Advertisement
ಜಿಲ್ಲೆಯ ಮಾವು ಮೇಳಕ್ಕೆ ದಶಕಕ್ಕಿಂತ ಹೆಚ್ಚು ನಂಟಿದ್ದು, ಮೇಳ ಆಯೋಜನೆಯಿಂದ ಇಲ್ಲಿವರೆಗೂ ಮೂರು ದಿನಗಳಿಗೆ ಅಷ್ಟೇ ಮೇಳ ಸೀಮಿತ. ಕೊನೆಯ ಕ್ಷಣದಲ್ಲಿ ರೈತರ ಒತ್ತಾಸೆಯಂತೆ ಐದು ದಿನಗಳವರೆಗೆ ವಿಸ್ತರಿಸಿದ್ದು ಇದೆ. ಆದರೆ ಇದೇ ಮೊದಲ ಬಾರಿಗೆ ಮಾವು ಮೇಳ ವಿಸ್ತರಣೆ ಮೂರು ದಿನಗಳು ಆಗಿದ್ದಲ್ಲದೇ ಬರೋಬ್ಬರಿ ಆರು ದಿನಗಳ ಕಾಲ ಮೇಳ ಆಯೋಜಿಸಿರುವುದು ಈ ಸಲದ ವಿಶೇಷತೆ ಅನ್ನುವಂತಾಗಿದೆ.
Related Articles
Advertisement
ಗಮನ ಸೆಳೆದಿರುವ ಮೇಳ : ದುಬಾರಿ ಮಾವಿನ ಹಣ್ಣು ಮಿಯಾ ಜಾಕಿ ಸೇರಿದಂತೆ ವಿವಿಧ ಬಗೆಯ 42 ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳ ವೀಕ್ಷಣೆಯ ಜತೆಗೆ ಮಾವಿನ ಹಣ್ಣುಗಳೊಂದಿಗೆ ಮಾಡಿರುವ ಸೆಲ್ಪಿ ಪಾಯಿಂಟ್ ಈ ಸಲ ಗಮನ ಸೆಳೆದಿದೆ. ಅಲ್ಪೋಸ್ಸ್ ಮಾವಿನ ಹಣ್ಣೇ ಮೇಳದಲ್ಲಿ ಹೇರಳವಾಗಿದ್ದು, ಇದರ ಜತೆಗೆ ಕೊಪ್ಪಳದ ಕೇಸರ್, ಕಲ್ಮಿ, ಸಣ್ಣೆಲಿ, ಕರಿ ಇಸ್ಯಾಡ್, ಸುದರ್ಶನ್ ಸೇರಿದಂತೆ ವಿವಿಧ ಮಾವಿನ ಹಣ್ಣುಗಳಿವೆ. ಈ ಹಣ್ಣುಗಳ ವೈಶಿಷ್ಯತೆಗಳಿಂದ ಖರೀದಿಗೂ ಜೋರಾಗಿದೆ. ಮೇಳಕ್ಕೆಂದು ತಂದಿದ್ದ ಕೊಪ್ಪಳ ಕೇಸರ್ ತಳಿಯ ಮಾವಿನ ಹಣ್ಣುಗಳನ್ನು 80 ಡಜನ್‌ಹಣ್ಣುಗಳು ಮೇಳದ 2ನೇ ದಿನವೇ ಖಾಲಿಯಾಗಿದ್ದು, ಇದೇ ರೀತಿ ರುಚಿಕಟ್ಟಾದ ಮಲ್ಲಿಕಾ ಹಣ್ಣು ಭರ್ಜರಿಯಾಗಿ ಮಾರಾಟ ಆಗುತ್ತಿರುವುದು ವಿಶೇಷ.
ಸದ್ಯ ಮೇಳದಲ್ಲಿ 8-10 ಬಗೆಯ ತಳಿಯ ಹಣ್ಣಿಗಳು ಮಾರಾಟಕ್ಕೆ ಇದ್ದು, ಗ್ರಾಹಕರು ಮೇಳಕ್ಕೆ ಆಗಮಿಸಿ ಈ ಹಣ್ಣಿನ ರುಚಿ ಸವಿಯಬಹುದು. ಇನ್ನು ಮಾವು ಬೆಳೆಗಾರರು ಹಾಗೂ ಗ್ರಾಹಕರ ಮಧ್ಯೆಯೇ ನೇರವಾಗಿ ದರ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡಲಾಗಿದ್ದು, ಹೀಗಾಗಿ ವಿವಿಧ ಬಗೆಯ ತಳಿಯ ಮಾವಿನ ಹಣ್ಣುಗಳು ಡಜನ್‌ಗೆ 250 ರಿಂದ 500 ರೂ.ಗಳವರೆಗೂ ಮಾರಾಟ ಆಗುತ್ತಲಿವೆ. ಇದಲ್ಲದೇ ಆಯೋಜಿಸಿದ್ದ ಸಸ್ಯ ಸಂತೆಯಲ್ಲೂ ವಿವಿಧ ಬಗೆಯ ಮಾವಿನ ತಳಿ ಸೇರಿದಂತೆ ಬಗೆ ಬಗೆಯ ಸಸ್ಯ ತಳಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆದಿದ್ದೂ, ಇದಲ್ಲದೇ ಕೆಲವರು ಖರೀದಿಸುವ ಕಾರ್ಯವೂ ಸಾಗಿದೆ.
ಮೇಳ ವೀಕ್ಷಿಸಿದ ಡಿಸಿ: ವಿಸ್ತರಣೆ ಆಯ್ತು ಮೇಳ ಇನ್ನು ಬುಧವಾರ ಸಂಜೆ ಹೊತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮೇಳಕ್ಕೆ ಭೇಟಿ ನೀಡಿ, ವೀಕ್ಷಿಸಿದರು. ಸೆಲ್ಪಿ ಪಾಯಿಂಟ್ ವೀಕ್ಷಿಸಿದಲ್ಲದೇ ಮಾವಿನ ವಿವಿಧ ತಳಿಗಳನ್ನು ವೀಕ್ಷಣೆ ಮಾಡಿದರು. ಇದಲ್ಲದೇ ಮಾವು ಮಾರಾಟಗಾರರ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ವಿವಿಧ ಬಗೆಯ ಮಾವಿನ ಹಣ್ಣು ವೀಕ್ಷಿಸಿದರು. ಮಾವಿನ ಹಣ್ಣಿನ ವಿಶೇಷತೆ, ವೈಶಿಷ್ಯತೆಗಳ ಜತೆಗೆ ಮಾವು ಮೇಳದ ಪ್ರಯೋಜನ ಬಗ್ಗೆ ನೇರವಾಗಿ ಮಾವು ಬೆಳೆಗಾರರೊಂದಿಗೆ ಚರ್ಚಿಸಿ, ಮಾಹಿತಿ ಪಡೆದರು. ಇನ್ನು ಮಾವು ಬೆಳೆಗಾರರಿಂದ ಮಾವು ಮೇಳ ವಿಸ್ತರಣೆ ಮಾಡುವಂತೆ ಬಂದಿರುವ ಮನವಿ ಬಗ್ಗೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಿಂದ ಮಾಹಿತಿ ಪಡೆದು, ಮಾವು ರೈತರ ಒತ್ತಾಸೆಯಂತೆ ವಿಸ್ತರಣೆ ಮಾಡುವಂತೆಯೂ ಮೌಖಿಕವಾಗಿ ಹೇಳಿ, ಅಲ್ಲಿಂದ ತೆರಳಿದರು. ಇದಾದ ಬಳಿಕ ಮಾವು ಬೆಳೆಗಾರರೊಂದಿಗೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಮೂರು ದಿನಗಳ ಕಾಲ ಮೇಳ ವಿಸ್ತರಣೆಯ ನಿರ್ಧಾರ ಪ್ರಕಟಿಸಲಾಯಿತು.
ಮಾವು ಮೇಳಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದ್ದು, ಹೀಗಾಗಿ ಮಾವು ಬೆಳೆಗಾರರು ಹಾಗೂ ಮಾವು ಪ್ರಿಯ ಗ್ರಾಹಕರ ಒತ್ತಾಸೆ ಮೇರೆಗೆ ಮಾವು ಮೇಳ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಒಟ್ಟು ಆರು ದಿನಗಳ ಕಾಲ ನಡೆಯಲಿರುವ ಮೇಳವು ಮೇ 19 ರವರೆಗೆ ಇರಲಿದೆ.-ಕೆ.ಸಿ.ಭದ್ರಯ್ಯನವರ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ