Advertisement
ಕಾರ್ಯಗಾರದಲ್ಲಿ ಕಾಳುಮೆಣಸು, ಬಾಳೆ, ಕಿತ್ತಳೆ ಮುಂತಾದ ತೋಟಗಾರಿಗೆ ಬೆಳೆ, ರೋಗ ನಿಯಂತ್ರಣ, ರೈತರಿಗೆ ಸರಕಾರದಿಂದ ಸಿಗುವ ಸೌಲಭ್ಯದ ಕುರಿತು ಸೋಮವಾರಪೇಟೆ ತೋಟಗಾರಿಕೆ ಇಲಾಖೆ ಅಧಿಕಾರಿ ಕಾವ್ಯ ಮಾಹಿತಿ ನೀಡಿ-ತೋಟಗಾರಿಕಾ ಬೆಳೆಗಲಾದ ಕಾಳುಮೆಣಸು, ಬಾಳೆ, ಅಡಿಕೆ ಸೇರಿದಂತೆ ಅಲ್ಪಾವಧಿ ಬೆಳೆಯಾದ ಶುಂಠಿ ಬೆಳೆಯುವುದ್ದರಿಂದ ರೈತರಿಗೆ ಲಾಭದಾಯಕವಾಗುತ್ತದೆ, ಆದರೆ ರೈತರು ಬೆಳೆಯ ನಿರ್ವಹಣೆಯನ್ನು ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ ಇದರಿಂದ ಹೆಚ್ಚಿನ ಇಳುವರಿ ಸಿಗುತ್ತದೆ ಎಂದರು. ಕಾಫಿತೋಟದ ಉಪ ಬೆಳೆಯಲ್ಲಿ ಒಂದಾದ ಕಾಳುಮೆಣಸು ಲಾಭದಾಯಕ ಬೆಳೆಯಾಗಿದೆ, ಆದರೆ ರೈತರು ಕಾಳುಮೆಣಸು ಬೆಳೆಗೆ ಔಷಧಿ ಸಿಂಪಡನೆ, ನೀರು ಹಾಯಿಸುವಿಕೆ ಸೇರಿದಂತೆ ಕಾಳುಮೆಣಸು ಬಳ್ಳಿಯನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡುತ್ತಿರುವುದ್ದರಿಂದ ಕಾಳೆಮೆನಸು ಬಳ್ಳಿಗೆ ರೋಗಗಳು ಬಂದು ಬೆಳೆ ಕುಂಟಿತಗೊಳ್ಳಲು ಕಾರಣವಾಗುತ್ತಿದೆ ಎಂದರು. ತೋಟಗಾರಿಕೆ ಇಲಾಖೆ ಕಾಳುಮೆಣಸು ಬೆಳೆಯಿಂದ ರೈತರಿಗೆ ಹೆಚ್ಚಿನ ಇಳುವರಿ ತೆಗೆಯಬೇಕೆಂಬ ಉದ್ದೇಶದಿಂದ ರೈತರಿಗಾಗಿ ಮಾಹಿತಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರು ವುದರ xಜಚಿ ಬಾಳೆ, ಅಡುಕೆ ಮುಂತಾದ ಬೆಳೆಗಳನ್ನು ಬೆಳೆಯುವ ಸಲುವಾಗಿ ಔಷಧ, ಸ್ಪಿಂಕ್ಲೆರ್, ಮುಂತಾದ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಿ ಪೋ›ತ್ಸಾಹಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ರೈತರು ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು ತೋಟದ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದು ಹೆಚ್ಚಿನ ಲಾಬಗಳಿಸುವಂತೆ ಸಲಹೆ ನೀಡಿದರು.
ಶನಿವಾರಸಂತೆ ಕಾಫಿ ಮಂಡಳಿಯ ಸಂಪರ್ಕಧಿಕಾರಿ ವಿಶ್ವನಾಥ್ ಮಾಹಿತಿ ನೀಡಿ-ಕಾಫಿ ಮಂಡಳಿಯಿಂದ ಬೆಳೆಗಾರರಿಗೆ 12ನೇ ಹಣಕಾಸು ಯೋಜನೆಯ ಮುಂದುವರೆದ ಭಾಗವಾಗಿ ಹೊಸದಾಗಿ ಕಾಫಿತೋಟ ಮಾಡಲು, ಕೆರೆ ನಿರ್ಮಿಸಲು ಮತ್ತು ಸ್ಪಿಂಕ್ಲರ್ ವ್ಯವಸ್ಥೆಗಾಗಿ ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು. ಕಾಫಿ ಬೆಳೆಗಾರರಿಗೆ ಕಾಫಿಬೋರರ್ ದೊಡ್ಡ ಸಮಸ್ಯೆಯಾಗಿದೆ, ಕಾಫಿ ಮಂಡಳಿ, ಮತ್ತು ವಿಜ್ಞಾನಿಗಳಿಂದ ಕಾಫಿಬೋರರ್ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಔಷಧಿ ಕಂಡುಹಿಡಿಯಲು ಸಾಧ್ಯವಾಗದಿದ್ದರೂ ರೋಗ ಬರುವುದಕ್ಕೆ ಮುಂಚೆ ಕಾಫಿ ಬೋರರ್ ಕೀಟವನ್ನು ನಿಯಂತ್ರಿಸಲು ಔಷಧಿ ಮಾರ್ಗೋಪಾಯಗಳನ್ನು ಕಂಡುಹಿಡಿದು ಇದರ ಬಗ್ಗೆ ರೈತರಿಗೆ ಕಾರ್ಯಗಾರಗಳಲ್ಲಿ ಮಾಹಿತಿ ನೀಡಲಾಗುತ್ತಿದೆ, ಈ ನಿಟ್ಟಿನಲ್ಲಿ ರೈತರು ಪ್ರಾರಂಭದಲ್ಲೆ ಮಾರ್ಗೋಪಾಯಗಳನ್ನು ಅನುಸರಿಸಿದರೆ ಈ ಸಮಸ್ಯೆ ನಿವಾರಣೆ ಯಾಗುತ್ತದೆ ಘಿಬೆಳೆಗಾರರು ಕಾಫಿ ಮಂಡಳಿಯಿಂದ ಸಿಗುವಂತಹ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.