Advertisement

ಧರ್ಮಸ್ಥಳದ ಧರ್ಮಾಧಿಕಾರಿ ಕಾರ್ಯ ಮಾದರಿ

10:35 AM Oct 25, 2021 | Team Udayavani |

ಕಲಬುರಗಿ: ಸಮಾಜದ ಜನತೆಗೆ ಧಾರ್ಮಿಕ ಬೋಧನೆ ಜೊತೆಗೆ ಸಮಾಜಮುಖೀ ಕಾರ್ಯಗಳಿಗೆ ಪ್ರೇರೇಪಿಸುವ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ| ವೀರೇಂದ್ರ ಹೆಗ್ಗಡೆ ಅವರ ಸೇವೆ ಯುವ ಜನತೆಗೆ ಮಾದರಿಯಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಹೇಳಿದರು.

Advertisement

ಕಲಬುರಗಿ ಜಿಲ್ಲಾ ಜೈನ ಸಮಾಜ ಹಾಗೂ ಭಾರತೀಯ ಜೈನ ಮಿಲನ್‌ ಜಿಲ್ಲಾ ಶಾಖೆ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ| ವೀರೇಂದ್ರ ಹೆಗ್ಗಡೆ ಅವರ 54ನೇ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ನಗರದ ಗಾಜೀಪೂರ ಬಡಾವಣೆಯ ಶ್ರೀ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಆಯೋಜಿಸಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧರ್ಮಸ್ಥಳ ಮೂಲ ಕೇಂದ್ರವನ್ನಾಗಿಸಿಕೊಂಡು ಅನ್ನ, ಅಕ್ಷರ, ಅರಿವು, ಆಶ್ರಯ, ಔಷಧಿ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ವಿಶ್ವದ ಜನತೆ ಗೌರವಕ್ಕೆ ಪಾತ್ರರಾಗಿರುವ ಹೆಗ್ಗಡೆ ಅವರು ಧರ್ಮಸ್ಥಳದ ಸಂಸ್ಥೆಯ ಮೂಲಕ ನಾಡಿನ ರೈತರ ಬದುಕು ಹಸನು ಮಾಡಲು, ಕೆರೆಗಳ ಹೂಳೆತ್ತುವ ಮೂಲಕ ನೀರು ಸಂಗ್ರಹಿಸಿ ಜಲವೃದ್ಧಿಗೆ ಕಾರಣರಾಗಿದ್ದಾರೆ. ಇಂತಹ ಪುಣ್ಯ ಪುರುಷರನ್ನು ಪಡೆದ ನಾವೆಲ್ಲರೂ ಧನ್ಯರೆಂದರು.

ಇದನ್ನೂ ಓದಿ: ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

ಮಹಿಳೆಯ ಆರ್ಥಿಕ ಸ್ವಾವಲಂಬನೆಗಾಗಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಹೊಸ ಕ್ರಾಂತಿ ಮಾಡಿದ್ದಾರೆಂದು ರೇವೂರ ಹರ್ಷ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಜೈನ್‌ ಸಮಾಜದ ಅಧ್ಯಕ್ಷ ನಾಗನಾಥ ಚಿಂದೆ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಪ್ಪು ಕಣಕಿ, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಸುರೇಶ ತಂಗಾ, ಜೈನ ಸಮಾಜದ ಹಿರಿಯರಾದ ದೀಪಕ ಪಂಡಿತ, ಭಾರತೀಯ ಜೈನ ಮಿಲನ್‌ ಅಧ್ಯಕ್ಷ ರಾಜೇಂದ್ರ ಕುಣಚಗಿ ವೇದಿಕೆ ಮೇಲಿದ್ದರು. ರಮೇಶ ಬೆಳಕೇರಿ ಸ್ವಾಗತಿಸಿದರು, ನಾಗಲಿಂಗಯ್ಯ ಮಠಪತಿ ನಿರೂಪಿಸಿದರು, ವಿನೋದ ಬಬಲಾದ ವಂದಿಸಿದರು. 54 ಮುತ್ತೈದೆಯರಿಗೆ ಸಮಾರಂಭದಲ್ಲಿ ಉಡಿ ತುಂಬಲಾಯಿತು. ಶ್ರೇಣಿಕ್‌ ಡೊಳ್ಳೆ, ಬಂಡುಕುಮಾರ ಕುಣಚಗಿ, ಭರಮ ಜಗಶೆಟ್ಟಿ, ವಿನೋದ ಪಾಟೀಲ, ಪಾರ್ಶ್ವನಾಥ ಚಿಂದೆ, ಪ್ರಕಾಶ ಜೈನ್‌, ರಾಜಕುಮಾರ ಕಿವಡೆ, ಅನಿಲ ಭಸ್ಮೆ, ನಯನ ಚಿಂದೆ ಹಾಗೂ ಸಮಾಜದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next