Advertisement

ಧಾರವಾಡ ಕೋವಿಡ್ ಅಟ್ಟಹಾಸ : 191 ಮಂದಿಗೆ ಸೋಂಕು ದೃಢ! 8 ಮಂದಿ ಸಾವು

09:39 PM Aug 03, 2020 | sudhir |

ಧಾರವಾಡ : ಜಿಲ್ಲೆಯಲ್ಲಿ ಸೋಮವಾರ 191 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದರ ಜೊತೆಗೆ ಕೋವಿಡ್‌ಗೆ ಮತ್ತೆ 8 ಜನ ಸೋಂಕಿತರು ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 155ಕ್ಕೆ ಏರಿದೆ.

Advertisement

191 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4644 ಕ್ಕೆ ಏರಿಕೆ ಕಂಡರೆ 88 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಗುಣಮುಖರಾದವರ ಸಂಖ್ಯೆ 2152ಕ್ಕೆ ಏರಿದೆ. ಇದರಿಂದ ಈಗ ಜಿಲ್ಲೆಯಲ್ಲಿ 2347 ಪ್ರಕರಣಗಳು ಸಕ್ರಿಯವಾಗಿದ್ದು, 37 ಜನ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದ್ದಾರೆ.

191 ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ವ್ಯಾಪ್ತಿಯ ಶಹರದ ಭೂಸಪ್ಪ ಚೌಕ, ಸಾರಸ್ವತಪುರ, ಸಾಧನಕೇರಿ ಮುಖ್ಯ ರಸ್ತೆ, ಶಿರಡಿ ಸಾಯಿ ಬಾಬಾ ಕಾಲೋನಿ, ಗಾಂಧಿ ಚೌಕ, ಮೆಹಬೂಬ ನಗರ, ಮಾಳಾಪುರ, ಬಸವನಗರ ಹತ್ತಿರ, ಹೊಸ ಯಲ್ಲಾಪುರ, ಕುರಬರ ಓಣಿ, ಜನ್ನತ ನಗರ, ಶ್ರೀರಾಮ ನಗರ, ಹೈಕೋರ್ಟ್, ಗ್ರಾಮೀಣ ಪೊಲೀಸ್ ಕ್ವಾಟರ್ಸ್, ಸತ್ತೂರಿನ ರಾಜಾಜಿ ನಗರ, ಹನುಮಂತ ನಗರ, ಸಿವಿಲ್ ಆಸ್ಪತ್ರೆ ಕ್ವಾಟರ್ಸ್, ಬೇಲೂರು ಹೈಕೋರ್ಟ್, ಕೆಸಿಡಿ ರಸ್ತೆ ಆಕಾಶವಾಣಿ, ಮರಾಠ ಕಾಲೋನಿ, ಹಿರೇಮಠ ಗಲ್ಲಿ, ತಪೋವನ ನಗರ, ಸತ್ತೂರಿನ ಎಸ್‌ಡಿಎಮ್ ಆಸ್ಪತ್ರೆ, ತೇಜಸ್ವಿ ನಗರ, ಗಾಂಧಿ ನಗರ, ಮಂಗಳವಾರಪೇಟೆ ಹಿರೇಮಠ ಓಣಿ, ವಿಕಾಸ ನಗರ, ಸಂಪಿಗೆ ನಗರ, ಶಿರೂರ ಗ್ರಾಮದ ಹಿರೇಮಠ ಓಣಿ, ವಿನಾಯಕ ನಗರ, ಕೊಪ್ಪದಕೇರಿ ಹತ್ತಿರ, ಹಳಿಯಾಳದ ಪೊಲೀಸ್ ಠಾಣೆಯಲ್ಲಿ ಸೋಂಕು ಧೃಡಪಟ್ಟಿದೆ.

ಹುಬ್ಬಳ್ಳಿ ತಾಲೂಕು: ವ್ಯಾಪ್ತಿಯ ಶಹರದ ಗಣೇಶ ನಗರ, ಕೇಶ್ವಾಪೂರ, ಗಂಗಾಧರ ನಗರ, ಉದಯ ನಗರ, ಗದಗ ರಸ್ತೆಯ ಚೇತನ ಕಾಲೋನಿ, ಸಿದ್ದೇಶ್ವರ ಕಾಲೋನಿ, ಉಣಕಲ್ ಮೌನೇಶ್ವರ ನಗರ, ಶಿವಸೋಮೇಶ್ವರ ನಗರ, ಸಿದ್ಧಾರೂಡ ಮಠ, ಸಿದ್ದೇಶ್ವರ ಪಾರ್ಕ್, ಸಿದ್ದಾರ್ಥ ಕಾಲೋನಿ, ಮಂಟೂರ ರಸ್ತೆಯ ಗಣೇಶ ನಗರ, ರೈಲ್ವೆ ಸುರಕ್ಷಾ ದಳ, ನವನಗರದ ಸಿಟಿ ಪಾರ್ಕ್, ಅರವಿಂದ ನಗರ ಹತ್ತಿರ, ಸಿದ್ದಲಿಂಗೇಶ್ವರ ಕಾಲೋನಿ, ಕುಸಗಲ್, ಜಾಡಗೇರ ಓಣಿ, ಬೆರಿದೇವರಕೊಪ್ಪ, ವಿನಾಯಕ ನಗರ, ವೆಂಕಟೇಶ್ವರ ಕಾಲೋನಿ, ರೈಲ್ವೆ ನಿಲ್ದಾಣ ಹತ್ತಿರ, ದೇಶಪಾಂಡೆ ನಗರ, ರಾಮಲಿಂಗೇಶ್ವರ ನಗರ, ಬೆಂಗೇರಿ, ಚೈತನ್ಯ ವಿಹಾರ, ಸಾಯಿ ನಗರ, ಆದರ್ಶ ನಗರದ ರೂಪಾ ಅಪಾರ್ಟಮೆಂಟ್, ನೂಲ್ವಿ, ಹಳೇ ಹುಬ್ಬಳ್ಳಿ ಈಶ್ವರ ನಗರ, ಕೌಲಪೇಟ್ ಮೊಮಿನ್ ಪ್ಲಾಟ್, ಸಿದ್ದಾರೂಢ ಮಠ, ಗೋಕುಲ ರಸ್ತೆ, ಗೋಪನಕೊಪ್ಪದ ಗವಿಸಿದ್ದೇಶ್ವರ ಕಾಲೋನಿ, ಸ್ವಾಗತ ಕಾಲೋನಿ, ದ್ಯಾಮವ್ವನ ಗುಡಿ ಓಣಿ, ಸದರಸೋಫಾ, ನೇಕಾರ ನಗರ, ನವನಗರದ ಶಾಂತಿ ಕಾಲೋನಿ, ಸಿಬಿಟಿ ಹತ್ತಿರ, ಕಿಮ್ಸ್ ಆಸ್ಪತ್ರೆ, ಕಾಡಸಿದ್ದೇಶ್ವರ ಕಾಲೋನಿ, ಸಾಯಿ ನಗರ, ಮಂಜುನಾಥ ನಗರ, ಚಾಮುಂಡೇಶ್ವರಿ ನಗರ, ಅಮರಗೋಳ, ಹೊಸೂರು, ರಾಜನಗರ, ಸಹದೇವ ನಗರ, ಮಲ್ಲಿಕಾರ್ಜುನ ನಗರ, ಎನ್.ಆರ್. ಚೇತನ ಕಾಲನಿ, ಬಂಕಾಪೂರ ಚೌಕ, ಬಸವೇಶ್ವರ ನಗರ, ಆನಂದ ನಗರ, ಭವಾನಿ ನಗರ, ವಿದ್ಯಾನಗರ, ಮಧರ ತೇರೆಸಾ ಕಾಲೋನಿ, ಜನತ ಕಾಲೋನಿ, ಫಾರೆಸ್ಟ್ ಕಾಲೋನಿ ಹತ್ತಿರ, ವಿನೋಬ ನಗರ, ರೈಲ್ವೆ ಆಫಿಸರ್ ಕಾಲೋನಿ, ಬೊಮ್ಮಾಪುರ ಓಣಿ, ಎಪಿಎಂಸಿ, ವಿದ್ಯಾನಗರ ಬೃಂದಾವನ ಲೇಔಟ್, ಗೋಕುಲ ರಸ್ತೆಯ ರೇಣುಕಾ ನಗರ, ಟಿಪ್ಪು ನಗರ ಹತ್ತಿರ, ವೆಜಿಟೆಬಲ್ ಮಾರುಕಟ್ಟೆ, ಯಲ್ಲಾಪುರ ಓಣಿ ಹಾಗೂ ಗ್ರಾಮೀಣ ಭಾಗದ ಬಿಡನಾಳದ ಸೋನಿಯಾ ಗಾಂಧಿ ನಗರ, ಇಂಗಳಹಳ್ಳಿ ಗ್ರಾಮ, ಬ್ಯಾಹಟ್ಟಿ ಗ್ರಾಮ ಜಾಡಗೇರ ಓಣಿಯಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನೂ ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಮ, ಮಿಶ್ರೀಕೋಟಿ, ಅಣ್ಣಿಗೇರಿ, ಕುಂದಗೋಳ ತಾಲೂಕಿನ ಯರಗುಪ್ಪಿ ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಗ್ರಾಮ, ಹಾವೇರಿ ಜಿಲ್ಲೆಯ ಸವಣೂರು ಬಸ್ ನಿಲ್ದಾಣ ಹತ್ತಿರ, ಶಿಗ್ಗಾಂವ ತಾಲೂಕಿನ ಬಸನಾಳ, ರಾಣೆಬೆನ್ನೂರ.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಗೊರೊಳ್ಳಿ, ಕಿತ್ತೂರು, ಗೋಕಾಕ, ಸವದತ್ತಿ ತಾಲೂಕಿನ ಶಿವಬಸವೇಶ್ವರ ನಗರ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಎಸ್‌ಕೆ ಕೊಪ್ಪ ಗ್ರಾಮ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಿAದ ಬಂದವರಲ್ಲಿ ಸೋಂಕು ಧೃಡಪಟ್ಟಿದೆ.

Advertisement

ಕಳೆದ ಮೂರು ದಿನಗಳ ಅವಧಿಯಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಎಂಟು ಜನ ಮೃತಪಟ್ಟಿದ್ದಾರೆ.ಧಾರವಾಡದ ಸಾರಸ್ವತಪುರ 48 ವರ್ಷದ ಪುರುಷ, ಚರಂತಿಮಠ ಗಲ್ಲಿ ನಿವಾಸಿಯಾದ 51 ವರ್ಷದ ಮಹಿಳೆ, ಹುಬ್ಬಳ್ಳಿ ಮಂಟೂರ ರಸ್ತೆಯ ಮಿಲ್ಲತ್ ನಗರ ನಿವಾಸಿಯಾದ 77 ವರ್ಷದ ವೃದ್ದೆ ಮಹಿಳೆ, ಗೋಕುಲ ರಸ್ತೆಯ ನಿವಾಸಿಯಾದ 81 ವರ್ಷದ ವೃದ್ದ ಮಹಿಳೆ, ಆದರ್ಶ ನಗರ ನಿವಾಸಿಯಾದ 70 ವರ್ಷದ ಮಹಿಳೆ, ಹುಬ್ಬಳ್ಳಿ ನವನಗರ ನಿವಾಸಿಯಾದ 85 ವರ್ಷದ ವೃದ್ದ ಮಹಿಳೆ, ಶಿವಸೋಮೇಶ್ವರ ನಗರ ನಿವಾಸಿಯಾದ 53 ವರ್ಷದ ಮಹಿಳೆ, ಹಳೇ ಹುಬ್ಬಳ್ಳಿ ಅರವಿಂದ ನಗರ ನಿವಾಸಿಯಾದ 76 ವರ್ಷದ ಮಹಿಳೆ ಸೇರಿ 1 ಪುರುಷ ಹಾಗೂ 7 ಜನ ಮಹಿಳೆಯರು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ ಈ ಸೋಂಕಿತರ ಪಾರ್ಥಿವ ಶರೀರಗಳನ್ನು ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.

ಎಸ್‌ಪಿ ಕಚೇರಿ ಸೀಲಡೌನ
ಈ ಹಿಂದೆ ಎಸ್‌ಪಿ ಕಚೇರಿಯ ಪಾಸ್‌ಪೋರ್ಟ್ ವಿಭಾಗದ ಎಎಸ್‌ಐ ವಿನಾಯಕ ಇಟಗಿ ಕೋವಿಡ್‌ಗೆ ಬಲಿಯಾಗಿದ್ದರು. ಇದೀಗ ಮತ್ತೆ ಎಸ್‌ಪಿ ಕಚೇರಿಯ ಇಬ್ಬರು ಸಿಬ್ಬಂದಿಗೆ ಕೊರೋನಾ ಸೋಂಕು ಧೃಡಪಟ್ಟಿದ್ದು, ಹೀಗಾಗಿ ಎಸ್‌ಪಿ ಕಚೇರಿ ಎರಡು ದಿನ ಸೀಲ್ ಡೌನ್ ಮಾಡಿರುವ ಬಗ್ಗೆ ಎಸ್‌ಪಿ ವರ್ತಿಕ ಕಟಿಯಾರ್ ಅವರೇ ಖಚಿತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next