Advertisement

“ತಲ್ವಾರ್‌’ಹಿಡಿದ ಧರ್ಮ ಕೀರ್ತಿರಾಜ್‌

08:54 AM Sep 24, 2019 | Lakshmi GovindaRaju |

ಕನ್ನಡ ಚಿತ್ರರಂಗದ ಚಾಕೋಲೆಟ್‌ ಹೀರೋಗಳ ಪಟ್ಟಿಯಲ್ಲಿ ಗುರುತಿಸಿಕೊಂಡವರಲ್ಲಿ ನಟ ಧರ್ಮ ಕೀರ್ತಿರಾಜ್‌ ಕೂಡ ಒಬ್ಬರು. ಧರ್ಮ ಕೀರ್ತಿರಾಜ್‌ ಇಲ್ಲಿಯವರೆಗೆ ಅಭಿನಯಿಸಿದ್ದ ಬಹುತೇಕ ಚಿತ್ರಗಳಲ್ಲಿ ಲವರ್‌ ಬಾಯ್‌ ಲುಕ್‌, ಕಾಲೇಜ್‌ ಹುಡುಗನ ಲುಕ್‌ ಹೆಚ್ಚಾಗಿ ಇದ್ದಿದ್ದರಿಂದ ಪ್ರೇಕ್ಷಕರು ಕೂಡ ತುಂಬ ಸಲೀಸಲಾಗಿ ಇವರನ್ನ ಸಾಫ್ಟ್ ಹೀರೋ, ಚಾಕೋಲೆಟ್‌ ಹೀರೋ ಅಂತಾನೇ ಕರೆಯೋದಕ್ಕೆ ಶುರು ಮಾಡಿದ್ದರು.

Advertisement

ಆದರೆ ಈ ಇಮೇಜ್‌ನಿಂದ ಹೊರಬರಲು ಸಾಕಷ್ಟು ಕಸರತ್ತು ನಡೆಸುತ್ತಿರುವ ಧರ್ಮ, ಇತ್ತೀಚೆಗೆ ಮಾಮೂಲಿ ಲವ್‌, ಸೆಂಟಿಮೆಂಟ್‌ ಚಿತ್ರಗಳಿಗಿಂತ ಹೆಚ್ಚಾಗಿ ಆ್ಯಕ್ಷನ್‌ ಚಿತ್ರಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದರ ಪರೀಕ್ಷಾರ್ಥ ಪ್ರಯೋಗವಾಗಿ, ಈ ವರ್ಷದ ಆರಂಭದಲ್ಲಿ ಧರ್ಮ ಕೀರ್ತಿರಾಜ್‌ ಮೊದಲ ಬಾರಿಗೆ ಆ್ಯಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ “ಚಾಣಾಕ್ಷ’ ಚಿತ್ರ ತೆರೆಗೆ ಬಂದಿತ್ತು.

ಈಗ ಇದರ ಮುಂದುವರೆದ ಭಾಗವಾಗಿ, ಧರ್ಮ ರಗಡ್‌ ಲುಕ್‌ನಲ್ಲಿ “ತಲ್ವಾರ್‌’ ಹಿಡಿಯೋದಕ್ಕೆ ರೆಡಿಯಾಗಿದ್ದಾರೆ. ಹೌದು, ಧರ್ಮ ಕೀರ್ತಿರಾಜ್‌ ಅಭಿನಯಿಸುತ್ತಿರುವ ಹೊಸಚಿತ್ರ “ತಲ್ವಾರ್‌’ ಸೆಟ್ಟೇರಿದೆ. ಇತ್ತೀಚೆಗೆ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ “ತಲ್ವಾರ್‌’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಮುಮ್ತಾಜ್‌ ಮುರಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ತಲ್ವಾರ್‌’ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ಗೆ ನಾಯಕಿಯಾಗಿ ಅದಿತಿ ಜೋಡಿಯಾಗಿದ್ದಾರೆ. “ಟಚ್‌ ಸ್ಟೋನ್‌ ಪಿಕ್ಚರ್’ ಬ್ಯಾನರ್‌ನಲ್ಲಿ ಸುರೇಶ್‌ ಬಿ. ವೈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣದಲ್ಲಿ ನಿರತವಾಗಿರುವ “ತಲ್ವಾರ್‌’ ಮುಂದಿನ ವರ್ಷದ ಆರಂಭದಲ್ಲಿ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next