Advertisement

ಗಂಟೆ ಬಾರಿಸಿದ ಡೆಕ್ಸ್‌ಟರ್‌

09:08 AM Aug 11, 2018 | |

ಲಂಡನ್‌: ಮೊದಲ ದಿನದಾಟ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದರಿಂದ ಸಚಿನ್‌ ತೆಂಡುಲ್ಕರ್‌ ಗಂಟೆ ಬಾರಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ದ್ವಿತೀಯ ದಿನ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ, 82ರ ಹರೆಯದ ಟೆಡ್‌ ಡೆಕ್‌ಸ್ಟರ್‌ ಗಂಟೆ ಬಾರಿಸಿ ಪಂದ್ಯದ ಆರಂಭ ಸಾರಿದರು.

Advertisement

ಈಗಾಗಲೇ ನಿಗದಿಯಾಗಿರುವಂತೆ 3ನೇ ದಿನ ರವಿಶಾಸ್ತ್ರಿ, 4ನೇ ದಿನ ಅನ್ಯಾ ಶ್ರಬೊಲ್‌ ಗಂಟೆ ಬಾರಿಸುವ ಅವಕಾಶ ಪಡೆಯಲಿದ್ದಾರೆ. ಅಂತಿಮ ದಿನ ಯಾರ ಸರದಿ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಬಹುಶಃ ಈ ಅವಕಾಶ ಸಚಿನ್‌ ತೆಂಡುಲ್ಕರ್‌ ಪಾಲಾಗಲೂಬಹುದು. ಅಥವಾ 3ನೇ ದಿನ ರವಿಶಾಸ್ತ್ರಿ ತಮ್ಮ ಅವಕಾಶವನ್ನು ತೆಂಡುಲ್ಕರ್‌ಗೆ ಬಿಟ್ಟುಕೊಡಲೂಬಹುದು!

ಎರಡು ಬದಲಾವಣೆ
ದ್ವಿತೀಯ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ತನ್ನ ತಂಡದಲ್ಲಿ 2 ಬದಲಾವಣೆ ಮಾಡಿಕೊಂಡಿತು. ಎಡಗೈ ಆರಂಭಕಾರ ಶಿಖರ್‌ ಧವನ್‌ ಮತ್ತು ಬೌಲರ್‌ ಉಮೇಶ್‌ ಯಾದವ್‌ ಅವರನ್ನು ಹೊರಗಿರಿಸಿ ಚೇತೇಶ್ವರ್‌ ಪೂಜಾರ ಹಾಗೂ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರನ್ನು ಕಣಕ್ಕಿಳಿಸಿತು. ಧವನ್‌ ಗೈರಲ್ಲಿ ರಾಹುಲ್‌ ಇನ್ನಿಂಗ್ಸ್‌ ಆರಂಭಿಸಿದರು.

ಇಂಗ್ಲೆಂಡ್‌ ತಂಡದಲ್ಲೂ 2 ಪರಿವರ್ತನೆ ಕಂಡುಬಂತು. ಡೇವಿಡ್‌ ಮಾಲನ್‌ ಬದಲು ಓಲೀ ಪೋಪ್‌ ಟೆಸ್ಟ್‌ ಪಾದಾರ್ಪಣೆಗೈದರು. ಪೋಪ್‌ಗೆ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಹಾಗೂ ಕೀಪರ್‌ ಅಲೆಕ್‌ ಸ್ಟುವರ್ಟ್‌ “ಟೆಸ್ಟ್‌ ಕ್ಯಾಪ್‌’ ನೀಡಿದರು. ವಿಚಾರಣೆ ಎದುರಿಸುತ್ತಿರುವ ಬೆನ್‌ ಸ್ಟೋಕ್ಸ್‌ ಬದಲು ಕ್ರಿಸ್‌ ವೋಕ್ಸ್‌ ಆಡಲಿಳಿದರು.

Advertisement

Udayavani is now on Telegram. Click here to join our channel and stay updated with the latest news.

Next