Advertisement

ಧಾರವಾಡ ಬಾಲಕಿಯ ಹೃದಯ ಜಿರೋ ಟ್ರಾಫಿಕ್‌ನಲ್ಲಿ ತಂದು ಬೆಳಗಾವಿ ಯುವಕನಿಗೆ ಕಸಿ

06:25 PM Jul 11, 2022 | Team Udayavani |

ಬೆಳಗಾವಿ: ಧಾರವಾಡ ಎಸ್‌ಡಿಎಂ ಆಸ್ಪತ್ರೆಯಿಂದ 16 ವರ್ಷದ ಬಾಲಕಿಯ ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ಕೆಎಲ್‌ಇ ಆಸ್ಪತ್ರೆಗೆ ತಂದು ಬೆಳಗಾವಿಯ ಯುವಕನಿಗೆ ಕಸಿ ಮಾಡಲಾಗಿದೆ.

Advertisement

ಎಸ್‌ಡಿಎಂ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರೀಯಗೊಂಡು ಸಾವನ್ನಪ್ಪಿದ ಬಾಲಕಿಯ ಹೃದಯವನ್ನು ಜಿರೋ ಟ್ರಾಫಿಕ್‌ನಲ್ಲಿ ಬೆಳಗಾವಿಗೆ ತಂದು ಕಸಿ ಮಾಡಲಾಯಿತು. ಒಂದು ಗಂಟೆಗಳ ಅವಧಿಯನ್ನು ಅಂಬ್ಯುಲೆನ್ಸ್ ಸಾಗಲು ಪೊಲೀಸರು ಅವಕಾಶ ಮಾಡಿಕೊಟ್ಟರು.

ಧಾರವಾಡ ಜಿಲ್ಲೆಯಿಂದ ಬೆಳಗಾವಿ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಜಿರೋ ಟ್ರಾಫಿಕ್ ಮಾಡಲಾಗಿತ್ತು. ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಓಡಾಡದಂತೆ ಪೊಲೀಸರು ನಿಗಾ ಇಟ್ಟಿದ್ದರು. ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ನೇರವಾಗಿ ಕೆಎಲ್‌ಇ ಆಸ್ಪತ್ರೆಗೆ ಹೃದಯವನ್ನು ತರಲಾಯಿತು.

ಕೆಎಲ್‌ಇ ಆಸ್ಪತ್ರೆಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ವೈದ್ಯರು ಹೃದಯ ಬರುತ್ತಿದ್ದಂತೆ ಕಸಿ ಮಾಡುವಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next