Advertisement

ODI ; ಕಾನ್ವೇ, ಮಿಚೆಲ್‌ ಸೆಂಚುರಿ ನ್ಯೂಜಿಲ್ಯಾಂಡ್‌ ಪ್ರಚಂಡ ಚೇಸಿಂಗ್‌

11:39 PM Sep 09, 2023 | Team Udayavani |

ಕಾರ್ಡಿಫ್: ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ಎದುರಿನ ಕಾರ್ಡಿಫ್ ಕದನದಲ್ಲಿ ನ್ಯೂಜಿಲ್ಯಾಂಡ್‌ 8 ವಿಕೆಟ್‌ಗಳ ಜಯದೊಂದಿಗೆ ಏಕದಿನ ಸರಣಿಯನ್ನು ಭರ್ಜರಿಯಾಗಿ ಆರಂಭಿಸಿದೆ. ಡೇವನ್‌ ಕಾನ್ವೇ ಮತ್ತು ಡ್ಯಾರಿಲ್‌ ಮಿಚೆಲ್‌ ಅವರ ಶತಕ ಕಿವೀಸ್‌ ಸರದಿಯ ವಿಶೇಷವಾಗಿತ್ತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 6 ವಿಕೆಟಿಗೆ 291 ರನ್‌ ರಾಶಿ ಹಾಕಿತು. ಪ್ರವಾಸಿ ನ್ಯೂಜಿಲ್ಯಾಂಡ್‌ 45.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 297 ರನ್‌ ಬಾರಿಸಿತು. ಆರಂಭಕಾರ ಡೇವನ್‌ ಕಾನ್ವೇ 111 ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಡ್ಯಾರಿಲ್‌ ಮಿಚೆಲ್‌ 118 ಬಾರಿಸುವ ಜತೆಗೆ, ಅಜೇಯ 180 ರನ್‌ ಜತೆಯಾಟ ನಡೆಸಿ ಆಂಗ್ಲ ಬೌಲರ್‌ಗಳಿಗೆ ಬೆವರಿಳಿಸಿದರು.

ಇಂಗ್ಲೆಂಡಿಗೆ ಉರುಳಿಸಲು ಸಾಧ್ಯವಾದದ್ದು 2 ವಿಕೆಟ್‌ ಮಾತ್ರ. ವಿಲ್‌ ಯಂಗ್‌ (29) ಮತ್ತು ಹೆನ್ರಿ ನಿಕೋಲ್ಸ್‌ (26) ಪೆವಿಲಿಯನ್‌ ಸೇರಿಕೊಂಡ ಬಳಿಕ ಕಾನ್ವೇ-ಮಿಚೆಲ್‌ ಜೋಡಿಯ ಪರಾಕ್ರಮ ಮೊದಲ್ಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next