Advertisement

ದೇವೇಂದರ್ ಸಿಂಗ್ ಕೇಸ್ : ಎನ್‌ಐಎಯಿಂದ ಮೂರು ವಾಹನಗಳು ವಶ

04:40 PM Feb 18, 2023 | Team Udayavani |

ಶ್ರೀನಗರ : 2021 ರಲ್ಲಿ ಬಂಧನಕ್ಕೊಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಅಧಿಕಾರಿ ದೇವೇಂದರ್ ಸಿಂಗ್ ಅವರ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮೂರು ಖಾಸಗಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ತಿಳಿಸಿದೆ.

Advertisement

ಈ ವಾಹನಗಳನ್ನು ಆರೋಪಿಗಳು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಲು ಬಳಸುತ್ತಿದ್ದರು ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಮಾಜಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ ಸಿಂಗ್ ಅವರನ್ನು ಜನವರಿ 11, 2020 ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾಜಿಗುಂಡ್ ಬಳಿ ಅವರ ಕಾರನ್ನು ಅಡ್ಡಗಟ್ಟಿದಾಗ ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ನವೀದ್ ಬಾಬು, ರಫಿ ಅಹ್ಮದ್ ರಾಥರ್ ಮತ್ತು ವಕೀಲ ಇರ್ಫಾನ್ ಶಫಿ ಮಿರ್ ಅವರೊಂದಿಗೆ ಬಂಧಿಸಲಾಗಿತ್ತು.

ವಾಹನದ ಹುಡುಕಾಟದಲ್ಲಿ ಎಕೆ-47 ರೈಫಲ್, ಮೂರು ಪಿಸ್ತೂಲುಗಳು ಮತ್ತು ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಯುಎಪಿಎಯ ಸೆಕ್ಷನ್ 25 (1) ಅಡಿಯಲ್ಲಿ ಸಂಸ್ಥೆಯು ಬುಧವಾರ ಮೂರು ಕಾರುಗಳನ್ನು ವಶಪಡಿಸಿಕೊಂಡಿದೆ.ಈ ವಾಹನಗಳನ್ನು ಆರೋಪಿಗಳು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸುತ್ತಿದ್ದರು. ಆರೋಪಿ ಮೀರ್ ಮಾಲೀಕತ್ವದ ಮತ್ತು ಬಳಸುತ್ತಿದ್ದ ಕಾರು, ಮುಷ್ತಾಕ್ ಅಹ್ಮದ್ ಷಾ ಹೆಸರಿನಲ್ಲಿ ನೋಂದಣಿ ಮಾಡಿದ್ದ ಕಾರು, ಆತನ ಮಗ (ನವೀದ್ ಬಾಬು) ಬಳಸುತ್ತಿದ್ದ ಕಾರುಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next