Advertisement
ಸಂಕ್ರಮಣ ಹಬ್ಬವೆಂದರೆ ಅಡುಗೆ ಮಾಡಿ ಊಟ ಮಾಡುವುದಲ್ಲ. ಪರಸ್ಪರ ಪ್ರೀತಿ ಹಂಚಿಕೆ, ಸಂಬಂಧ ಗಟ್ಟಿಗೊಳಿಸುವಿಕೆ ಸೇರಿದಂತೆ ಜೀವನದೊಂದಿಗೆ ಹೊಂದಿಕೊಂಡಿರುವ ಹಬ್ಬಗಳ ಮಹತ್ವವೇನು ಎಂಬುದನ್ನು ಈ ಕಾರ್ಯಕ್ರಮ ಮನವರಿಕೆ ಮಾಡಿಕೊಟ್ಟಿತು. ಜಾನಪದ ಸಂಶೋಧನ ಕೇಂದ್ರ ಹಾಗೂ ಅಕ್ಕನ ಬಳಗದಿಂದ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮಹಿಳಾಮಣಿಗಳು ಗಮನ ಸೆಳೆದರು.
Related Articles
Advertisement
ಈ ಬಾರಿ ವಿಶೇಷ ಅತಿಥಿಗಳಾಗಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಹೇಮಾ ಪಟ್ಟಣಶೆಟ್ಟಿ ಆಗಮಿಸಿದ್ದರು. ಬಸಲಿಂಗಯ್ಯನ ಹಾಡು ಕೇಳಿದ್ರ, ಹುಕ್ಕೇರಿ ಬಾಳಪ್ಪನ್ನ ನೋಡಿದಂಗ್ ಆಕೈತಿ. ಬಾಳಪ್ಪನೊಂದಿಗೆ ಗೀತೇಶ್ವರಿ ಇದ್ದರ, ಇವರೊಂದಿಗೆ ವಿಶ್ವೇಶ್ವರಿ ಇದ್ದಾರ. ಧಾರವಾಡದೊಳಗ ಇಂತಹ ಅದ್ಭುತ ಗಾಯಕ ಇದ್ದಿರುವುದು ನಾವೆಲ್ಲಾ ಸಂಭ್ರಮ ಪಡಬೇಕು ಎಂದು ಗ್ರಾಮೀಣ ಭಾಷೆಯಲ್ಲಿಯೇಹೇಳುತ್ತ ಸಂಕ್ರಮಣದ ಹಬ್ಬಕ್ಕೆ ಪಟ್ಟಣಶೆಟ್ಟಿ ಅವರು ಚಾಲನೆ ನೀಡಿದರು.
ಒಬ್ಬರಿಗೊಬ್ಬರು ಎಳ್ಳು-ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಷಯಗಳನ್ನು ಹೇಳಿದರು. ಲೀಲಾವತಿ ಕಳಸಪ್ಪನವರ, ಪ್ರಭಾ ನೀಲರಗಿ, ಕೈರುನ್ನಿಸಾ, ಜಯಶ್ರೀ ಗೌಳಿಯವರ, ಕಲಾವತಿ ಹೂಗಾರ, ಶೋಭಾ ದೇಶಪಾಂಡೆ, ಆಶಾ ಸೈಯದ, ಭಾರತಿ ಪರ್ವತೀಕರ, ಸುಜಾತಾ ಹಡಗಲಿ, ಸರಸ್ವತಿ ಭೋಸಲೆ, ಇಂದಿರಾ ಜಾತಿಕರ್ತ, ನೀಲಾ ಶಿಗ್ಲಿ, ಪ್ರಭಾ ಶಹಾಪುರ, ಮುಕ್ತಾ ಸೌದಿ, ಗೌರಮ್ಮ ನ್ಯಾಮತಿ, ಮಹಾಲಕ್ಷ್ಮೀ ಪೂಜಾರ, ಗಿರಿಜಾ ಚಿಕ್ಕಮಠ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಾದ ಸಾವಿತ್ರಿ ಕಡಿ, ಮಂಜುಳಾ, ಕವಿತಾ ಇನ್ನಿತರರಿದ್ದರು.
ರಂಗಾಯಣದ ಬಯಲಿನಲ್ಲಿ ಸಂಕ್ರಮಣಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ನೇತೃತ್ವದ ಜಾನಪದ ಸಂಶೋಧನಾ ಕೇಂದ್ರವು ಪ್ರತಿ ವರ್ಷ ಸಂಕ್ರಮಣ ಹಬ್ಬದ ಆಚರಣೆಯ ಮಹತ್ವವನ್ನು ಹಾಡು ಹಾಗೂ ನೃತ್ಯಗಳ ಮೂಲಕ ಅದ್ಭುತವಾಗಿ ಕಟ್ಟಿಕೊಡುತ್ತಿದೆ. ಕಳೆದ ಎರಡು ವರ್ಷಗಳ ಕಾಲ ಬೇಂದ್ರೆ ಅಜ್ಜನ ಬಾರೋ ಸಾಧನಕೇರಿ ಉದ್ಯಾನವನದಲ್ಲಿ ಅರ್ಥಪೂರ್ಣವಾಗಿ ಆಚರಣೆಯಾಗಿದ್ದ ಸಂಕ್ರಮಣ, ಕಳೆದ ವರ್ಷ ಜೆಎಸ್ಸೆಸ್ ಕಾಲೇಜು ಹಿಂಬದಿಯ ಮೈಲಾರಲಿಂಗ ಗುಡ್ಡದ ಮೇಲೆ ಯಶಸ್ವಿಯಾಗಿತ್ತು. ಇದೀಗ ರಂಗಾಯಣದ ಬಯಲಿನಲ್ಲಿ ನಡೆದ ಸಂಕ್ರಮಣ ಮತ್ತಷ್ಟು ಅರ್ಥಪೂರ್ಣವಾಗಿತ್ತು. ದೀಪಾವಳಿ, ಯುಗಾದಿ, ಸಂಕ್ರಮಣದಂತಹ ಪ್ರಮುಖ ಹಬ್ಬಗಳೇ ಇಂದಿನ ದಿನಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಯಾವ ಹಬ್ಬದಲ್ಲಿ ಏನು ಆಚರಣೆ ಮಾಡಬೇಕೆಂದು ಈಗಿನವರಿಗೆ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಾನಪದ ಸಂಶೋಧನಾ ಸಂಸ್ಥೆಯು ಪ್ರತಿ ವರ್ಷ ಸಂಕ್ರಮಣ ಹಬ್ಬದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಎಲ್ಲರೂ ಕೂಡಿ ಸಂಕ್ರಮಣ ಆಚರಿಸುತ್ತೇವೆ. ಊಟವನ್ನು ಕೂಡಿಯೇ ಮಾಡುತ್ತೇವೆ.
• ವಿಶ್ವೇಶ್ವರಿ ಹಿರೇಮಠ,
ಜಾನಪದ ಕಲಾವಿದೆ