ಶಹಾಬಾದ: ನನೆಗುದಿಗೆ ಬಿದ್ದ ರಸ್ತೆ, ಚರಂಡಿ, ಎಲ್ಲೆಂದರಲ್ಲಿಬೆಳೆದು ನಿಂತ ಕಂಟಿ, ರಸ್ತೆ ಮೇಲೆ ಹರಿಯುವ ಕೊಳಚೆ ನೀರು,ಉದ್ಯಾನವನದಲ್ಲಿ ಹಂದಿಗಳ ವಾಸಸ್ಥಾನ. ಇದು ನಗರದ ಕೊಳಸಾಫೈಲ್ ಬಡಾವಣೆ ದುಸ್ಥಿತಿ.ಕಳೆದ ಮೂರು ದಶಕಗಳಿಂದ ಇಲ್ಲಿನ ಜನರು ಮೂಲಭೂತಸೌಕರ್ಯಗಳಿಲ್ಲದೇ ಪರದಾಡುತ್ತಿದ್ದಾರೆ.
ಹಲವಾರು ಬಾರಿ ವಿವಿಧಯೋಜನೆಗಳಲ್ಲಿ ಸಾಕಷ್ಟು ಅನುದಾನ ಬಂದರೂ, ಗುತ್ತಿಗೆದಾರರುಕಳಪೆ ಕಾಮಗಾರಿ ಮಾಡಿ, ಕೈಚೆಲ್ಲಿ ಹೋಗಿದ್ದಾರೆ. ಹೀಗಿದ್ದರೂನಗರಸಭೆ ಅ ಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.ಬಡಾವಣೆಯಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರುಆದರೆ ಆಸ್ಪತ್ರೆಗೆ ಹೋಗಲು ಸಮರ್ಪಕ ಸಂಪರ್ಕ ರಸ್ತೆಯಿಲ್ಲ.
ಹೀಗಾಗಿಇಲ್ಲಿನ ಜನರು ಅನೇಕ ಬಾರಿ ಅ ಧಿಕಾರಿಗಳಿಗೆ, ಶಾಸಕರಿಗೆ ಮನವಿಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಜನರುಆಸ್ಪತ್ರೆಗೆ ರೋಗಿಗಳನ್ನು ತೆಗೆದುಕೊಂಡು ಹೋಗಬೇಕಾದರೆ ರೈಲ್ವೆ ಹಳಿದಾಟಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಅಲ್ಲದೇ ಸಂಪರ್ಕಕಲ್ಪಿಸುವ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರ ಕಾಮಗಾರಿಮಾಡದೇ ಹಾಗೆ ಬಿಟ್ಟಿದ್ದಾರೆ. ಈ ಕುರಿತು ದೂರು ನೀಡಿದರೂನಗರಸಭೆ ಪೌರಾಯುಕ್ತರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲಎಂದು ಬಡಾವಣೆ ಜನರು ಆರೋಪಿಸಿದ್ದಾರೆ.
ನಗರೋತ್ಥಾನ ಮೂರನೇ ಹಂತದ ಯೋಜನೆಯಡಿ ಸುಮಾರುಲಕ್ಷಾಂತರ ರೂ. ಅನುದಾನದಲ್ಲಿ ರಸ್ತೆ ನಿರ್ಮಿಸಲು ಗುತ್ತಿಗೆನೀಡಲಾಗಿದೆ. ಕಳೆದ ಎರಡು ವರ್ಷಗಳಿಂದ ಆರಂಭವಾದಕಾಮಗಾರಿ ಮುಕ್ತಾಯವೇ ಆಗುತ್ತಿಲ್ಲ. ಎರಡು ವರ್ಷಗಳ ಹಿಂದೆಬಡಾವಣೆಯಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ ಎನ್ನುವ ಸುದ್ದಿ ಕೇಳಿಜನರು ಬಹಳ ಸಂತೋಷಪಟ್ಟಿದ್ದರು.
ಆದರೆ ರಸ್ತೆ ಸಮತಟ್ಟುಮಾಡದೇ ಕೇವಲ ಕಂಕರ್ ಹಾಕಿ ಹೋದ ಗುತ್ತಿಗೆದಾರರು ಮತ್ತೆಈ ಕಡೆ ತಲೆ ಹಾಕಿಲ್ಲ. ಇದರಿಂದ ರಸ್ತೆ ಸಂಚಾರಕ್ಕೆ ಸಂಚಕಾರವಾಗಿಪರಿಣಮಿಸಿದೆ.ಎರಡು ವರ್ಷದಿಂದ ಕೆಲಸ ಮಾಡದ ಗುತ್ತಿಗೆದಾರನ ವಿರುದ್ಧವೂಕ್ರಮಕೈಗೊಳ್ಳುತ್ತಿಲ್ಲ. ರಸ್ತೆ ನಿರ್ಮಾಣ ಮಾಡಲು ತಾಕೀತು ಮಾಡುತ್ತಿಲ್ಲ.ಗುತ್ತಿಗೆದಾರನಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಬಡಾವಣೆಯಲ್ಲಿಎಲ್ಲೆಂದರಲ್ಲಿ ಕಂಟಿಗಳು ಬೆಳೆದಿವೆ. ಹಂದಿಗಳ ಕಾಟ ಹೆಚ್ಚಾಗಿದೆ.
ಕೊಳಚೆನೀರು ರಸ್ತೆಯ ಮೇಲೆ ಹರಿದು ಉದ್ಯಾನವನದ ಜಾಗದೊಳಗೆಸೇರುತ್ತಿದೆ. ಈ ಬಗ್ಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಇದರಿಂದ ಇಲ್ಲಿನ ಜನರು ರೋಸಿ ಹೋಗಿದ್ದಾರೆ. ಈಗಲಾದರೂಅ ಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿ ಕಾಮಗಾರಿ ನಿರ್ಮಾಣಕ್ಕೆಮುಂದಾಗುವರೇ ಎಂದು ಕಾಯ್ದು ನೋಡಬೇಕಿದೆ.