Advertisement

ಅಡಕತ್ತರಿಯಲ್ಲಿ ಫ‌ಡ್ನವಿಸ್‌ ಸಂಪುಟ ವಿಸ್ತರಣೆ:ಹಲವರಿಗೆ ಕೊಕ್‌?

12:04 PM Oct 19, 2017 | Team Udayavani |

ಮುಂಬಯಿ: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಡೆಗೂ ಮುಹೂರ್ತ ಒದಗಿಬಂದಿದ್ದು, ದೀಪಾವಳಿಯ ಅನಂತರ ವಿಸ್ತರಣೆ ಮತ್ತು ಪುನಾರಚನೆ ನಡೆಯಲಿದೆ ಎಂದು ಸ್ವತಃ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ದೃಢಪಡಿಸಿದ್ದಾರೆ.

Advertisement

ಇದೇ ವೇಳೆ ಕಾಂಗ್ರೆಸ್‌ ತೊರೆದು ಮಹಾರಾಷ್ಟ್ರ ಸ್ವಾಭಿಮಾನ್‌ ಪಕ್ಷವನ್ನು ಸ್ಥಾಪಿಸಿರುವ ಹಿರಿಯ ರಾಜಕೀಯ ನೇತಾರ ನಾರಾಯಣ್‌ ರಾಣೆ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಸುಳಿವನ್ನು ನೀಡಿದ ಫ‌ಡ್ನವೀಸ್‌,  ಮಾಜಿ ಮುಖ್ಯಮಂತ್ರಿ ನಾರಾಯಣ್‌ ರಾಣೆ ಅವರು ಈಗ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಭಾಗವಾಗಿದ್ದು, ಅವರ ಬಗ್ಗೆ ಯೋಗ್ಯ ನಿರ್ಣಯವೊಂದನ್ನು ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ರಾಣೆ ಅವರು ತಮ್ಮ ಹಿರಿತನ ಮತ್ತು ಅನುಭವ ವನ್ನು ಪರಿಗಣಿಸಿ ಯೋಗ್ಯ ಖಾತೆಯನ್ನು ನೀಡಬೇಕೆಂಬ ಬೇಡಿಕೆಯಿಟ್ಟಿ ದ್ದಾರೆ. ರಾಜಕೀಯ ವಲಯದ ಮೂಲಗಳು ಹೇಳುವ ಪ್ರಕಾರ ಕಂದಾಯ, ಲೋಕೋಪ ಯೋಗಿ ಇಲಾಖೆಯಂತಹ ಪ್ರಮುಖ ಖಾತೆಗಳ ಮೇಲೆ ರಾಣೆ ಕಣ್ಣು ಹಾಕಿದ್ದಾರೆ. 

ತಮ್ಮ ಅಧಿಕೃತ ನಿವಾಸ ವರ್ಷಾ ಬಂಗಲೆ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫ‌ಡ್ನವೀಸ್‌, ಸಂಪುಟ ಪುನಾರಚನೆ ಶೀಘ್ರದಲ್ಲೇ ನಡೆಯಲಿದ್ದು, ದೀಪಾವಳಿ ಮುಗಿದ ಬಳಿಕ ತತ್‌ಕ್ಷಣ ನಡೆಯುವ ಸಾಧ್ಯತೆಯಿದೆ ಎಂದು ನುಡಿದಿದ್ದಾರೆ. ಸಂಪುಟದಲ್ಲಿ ಕಳ‌ಪೆ ನಿರ್ವಹಣೆ ನೀಡಿರುವ ಸಚಿವರನ್ನು ಕೈಬಿಡುವ ಸುಳಿವು ನೀಡಿದ್ದಾರೆ. ಇದಕ್ಕೂ ಮೊದಲು ಮುಖ್ಯಮಂತ್ರಿ ಫಡ್ನವೀಸ್‌ ಅವರು ಶನಿವಾರ ರಾತ್ರಿ ಅಹ್ಮದಾಬಾದ್‌ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರ ನಡುವೆ ಸುಮಾರು 6 ತಾಸುಗಳ ಮಾತುಕತೆ ನಡೆದಿದೆ ಎಂದು ಪಕ್ಷ ಮೂಲಗಳು ತಿಳಿಸಿವೆ.ಮುಖ್ಯವಾಗಿ ಸಂಪುಟ ಪುನಾರಚನೆ ಮತ್ತು ರಾಣೆಯ ಸೇರ್ಪಡೆಯ ಕುರಿತು ಶಾ ಜತೆಗೆ ಫ‌ಡ್ನವಿಸ್‌ ಚರ್ಚಿಸಿದ್ದಾರೆ. 

ರಾಣೆ ಕಾಂಗ್ರೆಸ್‌ ತೊರೆದ ಬಳಿಕ ಮಹಾರಾಷ್ಟ್ರ ಸ್ವಾಭಿಮಾನ ಪಕ್ಷವನ್ನು ಸ್ಥಾಪಿಸಿ, ಇತ್ತೀಚೆಗೆ ಎನ್‌ಡಿಎಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ರಾಣೆ ಅವರು ರಾಜ್ಯದ ಹಿರಿಯ ರಾಜಕೀಯ ನೇತಾರರಲ್ಲಿ ಓರ್ವರಾಗಿರುವ ಕಾರಣ ಅವರಿಗೆ ಪ್ರಮುಖ ಖಾತೆಯನ್ನು ನೀಡಬೇಕೆಂಬುದು ಅವರ ಬೆಂಬಲಿಗರ ಆಶಯವಾಗಿದೆ. ಅದೇ, ಬಿಜೆಪಿಯ ಇತರ ಸಚಿವರು ತಮ್ಮ ಖಾತೆಯನ್ನು ರಾಣೆಗೆ ಬಿಟ್ಟುಕೊಡುವ ಸಂಬಂಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಣೆ ಕಣ್ಣಿಟ್ಟಿರುವ ಕಂದಾಯ ಮತ್ತು ಲೋಕೋಪಯೋಗಿ ಪ್ರಸ್ತುತ ಬಿಜೆಪಿಯ ಪ್ರಮುಖ ನಾಯಕರ ಕೈಯಲ್ಲಿದೆ. ಈ ಖಾತೆಗಳಭು° ಅವರಂದ ಕಿತ್ತುಕೊಂಡರೆ ಪಕ್ಷದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆಯಿರುವುದರಿಂದ ಈ ಸಲದ ಪುನಾರಚನೆ ಫ‌ಡ್ನವಿಸ್‌ ಪಾಲಿಗೆ ಷಗ್ನಿಪರೀಕ್ಷೆಯಾಗಿದೆ. ಇತ್ತ ರಾಣೆಯೂ ಕಡಿಮೆ ಮಹತ್ವದ ಖಾತೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲ, ಅತ್ತ ಬಿಜೆಪಿ ನಾಯಕರು ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲು ತಯಾರಿಲ್ಲ. ಇವರ ಮಧ್ಯೆ ಫ‌ಡ್ನವಿಸ್‌ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. 

Advertisement

ಚಂದ್ರಕಾಂತ್‌ ಪಾಟೀಲ್‌ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ನಿಕಟ ಸಂಬಂಧ ಹೊಂದಿ ರುವ ಕಾರಣ ಅವರ ಖಾತೆ ಬದಲಾವಣೆ ಯಾಗುವುದು ಅಸಾಧ್ಯ ಎನ್ನಲಾಗುತ್ತಿದೆ. ಆದರೆ ರಾಣೆಗೆ ತೃಪ್ತಿದಾಯಕ ಖಾತೆ ಸಿಗದಿದ್ದರೆ, ಅವರು ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ.

ಹಲವರ ಖಾತೆಗೆ ಕತ್ತರಿ
ರಾಜ್ಯ ಸಚಿವ ಸಂಪುಟದಲ್ಲಿ ಕೆಲವು ಸಚಿವರುಗಳ ನಿರ್ವಹಣೆಯಿಂದ ಮುಖ್ಯಮಂತ್ರಿ ಫಡ್ನವೀಸ್‌ ಅವರು ಅತೃಪ್ತರಾಗಿದ್ದು, ಅವರ ಸ್ಥಳದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಈ ಸಂಭಾವ್ಯ ಸಂಪುಟ ವಿಸ್ತರಣೆಯಲ್ಲಿ 2019ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗುವುದು. ಪಶ್ಚಿಮ ಮಹಾರಾಷ್ಟ್ರದಲ್ಲಿ ರಾಜು ಶೆಟ್ಟಿ ಅವರ ಶೇತ್ಕರಿ ಸಂಘಟನೆಯು ಎನ್‌ಡಿಎಯಿಂದ ಬೇರ್ಪಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಿ ಪಕ್ಷವನ್ನು ಬಲಪಡಿಸಲು ಹೊಸ ಮುಖಕ್ಕೆ ಅವಕಾಶ ಸಿಗುವ ಸಾಧ್ಯತೆಯಿದೆ. ಅದೇ ರೀತಿ, ವಿದರ್ಭದಲ್ಲಿ ಕೆಲವು ಸಚಿವರುಗಳ ಖಾತೆಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಅಲ್ಲದೆ, ಸಂಪುಟದಲ್ಲಿ ಸಹಭಾಗಿಯಾಗಲು ಕೆಲವು ಹೊಸ ಶಾಸಕರೂ ಹಾತೊರೆದು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next