Advertisement

ಟೀಸರ್‌ ನಲ್ಲಿ ‘ಧೀರ ಭಗತ್‌ ರಾಯ್‌’ ಎಂಟ್ರಿ

03:21 PM Apr 07, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಧೀರ ಭಗತ್‌ ರಾಯ್‌’ ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರದ ಮೊದಲ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

Advertisement

ಔಟ್‌ ಆ್ಯಂಡ್‌ ಔಟ್‌ ಪೊಲಿಟಿಕಲ್‌ ಆ್ಯಕ್ಷನ್‌ ಡ್ರಾಮಾ “ಧೀರ ಭಗತ್‌ ರಾಯ್‌’ ಸಿನಿಮಾದಲ್ಲಿ ರಾಕೇಶ್‌ ದಳವಾಯಿ ನಾಯಕನಾಗಿ ಬೆಳ್ಳಿ ತೆರೆಗೆ ಎಂಟ್ರಿಯಾಗುತ್ತಿದ್ದಾರೆ. ಸುಚರಿತಾ ಸಹಾಯರಾಜ್‌ ನಾಯಕಿಯಾಗಿ ಕಾಣಿಸಿ ಕೊಳ್ಳುತ್ತಿದ್ದು, ಶರತ್‌ ಲೋಹಿತಾಶ್ವ ಖಳನಾಯಕನಾಗಿ ಅಬ್ಬರಿಸುತ್ತಿದ್ದಾರೆ.

ಉಳಿದಂತೆ ಪ್ರವೀಣ್‌ ಹೆಚ್‌. ಸಿ, ತ್ರಿವಿಕ್ರಮ್, ಮಠ ಕೊಪ್ಪಳ, ಸುಧೀರ್‌ ಕುಮಾರ್‌ ಮುರೊಳ್ಳಿ, ಗೋವಿಂದ್‌, ಶಶಿಕುಮಾರ್‌, ಫಾರೂಕ್‌ ಅಹ್ಮದ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ:‘ಸಿಂಹ’ ಆಡಿಯೋದಲ್ಲಿ ವಸಿಷ್ಠ ಕನಸು

ಸುಮಾರು ಎಂಟು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ, ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಕರ್ಣನ್‌ ಎಸ್‌. “ಧೀರ ಭಗತ್‌ ರಾಯ್‌’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಅಧಿಕಾರಕ್ಕಾಗಿ ನಡೆಯುವ ಹೋರಾಟ, ಪ್ರೀತಿ-ಮಮತೆಯ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಪ್ರತಿ ಪಾತ್ರಗಳಿಗೂ ಅದರದ್ದೇ ಆದ ಮಹತ್ವವಿದ್ದು, ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವಂತೆ ಸಿನಿಮಾವನ್ನು ತೆರೆಮೇಲೆ ತರುತ್ತಿದ್ದೇವೆ’ ಎನ್ನುವುದು ಚಿತ್ರದ ಬಗ್ಗೆ ಚಿತ್ರತಂಡದ ಮಾತು.

Advertisement

“ಶ್ರೀ ಓಂ ಸಿನಿ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಧೀರ ಭಗತ್‌ ರಾಯ್‌’ ಚಿತ್ರದ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಎಂ ಸೆಲ್ವಂ ಜಾನ್‌ ಛಾಯಾಗ್ರಹಣ, ಎನ್‌. ಎಂ ವಿಶ್ವ ಸಂಕಲನವಿದೆ. ಸದ್ಯ ಬಿಡುಗಡೆಯಾಗಿರುವ “ಧೀರ ಭಗತ್‌ ರಾಯ್‌’ ಟೀಸರ್‌ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಆಗಸ್ಟ್‌ ವೇಳೆಗೆ ಹೊಸಬರ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next