Advertisement

ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್‌: ಕಾನ್ವೆ ಶತಕ; ಚೇತರಿಸಿದ ಕಿವೀಸ್‌

10:26 PM Jan 01, 2022 | Team Udayavani |

ಮೌಂಟ್‌ ಮೌಂಗನಿ: ನ್ಯೂಜಿಲ್ಯಾಂಡಿನ ಅಗ್ರ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌ ಡೆವೋನ್‌ ಕಾನ್ವೆ ನೂತನ ವರ್ಷದ ಮೊದಲ ದಿನವೇ ಶತಕ ಬಾರಿಸಿ ಟೆಸ್ಟ್‌ ಕ್ರಿಕೆಟಿಗೆ ಅದ್ಧೂರಿ ಆರಂಭ ನೀಡಿದ್ದಾರೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಶನಿವಾರ ಇಲ್ಲಿನ “ಬೇ ಓವಲ್‌’ನಲ್ಲಿ ಮೊದಲ್ಗೊಂಡ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ 5 ವಿಕೆಟಿಗೆ 258 ರನ್‌ ಪೇರಿಸಿದೆ. ಇದರಲ್ಲಿ ಕಾನ್ವೆ ಕೊಡುಗೆ 122 ರನ್‌.

Advertisement

ಇದು ಡೆವೋನ್‌ ಕಾನ್ವೆ ಅವರ 4ನೇ ಟೆಸ್ಟ್‌ ಹಾಗೂ ತವರಲ್ಲಿ ಆಡುತ್ತಿರುವ ಮೊದಲ ಟೆಸ್ಟ್‌ ಪಂದ್ಯ. ಕಳೆದ ಇಂಗ್ಲೆಂಡ್‌ ಪ್ರವಾಸದ ಪದಾರ್ಪಣ ಟೆಸ್ಟ್‌ನಲ್ಲೇ 200 ರನ್‌ ಬಾರಿಸಿ ಮೆರೆದಿದ್ದ ಕಾನ್ವೆ, ಅನಂತರ ಗಾಯಾಳಾಗಿ ಭಾರತ ಪ್ರವಾಸದಿಂದ ಹೊರಗುಳಿದಿದ್ದರು. ಇದೀಗ ಮರಳಿ ರನ್‌ ಪ್ರವಾಹ ಹರಿಸತೊಡಗಿದ್ದಾರೆ.

138 ರನ್‌ ಜತೆಯಾಟ
4ನೇ ಓವರ್‌ನಲ್ಲೇ ನಾಯಕ ಟಾಮ್‌ ಲ್ಯಾಥಂ (1) ವಿಕೆಟ್‌ ಬಿದ್ದ ಬಳಿಕ ವಿಲ್‌ ಯಂಗ್‌-ಕಾನ್ವೆ ಸೇರಿಕೊಂಡು ತಂಡದ ನೆರವಿಗೆ ನಿಂತರು. ದ್ವಿತೀಯ ವಿಕೆಟಿಗೆ 138 ರನ್‌ ಪೇರಿಸಿ ಬಾಂಗ್ಲಾ ಬೌಲರ್‌ಗಳಿಗೆ ಬೆವರಿಳಿಸಿದರು. 80ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಕಾನ್ವೆ 227 ಎಸೆತ ನಿಭಾಯಿಸಿ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್‌ ಒಳಗೊಂಡಿತ್ತು.

ಇದನ್ನೂ ಓದಿ:ಪ್ರೊ ಕಬಡ್ಡಿ: ಬುಲ್ಸ್‌-ಟೈಟಾನ್ಸ್‌, ಮುಂಬಾ-ಯೋಧ ಟೈ ರೋಮಾಂಚನ

ವಿಲ್‌ ಯಂಗ್‌ 135 ಎಸೆತಗಳಿಂದ 52 ರನ್‌ ಹೊಡೆದರು (6 ಬೌಂಡರಿ). 49ನೇ ಓವರ್‌ನಲ್ಲಿ ಯಂಗ್‌ ರನೌಟ್‌ ಆಗುವುದರೊಂದಿಗೆ ಬಾಂಗ್ಲಾ ಬೌಲರ್ ತುಸು ಮೇಲುಗೈ ಸಾಧಿಸಿದರು. ರಾಸ್‌ ಟೇಲರ್‌ 31 ರನ್‌ ಮಾಡಿದರೆ, ಟಾಮ್‌ ಬ್ಲಿಂಡೆಲ್‌ 11 ರನ್ನಿಗೆ ವಿಕೆಟ್‌ ಒಪ್ಪಿಸಿದರು. ಅಲ್ಲಿಗೆ ದಿನದಾಟವನ್ನು ಕೊನೆಗೊಳಿಸಲಾಯಿತು. 32 ರನ್‌ ಮಾಡಿದ ಹೆನ್ರಿ ನಿಕೋಲ್ಸ್‌ ಕ್ರೀಸಿನಲ್ಲಿದ್ದಾರೆ.

Advertisement

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌- 5 ವಿಕೆಟಿಗೆ 258 (ಕಾನ್ವೆ 122, ಯಂಗ್‌ 52, ನಿಕೋಲ್ಸ್‌ ಬ್ಯಾಟಿಂಗ್‌ 32, ಟೇಲರ್‌ 31, ಶೊರೀಫ‌ುಲ್‌ 53ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next