ಹೈದರಾಬಾದ್: ಹತ್ತು ವರ್ಷದ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ಸುರೇಶ್ ರೈನಾ ಅಜೇಯ 137 ರನ್ ದಾಖಲೆಯ ಜತೆಯಾಟವನ್ನು ಎಂ.ಎಸ್.ಧೋನಿ-ಕೇದಾರ್ ಜಾಧವ್ ಮುರಿದಿದ್ದಾರೆ. ಶನಿವಾರ ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧೋನಿ-ಕೇದಾರ್ ಜಾಧವ್ ಒಟ್ಟಾರೆ 5ನೇ ವಿಕೆಟ್‌ಗೆ ಅಜೇಯ 141 ರನ್ ಜತೆಯಾಟ ನಿರ್ಮಿಸಿದರು. ಇದು ಧೋನಿ-ಜಾಧವ್ ನಡುವಿನ ಒಟ್ಟಾರೆ 100 ರನ್‌ಗಳ ಎರಡನೇ ಜತೆಯಾಟವಾಗಿದೆ ಎನ್ನುವುದು ವಿಶೇಷ. ಸಚಿನ್-ರೈನಾ 2009ರಲ್ಲಿ ಆಸ್ಟ್ರೇಲಿಯ ವಿರುದ್ಧ 5ನೇ ವಿಕೆಟ್‌ಗೆ ಅಜೇಯ 121 ರನ್ ಜತೆಯಾಟ ನಿರ್ವಹಿಸಿದ್ದರು
ಧೋನಿ ಸಿಕ್ಸರ್ ದಾಖಲೆ
ಭಾರತದ ಪರ ಆಡಿದ ಏಕದಿನದಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮ ದಾಖಲೆಯನ್ನು ಧೋನಿ ಮುರಿದಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಪಂದ್ಯ ಆರಂಭವಾಗುವುದಕ್ಕೂ ಮೊದಲು ಧೋನಿ ಹಾಗೂ ರೋಹಿತ್ ಶರ್ಮ ತಲಾ 215 ಸಿಕ್ಸರ್ ಸಿಡಿಸಿ ಸಮಸಾಧಿಸಿದ್ದರು. ಪಂದ್ಯ ಮುಗಿದ ಬಳಿಕ ಧೋನಿ ಸಿಕ್ಸರ್ ಸಂಖ್ಯೆ 216ಕ್ಕೆ ಏರಿತು.