Advertisement
ಅತಿಥಿಯಾಗಿದ್ದ ರೈತ-ಕೃಷಿ ಕಾರ್ಮಿಕರ ಸಂಘಟನೆ ರಾಜ್ಯಾಧ್ಯಕ್ಷ ಡಾ| ಟಿ. ಸುನಿತ್ ಕುಮಾರ ಮಾತನಾಡಿ, ಆಳುವ ಸರ್ಕಾರಗಳು ಹಾಗೂ ವ್ಯವಸ್ಥೆಯ ಒಲವು ಮತ್ತು ಹಿತಾಸಕ್ತಿ ಬಂಡವಾಳಗಾರರ ಪರವಾಗಿದೆ ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಿದೆ. ಪಕ್ಷಗಳನ್ನು ಬದಲಿಸುವುದರಿಂದಾಗಲಿ, ಚುನಾವಣೆಗಳಿಂದಾಗಲಿ ರೈತರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಸಮಾಜವಾದಿ ಕ್ರಾಂತಿಯಿಂದ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಅದಕ್ಕಾಗಿ ಸರಿಯಾದ ವೈಚಾರಿಕತೆ ಮತ್ತು ನಾಯಕತ್ವದಡಿ ಹಳ್ಳಿಗಳಲ್ಲಿ ರೈತ ಸಮಿತಿಗಳನ್ನು, ಜನ ಸಮಿತಿಗಳನ್ನು ರಚಿಸಿಕೊಂಡು ಸ್ಥಳೀಯ ಸಮಸ್ಯೆಗಳ ವಿರುದ್ಧ ರಾಜಿ ರಹಿತ ಹೋರಾಟಗಳನ್ನು ಬೆಳೆಸಬೇಕು ಎಂದರು. ಸಮ್ಮೇಳನ ಉದ್ಘಾಟಿಸಿದ ಎಸ್ ಯುಸಿಐ-ಕಮ್ಯುನಿಸ್ಟ್ ಪಕ್ಷದ ರಾಜ್ಯಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ರಾಜಕಾರಣಿಗಳಿಗೆ ರೈತರು ಕೇವಲ ಓಟಿನ ದಾಳಗಳಾಗಿ ಕಾಣುತ್ತಿದ್ದಾರೆಯೇ ಹೊರತು ಯಾವ ರಾಜಕೀಯ ಪಕ್ಷಗಳೂ ಅವರ ಸಮಸ್ಯೆಗಳ ಪರಿಹಾರಕ್ಕೆ ಕಿಂಚಿತ್ ಪ್ರಯತ್ನವನ್ನೂ ಮಾಡಿಲ್ಲ. ಎಲ್ಲಾ ಪಕ್ಷಗಳು ದೊಡ್ಡ ದೊಡ್ಡ ಬಂಡವಾಳಗಾರರ ಪರವಾದ ನೀತಿಗಳನ್ನು ರೂಪಿಸುತ್ತ ಬಂದಿವೆ. ಈ ಕೊಳಕು ರಾಜಕೀಯ ವ್ಯವಸ್ಥೆ ತೊಲಗಿಸಲು ಹಾಗೂ ದುಡಿಯುವ ಜನರ ಶ್ರೇಷ್ಠ ರಾಜಕೀಯವನ್ನು ಎತ್ತಿ ಹಿಡಿಯಲು ರೈತರು ತಳಮಟ್ಟದಿಂದ ಸಂಘಟಿತರಾಗಿ ಸಮಾಜದ ಮೂಲಭೂತ ಬದಲಾವಣೆಗೆ ಕೈ ಜೋಡಿಸಬೇಕು ಎಂದರು.
Advertisement
ರೈತ-ಕೃಷಿ ಕಾರ್ಮಿಕರ ಪ್ರಥಮ ಜಿಲ್ಲಾ ಸಮ್ಮೇಳನ
05:13 PM Dec 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.