ಧಾರವಾಡ: ಬರಗಾಲದ ಛಾಯೆ ದೂರ ಮಾಡುವಂತೆ ಪ್ರಾರ್ಥಿಸಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ರೈತ ಈರಣ್ಣ ಕರೀಕಟ್ಟಿ ಉಳವಿ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಚಕ್ಕಡಿ ಹೊತ್ತು ಯಾತ್ರೆ ಆರಂಭಿಸಿದ್ದಾರೆ.
ಪ್ರತಿ ವರ್ಷ ಎತ್ತಿನ ಚಕ್ಕಡಿ ಸಮೇತ ಶ್ರೀ ಉಳವಿಗೆ ಹೋಗುತ್ತಾರೆ. ಆದರೆ ಈ ಭಾರಿ ಭೀಕರ ಬರಗಾಲದ ಹಿನ್ನಲೆಯಲ್ಲಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾ ಹೆಗಲ ಮೇಲೆ ಚಕ್ಕಡಿ ಹೊತ್ತು ಹೆಬ್ಬಳ್ಳಿಯಿಂದ ಉಳವಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಫೆ.24 ರಂದು ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನೆರವೇರಲಿದ್ದು, ಈ ವೇಳೆ ರೈತ ಈರಣ್ಣ 80 ಕೆಜಿ ತೂಕದ ಚಕ್ಕಡಿಯನ್ನು ಹೆಗಲ ಮೇಲೆ ಹೊತ್ತು ಪಾದಯಾತ್ರೆ ಮೂಲಕ ಉಳವಿ ತಲುಪಲಿದ್ದಾರೆ. ಚೆನ್ನಬಸವೇಶ್ವರನಿಗೆ ಜಯವಾಗಲಿ…ಹರ ಹರ ಮಹಾದೇವ ಎನ್ನುತ್ತಾ ಹೆಬ್ಬಳ್ಳಿ ಗ್ರಾಮದ ಇತರ ಯುವಕರು, ಯುವ ರೈತ ಈರಣ್ಣ ಕರೀಕಟ್ಟಿ ಅವರಿಗೆ ಸಾಥ್ ನೀಡಿದ್ದಾರೆ.
ಬರಗಾಲದ ಛಾಯೆ ದೂರ ಮಾಡುವಂತೆ ಈ ರೀತಿ ಚಕ್ಕಡಿ ಹೊತ್ತು ಸಾಗಿರುವ ರೈತನ ಭಕ್ತಿ ಭಾವ ಗಮನ ಸೆಳೆದಿದೆ. ಈ ವಿಶಿಷ್ಟ ರೀತಿಯ ಪಾದಯಾತ್ರೆಯ ಮೂಲಕ ಉಳವಿ ತಲುಪಿದ ಬಳಿಕ ವಿಶೇಷ ಪೂಜೆ ಸಲ್ಲಿಸಿದ್ದು, ಈ ಪಾದಯಾತ್ರೆಗೆ ಕುಟುಂಬಸ್ಥರು, ಸ್ನೇಹಿತರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ: Kaup: ಸಮುದ್ರ ಕಿನಾರೆಯಲ್ಲಿ ರವಿಶಂಕರ್ ಗುರೂಜಿ ಅವರಿಂದ ಆನಂದ ಲಹರಿ ಮಹಾಸತ್ಸಂಗ