಹಾಗೂ ಪುಣೆ ತಂಡದ ಆಡಳಿತ ಮಂಡಳಿ ನಡುವೆ ಮನಸ್ತಾಪ ಉಂಟಾಗಿತ್ತು. ಧೋನಿಯನ್ನು ಸೂಪರ್‌ಜೈಂಟ್‌ ನಾಯಕ ಪಟ್ಟದಿಂದಲೂ ಕೆಳಕ್ಕಿಳಿಸಲಾಗಿತ್ತು. ಸ್ಟೀವನ್‌ ಸ್ಮಿತ್‌ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. 

ಸಿಎಸ್‌ಕೆ ಜೆರ್ಸಿ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಧೋನಿ ಪತ್ನಿ ಸಾಕ್ಷಿ ಇದಕ್ಕೆ ಪ್ರತ್ಯುತ್ತರ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next