Advertisement

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

12:52 AM Sep 18, 2024 | Team Udayavani |

ಮಂಗಳೂರು: ಮಹಾ ನಗರ ಪಾಲಿಕೆಯಲ್ಲಿ 138.18 ಕೋ. ರೂ. ವೆಚ್ಚದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ 58.34 ಕೋ. ರೂ. ವೆಚ್ಚದಲ್ಲಿ ಕೈಗೊಳ್ಳುವ ವಿವಿಧ ಅಭಿವೃದ್ಧಿ ಯೋಜನೆಗೆ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮಂಗಳವಾರ ಚಾಲನೆ ನೀಡಿದರು.

Advertisement

ಮೇಯರ್‌ ಮಾತನಾಡಿ, ಪಾಲಿಕೆಯ ಒಂದು ವರ್ಷದ ಅವ ಧಿಯಲ್ಲಿ ಪಾರದರ್ಶಕ ಆಡಳಿತ ನಡೆಸಿರುವ ಸಂತೃಪ್ತಿ ಇದೆ. ಪಕ್ಷ ನೀಡಿದ ಹೊಣೆಯನ್ನು ನಿಭಾಯಿಸಿದ್ದೇನೆ. ತನ್ನ ಅಧಿಕಾರಾವಧಿಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿ ಜಾತಿ, ಧರ್ಮ ಭೇದವಿ ಲ್ಲದೆ ಎಲ್ಲರನ್ನೂ ಸಮಾನವಾಗಿ ಪರಿ ಗಣಿಸಲಾಗಿದೆ. ಆಡಳಿತ ಪಕ್ಷ, ವಿಪಕ್ಷಗಳು ಹಾಗೂ ಪಾಲಿಕೆ ಅಧಿಕಾರಿಗಳು ಪಾರದರ್ಶಕ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಸುಧೀರ್‌ ಶೆಟ್ಟಿ ಮೇಯರ್‌ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯಗಳಾಗಿವೆ. ಪಾಲಿಕೆ ಯ ಆದಾಯ ಹೆಚ್ಚಿಸುವ ಕಾರ್ಯ ಸೇರಿದಂತೆ ಜನಪರ ಕಾರ್ಯ ಗಳು ನೆರವೇರಿವೆ ಎಂದು ಶ್ಲಾಘಿಸಿದರು.

ಶಾಸಕ ಡಾ| ವೈ. ಭರತ್‌ ಶೆಟ್ಟಿ ಮಾತನಾಡಿ, ಪಾಲಿಕೆಯಲ್ಲಿ ಸುಧೀರ್‌ ಶೆಟ್ಟಿ ಮೇಯರ್‌ ಅವಧಿ ಗಮನಾರ್ಹ. ಕಾರ್ಪೊರೇಟರ್‌ಗಳು ಹಾಗೂ ಅಧಿಕಾರಿ ವಲಯದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ನಿಭಾಯಿಸಿ ಎಲ್ಲರ ಸಹಕಾರ ಪಡೆದು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಈಗ ಶಿಲಾನ್ಯಾಸ ಆಗಿರುವ ಕಾಮಗಾರಿಗಳು ತ್ವರಿಗತಿಯಲ್ಲಿ ಪೂರ್ಣಗೊಳಿಸಲು ಮುಂದಿನ ಮೇಯರ್‌ ಶ್ರಮಿಸಬೇಕು ಎಂದು ಹೇಳಿದರು.

ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಮಾತನಾಡಿ, ನಗರದ ಅಭಿವೃದ್ಧಿ ವಿಚಾರದಲ್ಲಿ ಹಾಗೂ ಜನರ ಸಮಸ್ಯೆಗಳ ಬಗ್ಗೆ ಎಚ್ಚರಿಸುವ ಕೆಲಸವನ್ನು ವಿಪಕ್ಷವಾಗಿ ಮಾಡಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ್ದೇವೆ. ಸುಧೀರ್‌ ಶೆಟ್ಟಿ ಅವರಿಂದ ಉತ್ತಮ ಕಾರ್ಯಗಳು ನಡೆದಿವೆ ಎಂದರು.
ಉಪಮೇಯರ್‌ ಸುನೀತಾ, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಜಿ ಮೇಯರ್‌ಗಳಾದ ದಿವಾಕರ್‌ ಪಾಂಡೇಶ್ವರ, ಎಂ. ಶಶಿಧರ್‌ ಹೆಗ್ಡೆ, ಭಾಸ್ಕರ್‌ ಮೊಲಿ, ಜಯಾನಂದ್‌ ಅಂಚನ್‌ ಮುಂತಾದವರು ಉಪಸ್ಥಿತರಿದ್ದರು.

Advertisement

ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವಲಯ
ನನ್ನ ಅವಧಿಯಲ್ಲಿ ಶ್ರೀ ನಾರಾಯಣ ಗುರು ಜಯಂತಿಗಾಗಿ ಗುರು ಮಂದಿರಗಳಿಗೆ ತಲಾ 15 ಸಾವಿರ ರೂ. ನೀಡಲಾಗಿದೆ. ಅಂಬೇಡ್ಕರ್‌ ಪ್ರತಿಮೆ ಸಹಿತ ವೃತ್ತ ನಿರ್ಮಾಣಕ್ಕೆ ಶಾಸಕರು ಹಾಗೂ ವಿಪಕ್ಷದವರು ಸಹಕಾರ ನೀಡಿದ್ದಾರೆ. ಮೃತ ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ರೂ., 75 ಮೀ. ಎತ್ತರದ ಧ್ವಜಸ್ತಂಭ ನಿರ್ಮಾಣ, 10 ಸಾವಿರ ಗಿಡ ನೆಡುವ ಕಾರ್ಯಕ್ರಮ, ಪ್ರಕೃತಿ ವಿಕೋಪದಲ್ಲಿ ಮಡಿದವರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ, ಪ್ರತಿಭಾನ್ವಿತ ಕನ್ನಡ ಮಾಧ್ಯಮ ಶಾಲೆ ಮಕ್ಕಳಿಗೆ ಪ್ರೋತ್ಸಾಹಧನ, ಟೈಗರ್‌ ಕಾರ್ಯಾಚರಣೆ ಜತೆಗೆ ಬೀದಿ ವ್ಯಾಪಾರಿಗಳಿಗೆ ವ್ಯಾಪಾರಿ ವಲಯ ನಿರ್ಮಾಣ, ಜನಸ್ಪಂದನ ಕಾರ್ಯಕ್ರಮಗಳು ಹೀಗೆ ಹಲವು ಕಾರ್ಯಗಳು ನಡೆದಿವೆ. ಎಲ್ಲದಕ್ಕೂ ಸರ್ವರೂ ಉತ್ತಮ ಸಹಕಾರ ನೀಡಿದ್ದಾರೆ ಎಂದು ಸುಧೀರ್‌ ಶೆಟ್ಟಿ ಕಣ್ಣೂರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next