Advertisement

Dharmasthala: ಡಾ| ಹೆಗ್ಗಡೆಯನ್ನು ಭೇಟಿಯಾದ ಯುನಿಸೆಫ್‌ ತಂಡ

11:21 PM Nov 27, 2024 | Team Udayavani |

ಬೆಳ್ತಂಗಡಿ: ಯುನಿಸೆಫ್‌ನ ಹೈದರಾಬಾದ್‌ ಫೀಲ್ಡ್‌ ಆಫೀಸ್‌ ಮುಖ್ಯಸ್ಥ ಡಾ| ಝೆಲಾಲೆಮ್‌ ಬಿರಹಾನು ಟಾಪ್ಸಿ ನೇತೃತ್ವದ ತಂಡ ಧರ್ಮಸ್ಥಳದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ, ಕರ್ನಾಟಕ ರಾಜ್ಯದಲ್ಲಿ, ಅದ ರಲ್ಲೂ ವಿಶೇಷ‌ವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳಿಗೆ ಕಾಡುತ್ತಿರುವ ಗಂಭೀರ ಸಮಸ್ಯೆಗಳಾದ ಬೆಳವಣಿಗೆ, ಅಪೌಷ್ಟಿಕತೆ, ಬಾಲ್ಯ ವಿವಾಹ ಸಮಸ್ಯೆ ಮತ್ತು ಸ್ವಚ್ಛತೆ ಹಾಗೂ ನೈರ್ಮಲ್ಯ ಹೋಗ ಲಾಡಿಸುವ ಮಹತ್ತರ ಹೆಜ್ಜೆಯೆಡೆಗೆ ಚರ್ಚಿಸಿತು.

Advertisement

ಯುನಿಸೆಫ್‌ ಹೈದರಾಬಾದ್‌ ಫೀಲ್ಡ್‌ ಆಫೀಸ್‌ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಮಕ್ಕಳನ್ನು ಕೇಂದ್ರೀಕರಿಸಿ ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯೋಜನೆಯನ್ನು ರೂಪಿ ಸಿದೆ. ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರ ಬಹಳ ಮಹತ್ವವಾಗಿದ್ದು, ಅವರನ್ನು ಉತ್ತಮ ಪೋಷ‌ಕರನ್ನಾಗಿಸಲು ಮತ್ತು ಮಕ್ಕಳನ್ನು ಸಾಮಾಜಿಕ ಹಾಗೂ ಮತ್ತು ಉತ್ತಮ ವ್ಯಕ್ತಿತ್ವ ರೂಪಿಸುವ ಸಲುವಾಗಿ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಡಾ| ಟಾಪ್ಸಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈ ಕಾರ್ಯಕ್ರಮವನ್ನು ಸ್ವೀಕರಿಸಿದ್ದು, ರಾಜ್ಯಾದ್ಯಂತ ಯಶಸ್ವಿ ಯಾಗಿ ಅನುಷ್ಠಾನಗೊಳಿಸಲು ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸಿದೆ. ಈ ಸಹಯೋಗವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಯುನಿಸೆಫ್‌ ನಡುವಿನಜತೆಗೂಡಿ ನೀರು ಉಳಿಸಿ ಕಾರ್ಯಕ್ರಮವ ನ್ನು ಮುಂದಿನ ದಿನಗಳಲ್ಲಿ ರಾಜ್ಯದ 14 ಬರಪೀಡಿತ ಜಿಲ್ಲೆಗಳಲ್ಲಿ ಪ್ರಥಮ ಹಂತದಲ್ಲಿ ಯಶಸ್ವಿಯಾಗಿ ಅನುಷ್ಠಾನ ಗೊಳಿಸಲು ಚಿಂತಿಸಿದ್ದು, ಮುಂದೆ ರಾಜ್ಯಾದ್ಯಂತ ವಿಸ್ತರಿಸಲು ಯೋಜಿಸಿದೆ.

ಸಭೆಯಲ್ಲಿ ಎಸ್‌ ಕೆಡಿಆರ್‌ ಡಿಪಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್‌ ಕುಮಾರ್‌ ಎಸ್‌.ಎಸ್‌., ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಯುನಿಸೆಫ್‌ ಎಚ್‌.ಎಫ್‌.ಒ. ವಾಶ್‌ ಸ್ಪೆಷ‌ಲಿಸ್ಟ್‌ ವೆಂಕಟೇಶ ಅರಳಿಕಟ್ಟಿ, ತಜ್ಞ ಡಾ| ಮಟ್ಪಾಡಿ ಪ್ರಭಾತ್‌ ಕಲ್ಕೂರ, ವಸಂತ್‌, ಜಗದೀಶ್‌ ಹಾಗೂ ನಿಖಿಲೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next