Advertisement
ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಬಾಹುಬಲಿ ಚರಿತೆ 3ಡಿ ಪ್ರೊಜೆಕ್ಷನ್ ಶೋವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಾಹುಬಲಿಯ ತ್ಯಾಗವನ್ನು ನೆನಪಿಸುವಂತೆ ಇಂತಹ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸ ಲಾಗುತ್ತದೆ. ನಮ್ಮ ಯೋಚನೆ, ಪ್ರೀತಿಯೂ ಅಷ್ಟೇ ಎತ್ತರಕ್ಕೆ ಬೆಳೆಯ ಬೇಕಿದೆ ಎಂದರು.
Related Articles
Advertisement
ಆಕರ್ಷಕ 3ಡಿ ಶೋಬಾಹುಬಲಿಯ ಚರಿತ್ರೆಯನ್ನೊಳಗೊಂಡ ಧ್ವನಿ ಹಾಗೂ ಬೆಳಕಿನ 3ಡಿ ಪೊ›ಜೆಕ್ಷನ್ ಶೋ ಅತ್ಯಂತ ಆಕರ್ಷಕವಾಗಿ ಮೂಡಿ ಬಂತು. ಕ್ಷೇತ್ರದ ಶ್ರೇಯಸ್ ಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಸಂಸ್ಥೆ ಇದನ್ನು ನಿರ್ಮಾಣಗೊಳಿಸಿದ್ದು, ಬಾಹುಬಲಿಯ ವಿಗ್ರಹದ ಮೇಲೆಯೇ 17 ನಿಮಿಷಗಳ ಫೆ. 18ರ ವರೆಗೆ ಪ್ರತಿದಿನ ರಾತ್ರಿ 7ರಿಂದ ಮೂರು ಶೋ ಪ್ರದರ್ಶನಗೊಳ್ಳಲಿದೆ. ಇಂದು ಕ್ಷುಲ್ಲಕ ದೀಕ್ಷೆ
ಬೆಳ್ತಂಗಡಿ: ಮಹಾಮಸ್ತಕಾಭಿಷೇಕದ 2ನೇ ದಿನವಾದ ಫೆ. 10ರಂದು ಬೆಳಗ್ಗೆ 8ಕ್ಕೆ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಆಚಾರ್ಯ ಶ್ರೀ 108 ಪುಷ್ಪ ದಂತಸಾಗರ ಮುನಿಮಹಾರಾಜರಿಂದ ಶ್ರೀ ಸತೀಶ್ ಜೀ ಬೈಯಾಜಿ, ಶ್ರೀ ಪೂರನ್ ಬೈಯ್ನಾಜಿ ಹಾಗೂ ಶ್ರೀಪ್ರಭು ಬೈಯ್ನಾಜಿ ಅವರಿಗೆ ಕ್ಷುಲ್ಲಕ ದೀಕ್ಷಾ ಮಹಾಮಹೋತ್ಸವ ನೆರವೇರಲಿದೆ. ಸಂಜೆ 4ಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಜನ ಮಂಗಲ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ರಾಜ್ಯ ವಸತಿ ಸಚಿವ ಎನ್. ನಾಗರಾಜು ಉದ್ಘಾಟಿಸಲಿದ್ದು, ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ವಿತರಿಸಲಿದ್ದಾರೆ. ಅತಿಥಿಗಳಾಗಿ ರಾಜ್ಯ ಗೃಹ ಸಚಿವ ಎಂ.ಬಿ. ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಹರೀಶ್ ಪೂಂಜ, ಜಿ.ಪಂ.ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ.ಸದಸ್ಯೆ ಧನಲಕ್ಷ್ಮೀ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 7ಕ್ಕೆ ಚಿತ್ರರಂಗದ ಪ್ರಸಿದ್ಧ ಗಾಯಕರಿಂದ ಗಾನ ತರಂಗ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮ ಫೆ. 10ರಂದು ಬಾಹುಬಲಿ ಬೆಟ್ಟದಲ್ಲಿ ಬೆಳಗ್ಗೆ 8ಕ್ಕೆ ನಿತ್ಯವಿಧಿ ಸಹಿತ ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ, ದಿಕಾ³ಲಕ ಬಲಿ, ಯಜ್ಞ ಶಾಲೆಯಲ್ಲಿ ಯûಾರಾಧನೆ ಪೂರ್ವಕ ಯಕ್ಷ ಪ್ರತಿಷ್ಠೆ, ಮಧ್ಯಾಹ್ನ 12.35ಕ್ಕೆ ಧ್ವಜಾರೋಹಣ ವಿಧಿ, 54 ಕಲಶಗಳಿಂದ ಪಾದಾಭಿಷೇಕ, ಅಪರಾಹ್ನ 3ರಿಂದ ಶ್ರೀ ಪೀಠ ಯಂತ್ರಾರಾಧನೆ, ಸಂಜೆ ಭೇರಿತಾಡನ, ಧ್ವಜಪೂಜೆ, ಶ್ರೀ ಬಲಿವಿಧಾನ, ಮಹಾಮಂಗಳಾರತಿ ನಡೆಯಲಿದೆ.