Advertisement

ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ

11:07 PM Nov 25, 2019 | Lakshmi GovindaRaj |

ಬೆಳ್ತಂಗಡಿ: ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಬೆಳಗುವ ಲಕ್ಷ ಲಕ್ಷ ದೀಪಗಳಂತೆ ನಮ್ಮ ಅಂತರಾಳದಲ್ಲಿ ಸಂಸ್ಕಾರವೆಂಬ ಜ್ಯೋತಿ ಪ್ರಜ್ವಲಿಸಿ ತನಗೆ ಮತ್ತು ಸಮಾಜಕ್ಕೆ ಒಳಿತನ್ನು ಬಯಸುವುದೇ ಜೀವನ ಸಿದ್ಧಾಂತವಾಗಬೇಕು ಎಂದು ನಿಕಟಪೂರ್ವ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್‌ ಆಶಿಸಿದರು.

Advertisement

ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾಭವನದಲ್ಲಿ ಸೋಮವಾರ ನಡೆದ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮ ಮತ್ತು ಕರ್ತವ್ಯದಲ್ಲಿ ನಿವೃತ್ತಿ ಎಂಬುದಿಲ್ಲ. ನಮಗಾಗಿ ಮಾತ್ರವಲ್ಲದೆ ಸಮಾಜಕ್ಕಾಗಿಯೂ ಕಾರ್ಯ ನಿರ್ವಹಿಸುವ ತಣ್ತೀವನ್ನು ಧರ್ಮ ಪ್ರತಿಪಾದಿಸುತ್ತದೆ. ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಿಂದ ತಾನು ಮಾತ್ರವಲ್ಲದೆ ಇನ್ನೊಬ್ಬನನ್ನೂ ಪರಿರ್ವತಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಇಸ್ಕಾನ್‌ನ ಹಿರಿಯ ವಿದ್ವಾಂಸ ಗೌರ್‌ ಗೋಪಾಲದಾಸ್‌ ಮಾತನಾಡಿ, ಭಾರತ 4-ಎಸ್‌ (ಸ್ಮಾರ್ಟ್‌, ಸೇವಿಂಗ್‌, ಸ್ಪೆಂಡಿಂಗ್‌)ಗಳು ಒಳಗೊಂಡು, ವೈವಿಧ್ಯಕ್ಕೆ ಹೆಸರಾದ ಸ್ಪಿರಿಚ್ಯುವಾಲಿಟಿ- ಆಧ್ಯಾತ್ಮಿಕತೆಯ ಮೂಲಕ ಗುರುತಿಸಿ ಕೊಂಡಿದೆ ಎಂದು ಬಣ್ಣಿಸಿದರು. ಜೀವನ ಮತ್ತು ಧರ್ಮದ ವಿಚಾರವಾಗಿ ಮೈಸೂರಿನ ಫೋಕಸ್‌ ಅಕಾಡೆಮಿಯ ಸಿಇಒ ಡಿ.ಟಿ. ರಾಮಾನುಜಮ್‌, ರಾಜಕೀಯ ಮತ್ತು ಭಾರತೀಯದ ಕುರಿತು ಮಂಗಳೂರಿನ ಕದ್ರಿ ನವನೀತ ಶೆಟ್ಟಿ, ಮಹಾತ್ಮಾ ಗಾಂಧೀಜಿ ಕುರಿತು ಸಾಹಿತಿ ಬೊಳುವಾರ್‌ ಮಹಮ್ಮದ್‌ ಕುಂಞಿ ಮಾತನಾಡಿದರು.

ತ್ರಿವೇಣಿ ಸಂಗಮ ಸಂಭ್ರಮ: ಕಾರ್ತಿಕ ಮಾಸದ ಲಕ್ಷ ದೀಪೋತ್ಸವ, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನ ಹಾಗೂ ಸರ್ವಧರ್ಮ ಸಮ್ಮೇಳನ -ಈ ತ್ರಿವೇಣಿ ಸಂಗಮ ಧರ್ಮಸ್ಥಳದಲ್ಲಿ ಸೋಮವಾರ ಅತ್ಯಪರೂಪದ ವಿಶೇಷವಾಗಿತ್ತು. ಆಪ್ತರು ಮತ್ತು ಅಭಿಮಾನಿಗಳು ಡಾ| ಹೆಗ್ಗಡೆಯವರಿಗೆ ಫಲಪುಷ್ಪ ಅರ್ಪಿಸಿ ಶ್ರದ್ಧಾಭಕ್ತಿಯಿಂದ ಜನ್ಮದಿನದ ಶುಭಾಶಯ ಕೋರಿದರು. ಬೆಳ್ತಂಗಡಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್‌ ಮುಕ್ಕುಯಿ ಅವರು ಹೆಗ್ಗಡೆಯವರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next