Advertisement

ಐಪಿಎಲ್‌ ಪಂದ್ಯಗಳ “ದ್ವಿಶತಕ’ಬಾರಿಸಿದ ಧೋನಿ

12:07 PM Nov 03, 2015 | mahesh |

ಅಬುಧಾಬಿ: ಸೋಮವಾರದ ರಾಜಸ್ಥಾನ್‌ ಎದುರಿನ ಪಂದ್ಯದ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ನೂತನ ಇತಿಹಾಸ ಬರೆದರು. 200 ಐಪಿಎಲ್‌ ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗನೆಂಬ ಹಿರಿಮೆಗೆ ಪಾತ್ರರಾದರು.

Advertisement

ಈ 200 ಪಂದ್ಯಗಳಲ್ಲಿ ಧೋನಿ 170 ಪಂದ್ಯಗಳನ್ನು ಚೆನ್ನೈ ಪರವಾಗಿ ಆಡಿದ್ದಾರೆ. ಈ ತಂಡಕ್ಕೆ ನಿಷೇಧ ಹೇರಿದ ವೇಳೆ ಅವರು ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡವನ್ನು ಪ್ರತಿನಿಧಿಸಿದ್ದರು (2016, 2017).

ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಾಗಿರುವ ಧೋನಿ ಅತೀ ಹೆಚ್ಚು 107 ಪಂದ್ಯಗಳಲ್ಲಿ ಜಯ ಕಂಡಿದ್ದಾರೆ. ಅತ್ಯಧಿಕ ಸ್ಟಂಪಿಂಗ್‌ ಮಾಡಿದ ದಾಖಲೆಯೂ ಇವರ ಹೆಸರಲ್ಲಿದೆ (38). ಅತೀ ಹೆಚ್ಚು ಐಪಿಎಲ್‌ ಪಂದ್ಯಗಳನ್ನು ಆಡಿದ ದಾಖಲೆ ಸುರೇಶ್‌ ರೈನಾ ಹೆಸರಲ್ಲಿತ್ತು (193). ಪ್ರಸಕ್ತ ಕೂಟದ ವೇಳೆ ಧೋನಿ ಮತ್ತು ರೋಹಿತ್‌ ಶರ್ಮ (197) ಇದನ್ನು ಮುರಿದರು. ದಿನೇಶ್‌ ಕಾರ್ತಿಕ್‌ (191) ಕೂಡ ಇನ್ನೂರರತ್ತ ಹೆಜ್ಜೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next