Advertisement
ಜು.1ಕ್ಕೆ ಎರಡು ವರ್ಷಗಳನ್ನು ಪೂರೈಸಲಿರುವ ಧಾರವಾಡ ಐಐಟಿಗೆ ಈಗಾಗಲೇ 470 ಎಕರೆ ಭೂಮಿ ನೀಡಲಾಗಿದೆ. ಈ ಪೈಕಿ 250 ಎಕರೆಯಲ್ಲಿ ಮಾತ್ರ ಐಐಟಿ ಕಟ್ಟಡಗಳು, ಆಟದ ಮೈದಾನ, ಉಪನ್ಯಾಸಕರ ವಸತಿ ಗೃಹಗಳು, ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಎಲ್ಲಾ ಬಗೆಯ ಕಟ್ಟಡಗಳು ತಲೆ ಎತ್ತಲಿವೆ. ಧಾರವಾಡ ಐಐಟಿ ಆವರಣದಲ್ಲಿ 4,800ಕ್ಕೂ ಹೆಚ್ಚು ಮರಗಳಿದ್ದು, ಈ ಪೈಕಿ ಒಂದೇ ಒಂದು ಗಿಡವನ್ನೂ ಕತ್ತರಿಸದಂತೆ ಕ್ಯಾಂಪಸ್ ನಿರ್ಮಿಸಲು ಐಐಟಿ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಧಾರವಾಡ ಐಐಟಿ ಸ್ಥಾಪನೆಗೆ ಕೆಐಎಡಿಬಿ ಮೂಲಕ ಭೂಸ್ವಾಧೀನ ಪಡೆಸಿಕೊಂಡ ಭೂಮಿಗೆ ಪ್ರತಿ ಎಕರೆಗೆ 26 ಲಕ್ಷ ರೂ.ವರೆಗೂ ಪರಿಹಾರ ನೀಡಲಾಗಿದೆ. ಈ ಭೂಮಿಯಲ್ಲಿ ರೈತರೇ ಬೆಳೆಸಿದ 2,100ಕ್ಕೂ ಹೆಚ್ಚು ಉತ್ತಮ ಫಲ ಕೊಡುವ ಆಲ್ಫಾನ್ಸೋ ಮಾವಿನ ಮರಗಳಿವೆ. ಇವು ಇನ್ನೂ 25 ವರ್ಷಗಳವರೆಗೆ ಉತ್ತಮ ಫಲ ಕೊಡುವ ಶಕ್ತಿ ಹೊಂದಿವೆ. ಇವುಗಳನ್ನು ಬೆಳೆಸಲು ರೈತರು ಸಾಕಷ್ಟು ಕಷ್ಟಪಟ್ಟಿದ್ದರಿಂದ ಗಿಡಗಳ ಪರಿಹಾರ ಪ್ರತ್ಯೇಕವಾಗಿ ನೀಡುವಂತೆ ಆಗ್ರಹಿಸಿದ್ದರು.
Related Articles
Advertisement
ಸೌರಶಕ್ತಿ ಚಾಲಿತ ವಾಹನ:ಐಐಟಿ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ತರಗತಿ ಕಟ್ಟಡ, ಹಾಸ್ಟೇಲ್, ಉಪಹಾರ ಗೃಹ, ಈಜುಕೊಳ, ಆಟದ ಮೈದಾನ ಎಲ್ಲದರ ಮಧ್ಯೆಯೂ ಸರಿ ಸಾಧಾರಣವಾಗಿ 1 ಕಿಮೀನಷ್ಟು ಅಂತರವಿದೆ. ಹೀಗಾಗಿ ಇಲ್ಲಿ ಸುತ್ತಾಡಲು ವಾಹನಗಳ ಅಗತ್ಯವಿದೆ. ವಾಯು, ಶಬ್ದ ಮಾಲಿನ್ಯದ ತೊಂದರೆಯಾಗುತ್ತದೆ. ಇದನ್ನು ತಡೆಯಲು ಐಐಟಿ ಅಧಿಕಾರಿಗಳು ಸೌರಶಕ್ತಿ ಮತ್ತು ವಿದ್ಯುತ್ ಬ್ಯಾಟರಿ ಆಧಾರಿತ ವಾಹನಗಳನ್ನು ಬಳಸಿಕೊಳ್ಳಲು ಯೋಜಿಸಿದ್ದಾರೆ. ಐಐಟಿ ಗ್ಲೋಬಲ್ ಟೆಂಡರ್:
ಎಂತಹ ಕಟ್ಟಡಗಳು ಬೇಕು ಎಂಬುದನ್ನು ನಿರ್ಧಾರ ಮಾಡಿ ಐಐಟಿ ಬೋರ್ಡ್‌ನಲ್ಲಿ ಒಪ್ಪಿಗೆ ಪಡೆಯುತ್ತಾರೆ. ಇದರ ನಿರ್ಮಾಣಕ್ಕೆ ಜಾಗತಿಕ ಕಂಪನಿಗಳಿಂದ ಟೆಂಡರ್ ಕರೆಯಲು ಐಐಟಿ ನಿರ್ಧರಿಸಿದೆ. ಇದಕ್ಕೆ ಧಾರವಾಡ ಜಿಲ್ಲಾಡಳಿತವೂ ಸಮ್ಮತಿಸಿದೆ. ಕ್ಯಾಂಪಸ್‌ಗೆ ಕಾಂಪೌಂಡ್ ನಿರ್ಮಾಣ ಕಳೆದ ಒಂದು ವರ್ಷದಿಂದ ಜೋರಾಗಿ ಸಾಗಿದೆ. ಆವರಣ ಕಾಮಗಾರಿ ಮುಗಿಯುವ ಮುಂಚೆಯೇ ಪ್ರಧಾನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಐಐಟಿ ಅಧಿಕಾರಿಗಳು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಐಐಟಿ ತರಗತಿಗಳು ಇಲ್ಲಿನ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ವಾಲಿ¾ ಕಟ್ಟಡದಲ್ಲಿ ನಡೆಯತ್ತಿವೆ. ಪ್ರತಿ ವರ್ಷ 120 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಸದ್ಯಕ್ಕೆ ಎರಡು ವರ್ಷದಲ್ಲಿ ಒಟ್ಟು 240 ವಿದ್ಯಾರ್ಥಿಗಳಿದ್ದಾರೆ. ಧಾರವಾಡ ಐಐಟಿ ನೀಲನಕ್ಷೆ ಸಜ್ಜಾಗಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಒಂದು ತಿಂಗಳಲ್ಲಿ ಸಿದ್ಧಗೊಳ್ಳಬಹುದು. ರೈತರು ಭೂಮಿಯ ಜೊತೆಗೆ ತಾವು ಬೆಳೆಸಿದ ಮಾವು, ಹುಣಸೆ ಸೇರಿ ಇತರೆ ಮರಗಳಿಗೂ ಪರಿಹಾರ ಕೇಳಿದ್ದರು. ಪರಿಹಾರ ಕೊಡಲು ಆದೇಶಿಸಿದ್ದೇನೆ.
– ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ, ಧಾರವಾಡ – ಬಸವರಾಜ ಹೊಂಗಲ್