Advertisement

ಧಾರವಾಡ: ನಕಲಿ ದಾಖಲೆ ಸೃಷ್ಟಿಸಿ ಸೈಟ್ ಮಾರಾಟ; ಆರು ಜನರ ಬಂಧನ

10:00 PM Jul 28, 2023 | Team Udayavani |

ಧಾರವಾಡ: ನಿವೃತ್ತ ಸೇನಾಧಿಕಾರಿಯ ಪತ್ನಿಯ ಹೆಸರಿನಲ್ಲಿದ್ದ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮಾರಾಟ ಮಾಡಿ ಹಣ ದೋಚಿದ್ದ ಪ್ರಕರಣದಲ್ಲಿ ಆರು ಜನ ಆರೋಪಿತರನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದು, ಇದಲ್ಲದೆ ಎಲ್ಲ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌‌.

Advertisement

ಕಲ್ಲಯ್ಯ ಪೂಜಾರಿ, ತುಕಾರಾಮ ಮೋಹಿತೆ, ಬಸವ್ವ ಗುಡ್ಡದಮಠ, ಈರಯ್ಯ ಓಸಿಮಠ, ಬಸಪ್ಪ ಕೋರಿ, ಹಾಗೂ ಮಡಿವಾಳ ಗಾಳಿ ಬಂಧಿತರು. ಉಣಕಲ್ ಗ್ರಾಮದ ಸರ್ವೇ ನಂಬರ್ 640/ಅ ಪ್ಲಾಟ್ ಸಂಖ್ಯೆ 2/10 ರಲ್ಲಿ ನಿವೃತ್ತ ಸೇನಾಧಿಕಾರಿ ದಿ. ಬಸಲಿಂಗಪ್ಪ ಯರಗಟ್ಟಿ ಅವರ ಪತ್ನಿ ರಾಜೇಶ್ವರಿ ಯರಗಟ್ಟಿ ಅವರ ಹೆಸರಿಲ್ಲಿ 2 ಗುಂಟೆ 13 ಆಣೆ ಜಾಗೆ ನೊಂದಣಿಯಾಗಿತ್ತು. ಅದು ತಮ್ಮದೆಂದು ಬಂಧಿತರೆಲ್ಲರೂ ನಕಲಿ ಆಧಾರ, ಪಾನ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಸೃಷ್ಟಿಸಿದ್ದರು. ನಂತರ ಅದನ್ನು ಕೆಐಎಡಿಬಿ ಮೂಲಕ 20.98 ಲಕ್ಷಕ್ಕೆ ಮಾರಾಟ ಮಾಡಿದ್ದರು. ವಿಷಯ ತಿಳಿದ ರಾಜೇಶ್ವರಿ ಈ ಸಂಬಂಧ ಮೂರು ತಿಂಗಳ ಹಿಂದೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸದ್ಯ ಪ್ರಕರಣ ಬೇಧಿಸಿರುವ ಪೊಲೀಸರು, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರು ಜನ ಆರೋಪಿತರನ್ನು ಬಂಧಿಸಿದ್ದು, ಅದರಲ್ಲಿ ತುಕಾರಾಮ ಮೋಹಿತೆ ಎಂಬಾತ ಜಯ ಕರ್ನಾಟಕ ಜನಪರ ವೇದಿಕೆ ಸದಸ್ಯನೆಂದು ಹೇಳಿಕೊಂಡಿದ್ದಾನೆ. ಇದರಲ್ಲಿ ಬ್ಯಾಂಕ್ ಹಾಗೂ ಕೆಐಎಡಿಬಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದ್ದು, ತನಿಖೆ ಮುಂದುವರಿಸಲಾಗಿದೆ ಎಂದು ವಿದ್ಯಾಗಿರಿ ಠಾಣೆಯ ಇನ್ಸ್ ಪೆಕ್ಟರ್ ಸಂಗಮೇಶ ಡಿ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next