ಮುಂಬಯಿ: ಔರಂಗಜೇಬ್ ಸಮಾಧಿ ಮೇಲೆ ನಾಯಿ ಕೂಡ ಮೂತ್ರ ವಿಸರ್ಜಿಸುವುದಿಲ್ಲ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಭಾನುವಾರ ಅಸಾದುದ್ದೀನ್ ಓವೈಸಿ ವಿರುದ್ಧ ಕಿಡಿ ಕಾರಿದ್ದಾರೆ.
Advertisement
ಅಸಾದುದ್ದೀನ್ ಓವೈಸಿ ಹೋಗಿ ಔರಂಗಜೇಬ್ ಅವರ ಸಮಾಧಿಯ ಮೇಲೆ ಹಣೆಯಿಟ್ಟು ಗೌರವ ಸಲ್ಲಿಸುತ್ತಾನೇ. ನೀವು ಅದನ್ನು ನೋಡುತ್ತಿರುತ್ತೀರಿ, ನಿಮಗೆ ನಾಚಿಕೆಯಾಗಬೇಕು ಎಂದು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರದ ವಿರುದ್ಧ ಕಿಡಿ ಕಾರಿದರು.
ಸಭೆಯಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಇತರ ಬಿಜೆಪಿ ನಾಯಕರು ‘ಹನುಮಾನ್ ಚಾಲೀಸಾ’ ಪಠಿಸಿದರು.