Advertisement
ಮೆದುಳು ಸಂಬಂಧಿ ಕಾಯಿಲೆಗಳು, ಸಂಧಿವಾತ, ತೀವ್ರ ರಕ್ತದೊತ್ತಡ, ಕುತ್ತಿಗೆ ನೋವು, ಉಸಿರಾಟದ ತೊಂದರೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಹೃದ್ರೋಗ ಸೇರಿದಂತೆ 200ಕ್ಕೂ ಹೆಚ್ಚು ದೇಹ ಸಂಬಂಧಿ ಕಾಯಿಲೆಗಳಿಗೆ ಕುಸುಬಿ ಎಣ್ಣೆ, ಕುಸುಬಿ ಎಲೆ ಮತ್ತು ಕುಸುಬಿ ದಳಗಳು ಔಷಧಿಯಾಗಿ ಕೆಲಸ ಮಾಡಬಲ್ಲವು. ಇದನ್ನು ಈಗಾಗಲೇ ಕೃಷಿ ವಿಜ್ಞಾನಿಗಳು ಮತ್ತು ಆಯುರ್ವೇದ ತಜ್ಞರು ಜಂಟಿಯಾಗಿ ಅಧ್ಯಯನ ನಡೆಸಿ ಹೇಳಿದ್ದು, ಇದನ್ನೇ ಜನರಿಗೆ ತಿಳಿಸಿ, ಕುಸುಬಿ ಬೆಳೆ ಪ್ರೋತ್ಸಾಹಕ್ಕೆ ಕೃಷಿ ವಿಶ್ವವಿದ್ಯಾಲಯ ಸಜ್ಜಾಗಿದೆ.
ಪಾನೀಯಕ್ಕೆ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಇಲ್ಲಿನ ಕುಸುಬಿ ಬೆಳೆದ ರೈತರಿಗೆ ಉತ್ತಮ ಮಾರುಕಟ್ಟೆ ಲಭಿಸುತ್ತಿದೆ. ಇದೇ ಮಾದರಿಯನ್ನು ಉತ್ತರ ಕರ್ನಾಟಕದ ಕುಸುಬಿಗೂ ಅಳವಡಿಸಲು ಕೃಷಿ ವಿವಿ ಹೊಸ ಯೋಜನೆಯೊಂದನ್ನು ರೂಪಿಸುತ್ತಿದೆ. ಇದು ಯಶಸ್ವಿಯಾದರೆ ಉತ್ತರ ಕರ್ನಾಟಕದ ಬರಗಾಲ ಪೀಡಿತ ಪ್ರದೇಶದಲ್ಲಿ ಬೆಳೆಯುವ ಕುಸುಬಿಗೆ ಕನಿಷ್ಠ ಬೆಂಬಲ ಬೆಲೆ ಸಿಗಲು ಸಾಧ್ಯವಿದೆ ಎನ್ನುವುದು ಕೃಷಿ ವಿವಿ ಲೆಕ್ಕಾಚಾರ.
Related Articles
ಉದ್ಯಮಿಗಳನ್ನು ಕೂಡ ಕೃಷಿ ವಿವಿ ಹುಡುಕುತ್ತಿದೆ.
Advertisement
ಪರೀಕ್ಷೆಗೆ ಕೃಷಿ ವಿವಿ ಒಪ್ಪಂದ: ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಸುಬಿಯನ್ನು ಹೆಚ್ಚು ಬಳಕೆ ಮಾಡಬೇಕು ಎನ್ನುವುದಕ್ಕೆ ಒತ್ತು ಕೊಟ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಅದರ ಭಾಗವಾಗಿ ಜನ-ಜಾನುವಾರು-ಭೂಮಿ ಎನ್ನುವ ಹೊಸ ಪರಿಕಲ್ಪನೆಯನ್ನು ಆರಂಭಿಸಿದ್ದು, ಈ ಮೂರಕ್ಕೂ ಕುಸುಬಿಯಿಂದ ಆರೋಗ್ಯ ಹೇಗೆ ಲಭಿಸುತ್ತದೆ ಎಂಬುದನ್ನು ರೈತರ ಮನೆ ಮತ್ತು ಮನಕ್ಕೆ ತಟ್ಟುವಂತೆ ಮಾಡುತ್ತಿದೆ. ಇದರಲ್ಲಿನ ಔಷಧೀಯ ಗುಣ ಕುರಿತು ಅಧ್ಯಯನ ನಡೆಸಲು ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ. ಅಷ್ಟೇಯಲ್ಲ, ಕುಸುಬಿ ಉತ್ಪಾದನೆ ಕುಸಿಯಲು ಇರದಲ್ಲಿನ ಮುಳ್ಳು ಕಾರಣ. ಆದರೆ ಇದೀಗ ಯಂತ್ರಾಧಾರಿತವಾಗಿಯೇ ಕುಸುಬಿ ಬಿತ್ತಿ,ಬೆಳೆದು, ಒಕ್ಕನೆ ಮಾಡುವ ವಿನೂತನ ತಂತ್ರಜ್ಞಾನ ಕೂಡ ಧಾರವಾಡ ಕೃಷಿ ವಿವಿ ಸಂಶೋಧನೆ ಮಾಡಿದೆ.
ಹಿತ್ತಲ ಗಿಡಗಳು ಮದ್ದಲ್ಲ ಎಂದು ಸುಮ್ಮನಿದ್ದ ದೇಶದ ಕೃಷಿ ವಿಜ್ಞಾನಿಗಳಿಗೆ ಇದೀಗ ಕುಸುಬಿಯಂತಹ ದೇಶಿ ಬೆಳೆಯ ಮಹತ್ವ ಗೊತ್ತಾಗಿದೆ. ಮೆಡಿಟರೇನಿಯನ್ ಪ್ರದೇಶಕ್ಕೆ ಸೀಮತವಾಗಿದ್ದ ಆಲೀವ್ ಗಿಡದ ಉತ್ಪನ್ನ ಇಂದು ಜಗತ್ತಿನಾದ್ಯಂತ ಹೆಚ್ಚು ಜನರು ಔಷಧೀಯ ಕಾರ್ಯಕ್ಕೆ ಬಳಕೆ ಮಾಡುವ ಹಂತಕ್ಕೆ ಹೋಗಿದ್ದು ಆ ದೇಶದ ಉತ್ಪನ್ನವೊಂದರ ಮೌಲ್ಯವರ್ಧನೆಗೆ ಸಾಕ್ಷಿಯಾಗಿದೆ. ಇದೇ ಮಾದರಿಯಲ್ಲಿ ಕುಸುಬಿ ಕೊಂಡೊಯ್ಯುಬೇಕು ಎಂಬುದು ಧಾರವಾಡ ಕೃಷಿ ವಿವಿಯ ಕನಸು.
ಬಸವರಾಜ್ ಹೊಂಗಲ್