ಮುಂಬೈ: ಟೀಂ ಇಂಡಿಯಾ ಕಂಡ ಯಶಸ್ವಿ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ಗೆ 2014ರಲ್ಲಿ ಗುಡ್ ಬೈ ಹೇಳಿದ್ದ ಮಾಹಿ ಏಕದಿನ ಮತ್ತು ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಆದರೆ 2006ರಲ್ಲಿ ಮೊದಲ ಟೆಸ್ಟ್ ಶತಕ ಬಾರಿಸಿದ್ದ ಧೋನಿ ಅಂದೇ ನಿವೃತ್ತಿಯಾಗುತ್ತೇನೆ ಎಂದಿದ್ದರು ಎಂದು ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಖಾಸಗಿ ಕ್ರೀಡಾ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ವಿವಿಎಸ್ ಲಕ್ಷ್ಮಣ್, 2006ರಲ್ಲಿ ಪಾಕಿಸ್ಥಾನ ವಿರುದ್ಧ ಫೈಸಲಾಬಾದ್ ಮೈದಾನದಲ್ಲಿ ನಾವು ಟೆಸ್ಟ್ ಪಂದ್ಯ ಆಡುತ್ತಿದ್ದೇವೆ. ಈ ಪಂದ್ಯದಲ್ಲಿ ತನ್ನ ಮೊದಲ ಶತಕ ಬಾರಿಸಿದ್ದ ಧೋನಿ ಡ್ರೆಸ್ಸಿಂಗ್ ರೂಮ್ ಗೆ ಬಂದು ನಮಗೆಲ್ಲ ಶಾಕ್ ನೀಡಿದ್ದರು ಎಂದಿದ್ದಾರೆ.
“ಆ ಘಟನೆ ನನಗಿನ್ನೂ ನೆನಪಿದೆ. ಚೊಚ್ಚಲ ಶತಕ ಬಾರಿಸಿದ್ದ ಮಹೇಂದ್ರ ಸಿಂಗ್ ಧೋನಿ ಡ್ರೆಸ್ಸಿಂಗ್ ರೂಮ್ ಗೆ ಬಂದು ಕಿರುಚಾಡಿದ್ದರು. ನಾನು ಟೆಸ್ಟ್ ನಲ್ಲಿ ಶತಕ ಬಾರಿಸಿದೆ. ಟೆಸ್ಟ್ ನಲ್ಲಿ ಇದಕ್ಕಿಂತ ಹೆಚ್ಚಿನದೇನು ನನಗೆ ಬೇಡ ಎಂದು ಹೇಳಿದ್ದರು ಎಂದು ಲಕ್ಷ್ಮಣ್ ನೆನಪಿಸಿಕೊಂಡಿದ್ದರು.