Advertisement
ಮುಂಜಾನೆಯಿಂದಲೇ ದೇವಾಲಯಗಳತ್ತ ಧಾವಿಸಿದ ಸಾವಿರಾರು ಮಂದಿ ಶಿವ ಭಕ್ತರು ಶಿವನ ದರ್ಶನ ಪಡೆದು ಶ್ರದ್ಧಾ, ಭಕ್ತಿಯಿಂದ ಮಹಾಶಿವರಾತ್ರಿ ಹಬ್ಬ ಆಚರಿಸಿದರು. ಆ ಮೂಲಕ ದಿನವಿಡೀ ಶಿವನ ಆರಾಧನೆಯಲ್ಲಿ ತಲ್ಲೀನರಾದ ಭಕ್ತರು ಪರಶಿವನ ಸ್ಮರಣೆ ಮಾಡುತ್ತಾ ಜಾಗರಣೆ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾದರು.
Related Articles
Advertisement
ಅದರಂತೆ ಶಿರಡಿ ಸಾಯಿ ಸೇವಾಶ್ರಮಟ್ರಸ್ಟ್‌ನಿಂದ ಶಿವರಾತ್ರಿ ಅಂಗವಾಗಿ ಶಿವಗಣ ಹೋಮ, ಸಂಕಲ್ಪ, ಪುಷ್ಪಾರ್ಚನೆ, ಅಭಿಷೇಕ, ಭಜನೆ, ಪ್ರಸಾದ ವಿನಿಯೋಗ ನಡೆಯಿತು. ಲಷ್ಕರ್ ಮೊಹಲ್ಲಾದ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರ ಉತ್ಸವಮೂರ್ತಿ, ಸುವರ್ಣ ಕೊಳಗದ ಮೆರವಣಿಗೆ, ಮಹದೇಶ್ವರ ಸ್ವಾಮಿ ಪ್ರಾಣಲಿಂಗಕ್ಕೆ ಮಹಾರುದ್ರಾಭಿಷೇಕ ಇನ್ನಿತರ ಪೂಜೆಗಳು ನಡೆದವು.
ಉಳಿದಂತೆ ಚಾಮುಂಡಿಬೆಟ್ಟದ ಮಹಾಬಲೇಶ್ವರ ಸ್ವಾಮಿದೇವಸ್ಥಾನ, ಗಂಗೋತ್ರಿ ಬಡಾವಣೆಯಲ್ಲಿರುವ ಮಾರುತಿ ದೇವಸ್ಥಾನ, ಹಳೆಸಂತೇಪೇಟೆ ಪ್ರಸನ್ನ ನಂಜುಂಡೇಶ್ವರ ಸ್ವಾಮಿದೇವಸ್ಥಾನ, ಖೀಲ್ಲೆ ಮೊಹಲ್ಲಾ ಬೈರವೇಶ್ವರಸ್ವಾಮಿ ದೇವಸ್ಥಾನ, ಅಗ್ರಹಾರದ ನೂರೊಂದು ಗಣಪತಿದೇವಸ್ಥಾನ, ನಾಗಲಿಂಗೇಶ್ವರ ಮಠ, ವೀರನಗೆರೆ ಮುಕ್ಕಣ್ಣೇಶ್ವರಸ್ವಾಮಿ ದೇವಾಲಯ, ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಾಲಯ, ದೇವರಾಜ ಮೊಹಲ್ಲಾ ದಿವಾನ್ಸ್‌ರಸ್ತೆ ಅಮೃಧಿತೇಶ್ವರ ದೇವಾಲಯ, ವಿವಿ ಮೊಹಲ್ಲಾದ ಚಂದ್ರಮೌಳೇಶ್ವರ ದೇವಾಲಯ, ಕುರುಬಾರಹಳ್ಳಿ ಮಲೆ ಮಹದೇಶ್ವರ ಸ್ವಾಮಿದೇವಾಲಯ, ಚಾಮುಂಡಿಪುರಂನ ಪ್ರಸನ್ನ ವಿರೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.
ಮಳೆಯಾಗದೆ ಬರಗಾಲ ಬಂದಿರುವುದರಿಂದ ಜನ-ಜಾನುವಾರುಗಳಿಗೆ ತೊಂದರೆ ಉಂಟಾಗಿದೆ. ಈ ವರ್ಷವಾದರೂ ಉತ್ತಮ ಮಳೆಯಾಗಿ ಬರಗಾಲ ನಿವಾರಣೆಯಾಗಲಿ ಎಂದು ತ್ರಿನೇಶ್ವರ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ.-ಡಾ.ಪ್ರಮೋದಾದೇವಿ ಒಡೆಯರ್, ರಾಜ ವಂಶಸ್ಥರು.