Advertisement
ಶಿವ ನಾಮಸ್ಮರಣೆ: ಜಿಲ್ಲಾದ್ಯಂತ ಸೋಮವಾರ ಆಚರಿಸಿದ ಮಹಾ ಶಿವರಾತ್ರಿ ಹಬ್ಬದ ವೇಳೆ ಜಿಲ್ಲೆಯಲ್ಲಿ ಕಂಡು ಬಂದ ಪ್ರಮುಖ ದೃಶ್ಯಗಳು ಇವು. ಶಿವನ ಆರಾಧನೆಗಾಗಿ ಎಂದಿನಂತೆ ಕುಟುಂಬಸ್ಥರೊಂದಿಗೆ ಶಿವನ ದೇಗುಲಗಳಿಗೆ ಆಗಮಿಸಿ ಶಿವನ ದರ್ಶನ ಪಡೆದ ಭಕ್ತರು, ಶ್ರದ್ಧಾಭಕ್ತಿಯಿಂದ ಆರಾಧ್ಯ ದೈವನಿಗೆ ನೈವೇದ್ಯ, ಕ್ಷೀರಾಭಿಷೇಕ, ಹೋಮ, ಹವನ ಮಾಡಿಸಿ ಶಿವ ನಾಮಸ್ಮರಣೆಯಲ್ಲಿ ಮುಳುಗಿದ್ದರು.
Related Articles
Advertisement
ಪ್ರಸಾದ ಹಂಚಿಕೆಗೆ ನಿಷೇಧ: ಶಿವರಾತ್ರಿ ಪ್ರಯುಕ್ತ ದೇವಾಲಯಗಳ ಸಮೀಪ ಭಕ್ತರ ಜನಸಂದಣಿ ಹೆಚ್ಚಾಗಿದ್ದ ಕಾರಣ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ದೇವಾಲಯಗಳ ಸಮೀಪ ವಿಶೇಷ ಪೊಲೀಸ್ ಬಂದೋಬಸ್ತ್ ವಹಿಸಿದ್ದರು. ಈ ನಡುವೆ ವಿಷ ಪ್ರಸಾದ ಪ್ರಕರಣಗಳು ಜಿಲ್ಲೆಯ ಚಿಂತಾಮಣಿ ಸೇರಿದಂತೆ ರಾಜ್ಯದ ಹಲವೆಡೆ ಕಂಡು ಬಂದಿದ್ದ ಪರಿಣಾಮ ಕೆಲ ದೇವಾಲಯಗಳ ಬಳಿ ಭಕ್ತರಿಗೆ ಪ್ರಸಾದ ಹಂಚಿಕೆ ಮಾಡಲು ಜಿಲ್ಲಾಡಳಿತ ನಿಷೇಧ ಏರಿತ್ತು.
ಶಿವನ ದೇಗುಲಗಳಲ್ಲಿ ಜನಸಾಗರ: ಮಹಾ ಶಿವರಾತ್ರಿ ಪ್ರಯುಕ್ತ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಶಿವನ ದೇವಾಲಯಗಳಿಗೆ ಭೇಟಿ ನೀಡಿದ್ದರು. ಭಕ್ತರ ಅನುಕೂಲಕ್ಕಾಗಿ ದೇವರ ದರ್ಶನ ಮಾಡಲು ತಡೆಗೋಡೆಗಳನ್ನು ನಿರ್ಮಿಸಿ ಸರದಿ ಸಾಲಿನಲ್ಲಿ ಭಕ್ತರನ್ನು ದೇವರ ದರ್ಶನಕ್ಕಾಗಿ ಒಳ ಬಿಡಲಾಗುತ್ತಿದ್ದ ದೃಶ್ಯಗಳು ದೇವಾಲಯಗಳಲ್ಲಿ ಕಂಡು ಬಂತು.
ಚಿಕ್ಕಬಳ್ಳಾಪುರದ ನಂದಿಯ ಬೋಗನಂದಿಶ್ವರ ದೇವಾಲಯದಲ್ಲಿ ಭಕ್ತರು ದಂಡು ನೆರೆದಿತ್ತು. ಬೋಗನಂದಿಶ್ವರನಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ಚಿಂತಾಮಣಿಯ ಐತಿಹಾಸಿಕ ನಾಗನಾಥೇಶ್ವರಸ್ವಾಮಿ ದೇಗುಲದಲ್ಲಿ ಧಾರ್ಮಿಕ ಕೈಂಕರ್ಯ ನೆರವೇರಿದವು. ಮುರಗಮಲೆ ಮುಕ್ತಿಶ್ವರಸ್ವಾಮಿ ದೇವಾಲಯ, ಅಂಬಾಜಿದುರ್ಗದ ಕೈಲಾಸಗಿರಿ ಗವಿ ಗಂಗಧಾರೇಶ್ವರಸ್ವಾಮಿ ಹಾಗೂ ಗೌರಿಬಿದನೂರು ವಿಧುರಾಶ್ವತ್ಥಕ್ಕೆ ಭಕ್ತರ ಜನಸಾಗರವೇ ಹರಿದು ಬಂದಿತ್ತು.