Advertisement

ಧರ್ಮಸ್ಥಳ: ಮುನಿ ಸಂಘ ಪುರ ಪ್ರವೇಶ

12:36 PM Jan 06, 2018 | Team Udayavani |

ಬೆಳ್ತಂಗಡಿ: ಧರ್ಮಸ್ಥಳಕ್ಕೆ ಗುರುವಾರ ಸಂಜೆ ಮುನಿ ಸಂಘ ಪುರ ಪ್ರವೇಶ ಮಾಡಿದಾಗ ಪ್ರವೇಶ ದ್ವಾರದ ಬಳಿ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ ಕೋರಲಾಯಿತು. ಮುನಿ ಸಂಘದಲ್ಲಿ ಆಚಾರ್ಯ 108 ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು, ಶ್ರೀ 108 ಮುನಿಶ್ರೀ ಪ್ರಮುಖ್‌ ಸಾಗರ ಮುನಿ ಮಹಾರಾಜರು, 108 ಶ್ರೀ ಮುನಿಶ್ರೀ ಪ್ರಸಂಗ ಸಾಗರ ಮಹಾರಾಜರು, ಶ್ರೀ ಅಮಿತಸೇನ್‌ ಮತ್ತು ಶ್ರೀ ವೃಷಭಸೇನ್‌ ಇದ್ದರು.

Advertisement

ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ದೇವರ ದರ್ಶನ ಮಾಡಿದ ಬಳಿಕ ಆಚಾರ್ಯ 108 ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮಂಗಳ ಪ್ರವಚನ ನೀಡಿದರು. ಬಸದಿಯಲ್ಲಿ ವಿಶೇಷ ದೈವಿಕ ಶಕ್ತಿ ಜಾಗೃತವಾಗಿದ್ದು, ದೇವರ ದರ್ಶನದಿಂದ ತಮಗೆ ಅತೀವ ಆನಂದವಾಗಿದೆ ಎಂದು ಮುನಿಗಳು ಹೇಳಿದರು. 

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳದ ಸೇವಾ ಕಾರ್ಯಗಳು, ಶಿಸ್ತು, ಸ್ವತ್ಛತೆ ಮತ್ತು ದಕ್ಷತೆ ವಿಶ್ವಮಾನ್ಯವಾಗಿದೆ. ಹೆಗ್ಗಡೆ ಅವರು ಕರ್ನಾಟಕದಲ್ಲಿಯೇ ವಿಶಿಷ್ಟ ವ್ಯಕ್ತಿತ್ವ ಹೊಂದಿದ ಆದರ್ಶ ನೇತಾರರಾಗಿದ್ದಾರೆ ಎಂದರು. ಮುನಿ ಸಂಘವನ್ನು ಸ್ವಾಗತಿಸಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮುನಿಗಳ ದರ್ಶನದಿಂದ ಎಲ್ಲರಿಗೂ ಪುಣ್ಯ ಸಂಚಯವಾಗಿದೆ. ಮುನಿ ಸಂಘದ ಸೇವೆಗೆ ನಾವೆಲ್ಲರೂ ಉತ್ಸುಕರಾಗಿದ್ದು, ಇಂದು ಐತಿಹಾಸಿಕ ದಿನವಾಗಿದೆ ಎಂದರು.

ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಡಿ. ಹರ್ಷೇನ್ದ್ರ ಕುಮಾರ್‌, ಸುಪ್ರಿಯಾ ಹರ್ಷೇನ್ದ್ರ ಕುಮಾರ್‌, ಪ್ರೊ| ಎಸ್‌. ಪ್ರಭಾಕರ್‌ ಮತ್ತು ಡಾ| ಬಿ. ಯಶೋವರ್ಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next