ಧಾರವಾಡ: ಕೋತಿಯೊಂದು ಬಾಲಕಿಯ ಮೇಲೆ ದಾಳಿ ಮಾಡಿದ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ಸರಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆಯ ೨ನೇ ತರಗತಿಯ ವಿದ್ಯಾರ್ಥಿನಿ ಇಕ್ರಾ ಹಾಸೀಮ್ ಗಡಕಾರಿ (8) ದಾಳಿಗೆ ಒಳಗಾದವಳು.
ಮನೆಯಿಂದ ಶಾಲೆಯತ್ತ ಹೊರಟಿದ್ದ ಬಾಲಕಿಯ ಮೇಲೆ ಶಾಲೆಯ ಪಕ್ಕದಲ್ಲಿಯೇ ಕೋತಿಯಿಂದ ಬಾಲಕಿಯ ಮೇಲೆ ದಾಳಿಯಾಗಿದೆ. ಕೋತಿಯು ಬಾಲಿಕಿಯ ಎಡಗಾಲನ್ನು ಕಚ್ಚಿ, ಎಳೆದಾಡಿದೆ. ಇದಲ್ಲದೇ ಕೈಗಳಿಗೂ ಕಚ್ಚಿದ್ದು, ಈ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆಯಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಈ ಕುರಿತಂತೆ ಪೋಷಕರು ಗರಗ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದಲ್ಲದೇ ಕಳೆದ ಒಂದು ವಾರದಲ್ಲಿ ಈ ಕೋತಿಯು ನಾಲ್ಕೈದು ಜನರಿಗೆ ಕಚ್ಚಿ ಗಾಯ ಮಾಡಿರುವ ಬಗ್ಗೆ ವರದಿಯಾಗಿದ್ದು, ಸೋಮವಾರ ದಿನವೇ ಕುಂಬಾರ ಓಣಿಯ ಇಬ್ಬರು ಅಜ್ಜಿಯರಿಗೆ ಕೋತಿ ಕಚ್ಚಿ ಗಾಯ ಮಾಡಿದೆ. ಹೀಗಾಗಿ ಈ ಕೋತಿಗೆ ಹುಚ್ಚು ಹಿಡಿರುವ ಬಗ್ಗೆ ಗ್ರಾಮಸ್ಥರು ಹೇಳುತ್ತಿದ್ದು, ಗ್ರಾಮದಲ್ಲಿ ಕೋತಿಯ ಭಯ ಆವರಿಸಿದೆ.
ಇದನ್ನೂ ಓದಿ: ಅಪರಿಚಿತ ಸ್ಥಳಕ್ಕೆ ಹೋದಾಗ ಇರಲಿ ಎಚ್ಚರ! ಶಾರ್ಕ್‌ಗೆ ಆಹಾರವಾಗಬೇಕಿದ್ದವ ಜಸ್ಟ್‌ಮಿಸ್ !