Advertisement
ಬೆಳ್ತಂಗಡಿ: ಧರ್ಮದೇವತೆಗಳ ನೆಲೆ ಎಂದು ಪ್ರಸಿದ್ಧಿ ಪಡೆದಿರುವ ಧರ್ಮಸ್ಥಳದ ಧರ್ಮ ಪೀಠದಲ್ಲಿ ಮಾತನಾಡುವ ಮಂಜುನಾಥರೆಂದೇ ತಮ್ಮ ಋಜು ಬಾಳ್ವೆಯಿಂದಾಗಿ ಪ್ರಸಿದ್ಧರಾಗಿದ್ದ ಧರ್ಮಸ್ಥಳ ಮಂಜಯ್ಯ ಹೆಗ್ಗಡೆ ಅವರು 37 ವರ್ಷ ಧರ್ಮಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ಜನಮಾನಸದಲ್ಲಿ ಉಳಿದವರು.
ಕಾರ್ತಿಕ ಮಾಸದಲ್ಲಿ ಮಂಜುನಾಥ ಸ್ವಾಮಿಗೆ ಲಕ್ಷದೀಪೋತ್ಸವ ನಡೆಯುವುದು ವಾಡಿಕೆ. ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಸಾವಿರಾರು ಮಂದಿ ಆಗಮಿಸುತ್ತಾರೆ. 1933ರಲ್ಲಿ ಪ್ರಥಮ ಸರ್ವ ಧರ್ಮ, ಸಾಹಿತ್ಯ ಸಮ್ಮೇಳನ ಆಯೋಜಿಸಿ ಜನರಲ್ಲಿ ಸಾಹಿತ್ಯ ಮತ್ತು ಧರ್ಮಗಳ ಬಗ್ಗೆ ಆಸಕ್ತಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿದರು. ಈ ಸಮ್ಮೇಳನಗಳಲ್ಲಿ ಹಿರಿಯ ಸಾಹಿತಿಗಳು ಮತ್ತು ವಿವಿಧ ಧರ್ಮಗಳ ಪಂಡಿತರಿಂದ ಗೋಷ್ಠಿಗಳನ್ನು ಆಯೋಜಿಸುತ್ತಿದ್ದರು. ಮಂಜಯ್ಯ ಹೆಗ್ಗಡೆ ಅವರ ಈ ಪ್ರಯತ್ನವನ್ನು ಡಾ| ಶಿವರಾಮ ಕಾರಂತರು ಜ್ಞಾನೋತ್ಸವವೆಂದು ಕರೆದಿದ್ದರು.
Related Articles
Advertisement
ತುಳು ಕೃತಿಗಳು: ದೇವೇರ್, ಜೈನೇರ್, ಅಂದೇ ಸ್ವಾಮಿ ಪಾಪ-ಪುಣ್ಯೋ ಎಂಚಾ, ತುಳು ನಿತ್ಯವಿಧಿ.ಕನ್ನಡ ಕೃತಿಗಳು: ನನ್ನ ಕೌನ್ಸಿಲ್ ಮೆಂಬರಿಕೆ, ಬಾಹುಬಲಿ ಸ್ವಾಮಿ ಚರಿತೆ, ಶ್ರೀ ಕ್ಷೇತ್ರದ ಇತಿಹಾಸ, ಸಂಕ್ಷಿಪ್ತ ಪೂಜಾ ಸಂಗ್ರಹ, ಪಾಪ-ಪುಣ್ಯ, ಪಂಚಕಲ್ಯಾಣ, ಮೃತ್ಯುಂಜಯ. ಇಷ್ಟೇ ಅಲ್ಲದೆ ಮಂಜಯ್ಯ ಹೆಗ್ಗಡೆ ಅವರ ಬಿಡಿ ಲೇಖನಗಳು, ಭಾಷಣಗಳು, ಪತ್ರಗಳು, ಮುನ್ನುಡಿಗಳು ಪ್ರಕಟಗೊಂಡಿವೆ. ಕಲೋಪಾಸಕ
ಮಂಜಯ್ಯ ಹೆಗ್ಗಡೆ ಆಸಕ್ತಿ ಬಹುಮುಖವಾದುದು. ಅವರ ಪ್ರತಿಭೆ ಅನೇಕ ಮಾಧ್ಯಮಗಳಲ್ಲಿ ಅಭಿವ್ಯಕ್ತವಾಗಿವೆ. ಸಾಹಿತ್ಯ, ಸಂಗೀತ, ನಾಟಕ, ಯಕ್ಷಗಾನ, ಜಾನಪದ, ನೃತ್ಯ, ಛಾಯಾಚಿತ್ರ, ವರ್ಣಚಿತ್ರ, ಪುಸ್ತಕ ಸಂಗ್ರಹ ಮುಂತಾದವು ಅವರ ಹವ್ಯಾಸ. ಮಂಜಯ್ಯ ಹೆಗ್ಗಡೆ ಅವರು ಕಲೆಗಾಗಿ ತಮ್ಮನ್ನು ತಾವು ಪೂರ್ತಿಯಾಗಿ ಅರ್ಪಿಸದಿದ್ದರೂ ಅವರು ಆಗಿನ ಕಾಲದಲ್ಲಿ 32ಕ್ಕೂ ಅಧಿಕ ಅಭೂತಪೂರ್ವ ಚಿತ್ರಗಳನ್ನು ರಚಿಸಿದ್ದು, ಅವುಗಳಲ್ಲಿ 5 ಚಿತ್ರಗಳನ್ನು ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಈಗಿನ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಸಂಗ್ರಹಿಸಿಟ್ಟಿದ್ದಾರೆ. ಮೃತ್ಯುಂಜಯ ಹೆಸರಿನ ನಾಟಕ ಬರೆದಿದ್ದಾರೆ. ಧರ್ಮಸ್ಥಳ ಯಕ್ಷಗಾನ ಮೇಳಕ್ಕೆ ಹೊಸತನ, ಶಿಸ್ತು ತಂದುಕೊಟ್ಟ ಕೀರ್ತಿ ಇವರದು. ಶ್ರೇಷ್ಠ ಕಲಾವಿದರನ್ನು ಒಗ್ಗೂಡಿಸಿ ಯಕ್ಷಗಾನ ವೇಷ ಭೂಷಣದಲ್ಲಿ ಸುಧಾರಣೆ ತಂದಿದ್ದರು. ಶಿಕ್ಷಣದ ಮಹತ್ವ ಅರಿತು 1980ರಲ್ಲಿ ಉಜಿರೆಯಲ್ಲಿ ಸಿದ್ಧವನ ಗುರುಕುಲ ಸ್ಥಾಪನೆ, 1947ರಲ್ಲಿ ಉಜಿರೆಯಲ್ಲಿ ಪ್ರೌಢ ಶಿಕ್ಷಣಕ್ಕಾಗಿ ಕರ್ನಾಟಕ ವಿದ್ಯಾಲಯ ಸ್ಥಾಪಿಸಿದ್ದರು.