Advertisement
ಕಳೆದ ನಾಲ್ಕು ವರ್ಷಗಳ ಹಿಂದೆ ಕಿರಿಗೆಡಿಗಳು ನಿಧಿ ಆಸೆಗಾಗಿ ಪಾರ್ವತಮ್ಮ ಬೆಟ್ಟದ ಸುತ್ತಲೂ ಹೊಂಚುಹಾಕಿ ನಂತರ ತಡರಾತ್ರಿ ದೇವಾಲಯದ ಒಳಗಡೆ ನುಗ್ಗಿ ದೊಡ್ಡ ದೊಡ್ಡ ಗುಂಡಿಗಳನ್ನ ತೋಡಿ ನಿಧಿಗಾಗಿ ಹುಡುಕಾಟ ನಡೆಸಿದ್ದರು. ನಿಧಿ ಸಿಗದೇ ಇದ್ದಾಗ ದೇವಿಯ ವಿಗ್ರಹವನ್ನು ವಿರೂಪಗೊಳಿಸಿ ಅಲ್ಲಿಂದ ಪರಾರಿಯಾಗಿದ್ದರು.ನಂತರ ದೇವಾಲಯ ಸಮಿತಿಯವರು ಏನಾದರೂ ಮಾಡಿ ದೇವಿಯ ವಿಗ್ರಹವನ್ನು ಮಾಡಿಸಲೇಬೇಕೆಂದು ನಿರ್ಧರಿಸಿ ಮೈಸೂರುನಲ್ಲಿ ಸುಮಾರು ನಾಲ್ಕು ಲಕ್ಷ ರೂಗಳ ವೆಚ್ಚದಲ್ಲಿ ದೇವಿಯ ನೂತನ ವಿಗ್ರಹವನ್ನುಮಾಡಿಸಿ ಭಾನುವಾರ ಅದನ್ನ ಬೆಟ್ಟದ ಮೇಲಿರುವ ದೇವಾಲಯಕ್ಕೆ ಎರಡು ಟ್ರ್ಯಾಕ್ಟರ್ ಮೂಲಕ ಕೊಂಡೊಯ್ಯಲಾಯಿತು. ಫೆಬ್ರುವರಿ ತಿಂಗಳಲ್ಲಿ ದೇವಿಯ ಜಾತ್ರೆ ಇರುವುದರಿಂದ ಅಂದು ದೇವಿಯ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಿ ಪೂಜಿಸಲಾಗುವುದು ಎಂದು ತಿಳಿದು ಬಂದಿದೆ.