“ಧೂಮ್’ ಸರಣಿಯಲ್ಲಿ ಮೂಡಿಬಂದ ಚಿತ್ರಗಳು ಬಾಲಿವುಡ್‌ನಲ್ಲಿ ಹಲವು
ದಾಖಲೆಗಳನ್ನು ಬರೆದಿದ್ದು ನಿಮಗೆಲ್ಲ ಗೊತ್ತೇ ಇದೆ. “ಧೂಮ್’, “ಧೂಮ್-2′,
“ಧೂಮ್-3′ ಹೀಗೆ ಸಾಲು ಸಾಲಾಗಿ ಬಂದ “ಧೂಮ್’ ಸರಣಿಯ ಚಿತ್ರಗಳಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಾದ ಅಭಿಷೇಕ್ ಬಚ್ಚನ್, ಆಮೀರ್ ಖಾನ್, ಹೃತಿಕ್ ರೋಷನ್, ಜಾನ್ ಅಬ್ರಾಹಂ ಮೊದಲಾದ ಘಟಾನುಘಟಿ ನಟರು ವಿಭಿನ್ನ ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದರು. ಈಗ “ಧೂಮ್’ ಶೈಲಿಯಲ್ಲೇ ಕನ್ನಡದಲ್ಲಿ ಮತ್ತೂಂದು ಚಿತ್ರ ತೆರೆಗೆ ಬರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಧೂಮ್ ಅಗೇನ್’.
“ಪರಮಾತ್ಮ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಧೂಮ್ ಅಗೇನ್’ ಚಿತ್ರವನ್ನು ಸುಜಿತ್ ಶೆಟ್ಟಿ ಮತ್ತು ರಾಜ್ ಸೇಥಿಯಾ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ರಾಜೇಶ್ ವರ್ಮಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನವ ಪ್ರತಿಭೆಗಳಾದ ವಾಸು, ಪ್ರವೀರ್ ಶೆಟ್ಟಿ, ರಾಕೇಶ್ ಶೆಟ್ಟಿ ಮತ್ತು ಅರ್ಜುನ್ ಶೆಟ್ಟಿ “ಧೂಮ್ ಅಗೇನ್’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸ್ಪಾನಿಷ್ ಮೂಲದ ಮಾಡೆಲ್ ಜನಿರಾ ಐಡರ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಶ್ರೀಶಾಂತ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ನಿರ್ಮಾಣ ಹಂತದಲ್ಲಿರುವ “ಧೂಮ್ ಅಗೇನ್’ ಚಿತ್ರದ ಮೊದಲ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ.
ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನಟ ಪುನೀತ್ ರಾಜಕುಮಾರ್ “ಧೂಮ್ ಅಗೇನ್’ ಚಿತ್ರದ ಮೊದಲ ಟೀಸರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜೈರಾಜ್, ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು, ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ಚಿತ್ರತಂಡ, “ಧೂಮ್ ಎನ್ನುವ ಹೆಸರಿನಲ್ಲಿಯೇ ಒಂದು ಸ್ಪೀಡ್, ಜೋಶ್ ಎಲ್ಲವೂ ಇದೆ. ಅದೇ ಟೈಟಲ್ ನಮ್ಮ ಚಿತ್ರದಲ್ಲೂ ಇರುವುದರಿಂದ, ಅದೇ ಸ್ಪೀಡ್, ಜೋಶ್ ಈ ಚಿತ್ರದಲ್ಲೂ ಇರುತ್ತದೆ’ ಎಂದಿದೆ. ಈಗಾಗಲೇ ಹಿಂದಿಯಲ್ಲಿ ಮೂಡಿಬಂದ “ಧೂಮ್’ ಸರಣಿಯಲ್ಲಿ ಸೂಪರ್ ಬೈಕ್ ರೇಸ್, ಕಳ್ಳ-ಪೊಲೀಸ್ ಕಣ್ಣಾಮುಚ್ಚಾಲೆ ಕಮಾಲ್ ಜೋರಾಗಿತ್ತು. ಈ ಚಿತ್ರದಲ್ಲೂ ಅದೇ ಆಟ ಮುಂದುವರೆಯಲಿದ್ದು ಸಿನಿಪ್ರಿಯರಿಗೆ ಭರಪೂರ
ಮನರಂಜನೆ ಗ್ಯಾರಂಟಿ ಎನ್ನುವ ವಿಶ್ವಾಸದ ಮಾತುಗಳನ್ನಾಡುತ್ತದೆ ಚಿತ್ರತಂಡ.
ಇನ್ನು ಕನ್ನಡದ ಜೊತೆ ಜೊತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲೂ “ಧೂಮ್ ಅಗೇನ್’ ಚಿತ್ರ ಮೂಡಿಬರುತ್ತಿದ್ದು, ಚಿತ್ರದಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಸೂಪರ್ ಬೈಕ್‌ಗಳನ್ನು ಮತ್ತು ವೃತ್ತಿಪರ ರೇಸರ್‌ಗಳನ್ನು ಳಸಿಕೊಳ್ಳಲಾಗುತ್ತದೆಯಂತೆ. “ಧೂಮ್ ಅಗೇನ್’ ಚಿತ್ರಕ್ಕೆ ಗುರುಕಿರಣ್ ಸಂಗೀತ, ಕೆ.ಎಂ ಪ್ರಕಾಶ್ ಸಂಕಲನವಿದೆ. ಸದ್ಯ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ “ಧೂಮ್ ಅಗೇನ್’ ಇದೇ ವರ್ಷಾಂತ್ಯಕ್ಕೆ ಅಥವಾ
ಮುಂದಿನ ವರ್ಷದ ಆರಂಭದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗುತ್ತಿದೆ.