Advertisement

ಬದಿಯಡ್ಕ ಮಂಡಲ ಕಾಂಗ್ರೆಸ್‌ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ

08:07 PM Sep 16, 2020 | mahesh |

ಬದಿಯಡ್ಕ: ಸ್ಥಳೀಯಾಡಳಿತ ಸಂಸ್ಥೆಗಳ ಯೋಜನ ನಿಧಿಯನ್ನು ಕಡಿತಗೊಳಿಸಿ ಪಂಚಾಯತ್‌ನ ಯಾವುದೇ ಅಭಿವೃದ್ಧಿಗೆ ಸಾಕಾಗದೆ ವಂಚಿಸುತ್ತಿರುವ ಕೇರಳದ ಎಡರಂಗ ಸರಕಾರದ ವಿರುದ್ಧ ಬದಿಯಡ್ಕ ಮಂಡಲ ಕಾಂಗ್ರೆಸ್‌ ನೇತೃತ್ವದಲ್ಲಿ ಬದಿಯಡ್ಕ ಗ್ರಾಮ ಪಂಚಾಯತ್‌ ಮುಂಭಾಗ ಧರಣಿ ಸತ್ಯಾಗ್ರಹ ನಡೆಯಿತು.

Advertisement

ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಡಿಸಿಸಿ ಪ್ರಧಾನ ಕಾರ್ಯದರ್ಶಿ ಜೇಮ್ಸ್‌ ಕೇರಳ ಆಳುತ್ತಿರುವ ಎಡರಂಗ ಸರಕಾರ ಜನರನ್ನು ಭಯಭೀತಿಗೊಳಿಸಿದೆ. ಭ್ರಷ್ಟಾಚಾರ, ಡ್ರಗ್ಸ್‌ ಮಾಫಿಯಾ, ಕಳ್ಳತನ ಇದರಲ್ಲಿ ಭಾಗಿಯಾಗಿದ್ದು, ಆಡಳಿತ ಸಂಪೂರ್ಣ ಕುಸಿದಿದೆ ಎಂದರು.
ಬದಿಯಡ್ಕ ಮಂಡಲ ಕಾಂಗ್ರೆಸ್‌ ಅಧ್ಯಕ್ಷ ಎಂ. ನಾರಾಯಣ ಮಣಿಯಾಣಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಐಎನ್‌ಟಿಯುಸಿ ಬದಿಯಡ್ಕ ಮಂಡಲ ಅಧ್ಯಕ್ಷ ರವಿ ಮೆಣಸಿನ ಪಾರೆ, ಕಾಂಗ್ರೆಸ್‌ ನೇತಾರ ಐತ್ತಪ್ಪ ಚೆನ್ನಗೂಳಿ, ಪಂಚಾಯತ್‌ ಸದಸ್ಯರಾದ ಜಯಶ್ರೀ, ಪ್ರಸನ್ನ ಶುಭಹಾರೈಸಿದರು.

ಮ್ಯಾಥ್ಯೂಸ್‌, ಶಾಫಿ ಗೋಳಿಯಡ್ಕ, ಶಾಫಿ, ಶಾಫಿ ಪಯ್ಯಲಡ್ಕ, ಕುಮಾರ ನಾಯರ್‌, ಶಿಜು, ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರು ಸತ್ಯಾಗ್ರಹದ ನೇತೃತ್ವ ವಹಿಸಿದರು. ಬದಿಯಡ್ಕ ಮಂಡಲ ಕಾಂಗ್ರೆಸ್‌ ಉಪಾಧ್ಯಕ್ಷ ಪಿ.ಜಿ. ಜಗನ್ನಾಥ ರೈ ಸ್ವಾಗತಿಸಿದರು. ಬದಿಯಡ್ಕ ಮಂಡಲ ಕೋಶಾಧಿಕಾರಿ ಅಬ್ಟಾಸ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next