Advertisement

ಸಂವಿಧಾನದ ಆದರ್ಶದಿಂದ ಅಭಿವೃದ್ಧಿ ಸಾಧನೆ

12:36 AM Nov 27, 2019 | Lakshmi GovindaRaj |

ಬೆಂಗಳೂರು: ಆಡಳಿತಾತ್ಮಕವಾಗಿ ಸಂವಿಧಾನದ ಆದರ್ಶಗಳನ್ನು ಅಳವಡಿಸಿಕೊಂಡು ರಾಜ್ಯವನ್ನ ಅಭಿವೃದ್ಧಿಯಡೆಗೆ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಂಗಳವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ “ಭಾರತೀಯ ಸಂವಿಧಾನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನದ ಆಶಯಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನುಡಿದರು.

ಸಾಮಾಜಿಕ ಅಸಮಾನತೆಯನ್ನು ಕೊನೆಗೊಳಿಸುವುದು ಹಾಗೂ ಸಮಾಜೋದ್ಧಾರದ ಆಕಾಂಕ್ಷೆಗಳನ್ನು ಹೊಂದಿರುವುದು ಭಾರತದ ಸಂವಿಧಾನದ ವೈಶಿಷ್ಟವಾಗಿದೆ. ಪ್ರಜಾ ಪ್ರಭುತ್ವದಲ್ಲಿ ಸಮಾನತೆ, ಭ್ರಾತೃತ್ವ ಒಟ್ಟಾಗಿ ಸಾಧಿಸುವುದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರ ಪರಿಕಲ್ಪನೆಯಾಗಿತ್ತು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಕೇವಲ ಸರ್ಕಾರದ ಒಂದು ರೂಪವಲ್ಲ. ಪ್ರಮುಖವಾಗಿ ಅದು ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಒದಗಿಸುವ ವಿಧಾನವಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು ಹೇಳಲಾಗಿದೆ. 70 ವರ್ಷಗಳಲ್ಲಿ ಕೇವಲ 94 ತಿದ್ದುಪಡಿಗಳನ್ನು ಮಾಡಲಾಗಿದೆ ಎಂದರು.

ಫ್ರಾನ್ಸ್‌, ಸೋವಿಯತ್‌ ಒಕ್ಕೂಟ, ಐರ್‌ಲ್ಯಾಂಡ್‌, ಹಾಗೂ ಜಪಾನ್‌ ದೇಶಗಳ ಸಂವಿಧಾನಗಳಿಂದ ನಮ್ಮ ದೇಶಕ್ಕೆ ಅನ್ವಯವಾಗುವ ಉತ್ತಮ ಅಂಶಗಳನ್ನು ಸಂವಿಧಾನದಲ್ಲಿ ಅಳಡಿಸಿಕೊಳ್ಳಲಾಗಿದೆ. ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನ ಸ್ಥಾನ ಹಾಗೂ ಅವಕಾಶಗಳನ್ನು ಕಲ್ಪಿಸಲಾಗಿದೆ. ಹಾಗೆಯೇ ಹಕ್ಕುಗಳನ್ನು ಪಡೆಯಲು ಕರ್ತವ್ಯದ ಪಾಲನೆ ಕೂಡ ಅಷ್ಟೇ, ಪ್ರಮುಖವಾಗಿದೆ ಎಂದು ಹೇಳಿದರು.

Advertisement

ಅಲ್ಪಸಂಖ್ಯಾತರಿಗೆ ಹಿಂದುಳಿದವರಿಗೆ ಹಾಗೂ ದೀನ ದಲಿತರಿಗೆ ಸಮರ್ಪಕ ರಕ್ಷಣೆಯನ್ನು ಸಂವಿಧಾನದಲ್ಲಿ ನೀಡಲಾಗಿದೆ. ಸಂವಿಧಾನದ ಆಶಯಗಳನ್ನು ಯಶಸ್ವಿಯಾಗಿ ಕಾರ್ಯ ರೂಪಕ್ಕೆ ತರಲು ಅದರಲ್ಲಿ ಹೇರಿರುವ ಮಿತಿಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದರು. ಮೇಯರ್‌ ಎಂ.ಗೌತಮ್‌ ಕುಮಾರ್‌, ಉಪಮೇಯರ್‌ ಮೋಹನ್‌ ರಾಜ್‌, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ.ಎಸ್‌.ವೀರಯ್ಯ, ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next