Advertisement

ಜನವರಿ 11ರಿಂದ ಧನ್ವೀರ್‌ ಬಜಾರ್‌

05:48 AM Dec 30, 2018 | Team Udayavani |

ಸಿಂಪಲ್‌ ಸುನಿ “ಬಜಾರ್‌’ ಚಿತ್ರ ನಿರ್ದೇಶಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಚಿತ್ರೀಕರಣ ಮುಗಿಸಿ, ಆಡಿಯೋ ಬಿಡುಗಡೆ ಕೂಡಾ ಮಾಡಿಕೊಂಡಿರುವ ಈ ಚಿತ್ರ ಏನಾಯಿತು ಎಂದು ಸಿನಿಪ್ರಿಯರು ಕೇಳುತ್ತಿರುವ ಹೊತ್ತಿಗೆ ಚಿತ್ರತಂಡದಿಂದ ಸುದ್ದಿಯೊಂದು ಬಂದಿದೆ. ಅದು ಸಿನಿಮಾದ ಬಿಡುಗಡೆ ಕುರಿತು. “ಬಜಾರ್‌’ ಚಿತ್ರ ಜನವರಿ 11 ರಂದು ತೆರೆಕಾಣಲಿದೆ. ಈ ಮೂಲಕ ಹೊಸ ವರ್ಷದಲ್ಲಿ ಹೊಸ ಹೀರೋ ಧನ್ವೀರ್‌ ಅದ್ಧೂರಿಯಾಗಿ ಎಂಟ್ರಿಕೊಡಲಿದ್ದಾರೆ.

Advertisement

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌, ಇದೊಂದು ಮಾಸ್‌ ಸಿನಿಮಾ ಎಂಬುದನ್ನು ಬಿಂಬಿಸಿದೆ. ಹಾಗಾಗಿ, “ಬಜಾರ್‌’ 2019ರ ಮೊದಲ ಆ್ಯಕ್ಷನ್‌ ಸಿನಿಮಾವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದಕ್ಕೆ ಪೂರಕವಾಗಿ ಚಿತ್ರದಲ್ಲಿ ಆರು ಫೈಟ್‌ಗಳಿದ್ದು, ಮಾಸ್‌ ಪ್ರಿಯರು ಇಷ್ಟಪಡುತ್ತಾರೆ ಚಿತ್ರತಂಡಕ್ಕಿದೆ. ಇನ್ನು ಚಿತ್ರದ ಮತ್ತೂಂದು ಟ್ರೇಲರ್‌ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದ್ದು, ಜನವರಿ 3 ರಂದು ಬಿಡುಗಡೆಯಾಗಲಿದೆ.

ಈ ಟ್ರೇಲರ್‌ ಮೂಲಕ ಚಿತ್ರದ ಹೈಲೈಟ್ಸ್‌ ಗಮನ ಸೆಳೆಯಲಿವೆ. ಈಗಾಗಲೇ  ಚಿತ್ರದ ಡಬ್ಬಿಂಗ್‌ ರೈಟ್ಸ್‌ ಹಿಂದಿಗೆ ಒಂದು ಕೋಟಿ ಎರಡು ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಒಬ್ಬ ಹೊಸ ಹುಡುಗನ ಮೊದಲ ಚಿತ್ರಕ್ಕೆ ಈ ಮೊತ್ತ ಸಿಕ್ಕಿರುವುದರಿಂದ ಚಿತ್ರತಂಡ ಖುಷಿಯಾಗಿದೆ. ಚಿತ್ರಕ್ಕೂ ಪ್ರೇಕ್ಷಕರು ಅದೇ ರೀತಿ ಬೆಂಬಲ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ. ಇನ್ನು, “ಬಜಾರ್‌’ ಚಿತ್ರದಲ್ಲಿ ಲವ್‌ಸ್ಟೋರಿ ಜೊತೆಗೆ ಪಾರಿವಾಳ ರೇಸ್‌ ಕೂಡಾ ಹೈಲೈಟ್‌.

ಪಾರಿವಾಳ ರೇಸ್‌ ಅನ್ನು ಮೂಲವಾಗಿಟ್ಟುಕೊಂಡು “ಬಜಾರ್‌’ ಚಿತ್ರದ ಕಥೆ ಸಾಗಿದೆ. ಸುಮಾರು 500ಕ್ಕೂ ಹೆಚ್ಚು ಪಾರಿವಾಳಗಳಿರುವ ಪ್ರಕಾಶ್‌ ನಗರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ನಾಯಕ ಧನ್ವೀರ್‌ ಸಿಕ್ಸ್‌ಪ್ಯಾಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಈ ಚಿತ್ರದ ನಾಯಕಿ. “ಬಜಾರ್‌’ ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್ಸ್‌ನಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next