ಉಪ್ಪಿನಂಗಡಿ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ರಾಷ್ಟ್ರಕ್ಕಾಗಿ ಜೀವನವನ್ನು ಅರ್ಪಿಸಿದ ಶ್ರೇಷ್ಠ ನಾಯಕ. ಅವರಲ್ಲಿನ ಪಕ್ಷ ನಿಷ್ಠೆ ಹಾಗೂ ರಾಷ್ಟ್ರ ಭಕ್ತಿ ನಮಗೆ ಸದಾ ಪ್ರೇರಣೆಯಾಗಿದೆ ಎಂದು ಬಿಜೆಪಿ ಯುವ ಮುಂದಾಳು ಕೇಶವ ಗೌಡ ಬಜತ್ತೂರು ತಿಳಿಸಿದರು.
ಅವರು ಉಪ್ಪಿನಂಗಡಿ ಹಾಗೂ 34ನೇ ನೆಕ್ಕಿಲಾಡಿಯ ಬಿಜೆಪಿ ಘಟಕದ ವತಿಯಿಂದ ನೆಕ್ಕಿಲಾಡಿಯ ಶ್ರೀ ರಾಘವೇಂದ್ರ ಮಠದ ಸಭಾಭವನದಲ್ಲಿ ನಡೆದ ಅರ್ಪಣಾ ದಿನದ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೀನ ದಯಾಳ್ ಉಪಾಧ್ಯಾಯ ಅವರು ರಾಷ್ಟ್ರಕ್ಕಾಗಿ ನಾವೇನು ಮಾಡ ಬಹುದು ಎಂಬ ಚಿಂತನೆಯಲ್ಲಿ ರಾಜ ಕಾರಣ ಪ್ರವೇಶಿಸಿದರು. ಎದುರಾದ ಕಠಿನ ಸವಾಲುಗಳನ್ನು ಅಚಲ ತಣ್ತೀ, ಸಿದ್ಧಾಂತಗಳ ಮೂಲಕ ಗೆದ್ದು ಸುಶೀಲ ನಡೆಯ ರಾಜಕಾರಣವನ್ನು ರಾಷ್ಟ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಇದನ್ನು ಪಾಲಿಸುತ್ತಿರುವ ಪಕ್ಷವು ಇತರ ಎಲ್ಲ ಪಕ್ಷಗಳಿಗಿಂತಲೂ ಭಿನ್ನ ವಾಗಿದೆ. ಸಾರ್ವತ್ರಿಕ ಭಾವನೆಯ ಶ್ರೇಷ್ಠತೆಯನ್ನು ಮುಂದಿನ ದಿನ ಗಳಲ್ಲಿಯೂ ಉಳಿಸಿಕೊಳ್ಳಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಎನ್. ಗೋಪಾಲ ಹೆಗ್ಡೆ ಮಾತನಾಡಿ, ರಾಜ ಕಾರಣವೆಂದರೆ ಜನ ಗೌರವಿಸು ವಂತಾಗಲು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಆದರ್ಶಗಳು ಸರ್ವತ್ರ ಗೋಚರಿಸಬೇಕಾಗಿದೆ ಎಂದರು.ನೆಕ್ಕಿಲಾಡಿ ಬಿಜೆಪಿ ಘಟಕದ ರಾಜೇಶ್ ರಾವ್, ಉಪ್ಪಿನಂಗಡಿ ಬಿಜೆಪಿ ಘಟಕದ ಸುರೇಶ್ ಅತ್ರಮಜಲು, ಅನೂಪ್ ಸಿಂಗ್, ಆದರ್ಶ್ ಶೆಟ್ಟಿ, ಕೇಶವ ರಂಗಾಜೆ, ಉಷಾ ಮುಳಿಯ, ಕೃಷ್ಣವೇಣಿ, ಸುಮನ್ ಲದ್ವಾ, ಪ್ರಸಾದ್ ಭಂಡಾರಿ, ಶಿಲ್ಪಾ ಆಚಾರ್ಯ, ಗಂಗಾಧರ ಟೈಲರ್ ಉಪಸ್ಥಿತರಿದ್ದರು.
ತಾಲೂಕು ಯುವ ಬಿಜೆಪಿ ಅಧ್ಯಕ್ಷ ಸುನಿಲ್ ದಡ್ಡು ಸ್ವಾಗತಿಸಿ, ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ ವಂದಿಸಿದರು.