ಅಶೋಕ್‌ನಗರ: ಭಾರತದ ತೈಲದ ನಕ್ಷೆಯಲ್ಲಿ ಈಗ ಪಶ್ಚಿಮ ಬಂಗಾಳವೂ ಸ್ಥಾನ ಪಡೆದಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾನುವಾರ ಇಲ್ಲಿನ ನಾರ್ತ್ 24 ಪರಗಣಾಸ್ ಜಿಲ್ಲೆಯಲ್ಲಿ ತೈಲ ಮತ್ತು ಅನಿಲ ಉತ್ಪಾದನಾ ಕ್ಷೇತ್ರವನ್ನು ಲೋಕಾರ್ಪಣೆ ಮಾಡಿದ್ದಾರೆ.
ಕೋಲ್ಕತ್ತಾದಿಂದ 47 ಕಿ.ಮೀ. ದೂರದಲ್ಲಿ ಈ ಕ್ಷೇತ್ರವಿದ್ದು, ಇಲ್ಲಿಂದ ತೆಗೆದ ತೈಲವನ್ನು ಹಲ್ದಿಯಾದಲ್ಲಿರುವ ಭಾರತೀಯ ತೈಲ ನಿಗಮದ ಶುದ್ಧೀಕರಣಘಟಕಕ್ಕೆ ಕಲುಹಿಸಿಕೊಡುವ ಮೂಲಕ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಅಶೋಕ್ ನಗರ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಉತ್ಪಾದನೆ ಆರಂಭಿಸುವ ಮೂಲಕ ಪಶ್ಚಿಮ ಬಂಗಾಳವು ದೇಶದ ತೈಲ ಮ್ಯಾಪ್‌ನಲ್ಲಿ ಗುರುತಿಸಿಕೊಂಡಂತಾಗಿದೆ ಎಂದು ಸಚಿವ ಪ್ರಧಾನ್ ಹೇಳಿದ್ದಾರೆ.
ಮಹಾನದಿ-ಬಂಗಾಳ-ಅಂಡಮಾನ್ (ಎಂಬಿಎ) ಮುಖಜಭೂಮಿಯ ವ್ಯಾಪ್ತಿಯಲ್ಲಿ ಈ ತೈಲ ಕ್ಷೇತ್ರವಿರುವ ಕಾರಣ, ವಾಣಿಜ್ಯಿಕವಾಗಿ ಇದು ಬಹಳ ಲಾಭ ತಂದುಕೊಡಲಿದೆ. ಈ ತೈಲ ಕ್ಷೇತ್ರವನ್ನು ಆವಿಷ್ಕರಿಸಲು ಒಎನ್‌ಜಿಸಿ ಸಂಸ್ಥೆಯು 3,381 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
ಇದನ್ನೂ ಓದಿ:ನಡುರಸ್ತೆಯಲ್ಲಿ ಯುವತಿಯ ಮೇಲೆ ತಲವಾರು ದಾಳಿ ನಡೆಸಿದ ಹುಚ್ಚುಪ್ರೇಮಿ!
ಮುಂದಿನದಿನಗಳಲ್ಲಿಇನ್ನೂ2 ತೈಲಬಾವಿಗಳನ್ನು ತೆರೆಯಲಾಗುತ್ತದೆ ಎಂದೂ ಪ್ರಧಾನ್ ತಿಳಿಸಿದ್ದಾರೆ. ಅಲ್ಲದೆ,ಇಲ್ಲಿ ಸಿಗುತ್ತಿರುವಕಚ್ಚಾ ತೈಲವುಅತ್ಯುತ್ತಮ
ಗುಣಮಟ್ಟದ್ದಾಗಿದೆ ಎಂದಿರುವ ಸಚಿವರು, ಈ ತೈಲ ಕ್ಷೇತ್ರದಿಂದಾಗಿ ಪಶ್ಚಿಮ ಬಂಗಾಳದ ಆದಾಯವೂ ಹೆಚ್ಚಿ, ಇನ್ನಷ್ಟು ಉದ್ಯೋಗಾವಕಾಶವೂ ಸೃಷ್ಟಿಯಾಗಲಿದೆ ಎಂದಿದ್ದಾರೆ.