Advertisement

ಲೋಕೋಪಯೋಗಿ ಇಲಾಖೆ: ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣ

12:17 AM Mar 04, 2021 | Team Udayavani |

ಉಡುಪಿ: ಲೋಕೋಪಯೋಗಿ ಇಲಾಖೆಯ ವತಿಯಿಂದ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರ ಅನುದಾನದಲ್ಲಿ ನಗರದ ವಿವಿಧ ರಸ್ತೆಗಳ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಕೆಲಸಗಳು ಆರಂಭಗೊಂಡಿದ್ದು, ಮೇ ಅಂತ್ಯಕ್ಕೆ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ.

Advertisement

ಡಿಸಿ ಕಚೇರಿ ಸಂಪರ್ಕಿಸುವ ರಸ್ತೆ ವಿಸ್ತರಣೆ
ಮಣಿಪಾಲದ ಸಿಂಡಿಕೇಟ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸುವ ಕಾಯಿನ್‌ ಸರ್ಕಲ್‌ವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರದ 2.50 ಕೋ.ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, 3 ದಿನಗಳೊಳಗೆ ಈ ಕಾಮಗಾರಿ ಮುಕ್ತಾಯವಾಗಲಿದೆ. ಪ್ರಸ್ತುತ ಇರುವ 7 ಮೀಟರ್‌ಗಳಿಂದ 9 ಮೀಟರ್‌ಗೆ ಈ ರಸ್ತೆಯನ್ನು ವಿಸ್ತರಣೆ ಮಾಡಲಾಗುತ್ತಿದೆ. ಇದೇ ರೀತಿ ಅಂಬಾಗಿಲು- ಪೆರಂಪಳ್ಳಿ ರಸ್ತೆ 3.50 ಕೋ.ರೂ., ರೈಲ್ವೇ ಬ್ರಿಡ್ಜ್ ಬಳಿ 2.50 ಕೋ.ರೂ. ವೆಚ್ಚದಲ್ಲಿ ದುರಸ್ತಿಯಾಗಲಿದೆ.

ಪೈಪ್‌ಲೈನ್‌ಗಳ ಸ್ಥಳಾಂತರ
ರಸ್ತೆ ನಿರ್ವಹಣೆ ಸಂದರ್ಭ ನಗರಸಭೆ ವತಿಯಿಂದ ಅಳವಡಿಸ ಲಾಗಿರುವ ಪೈಪ್‌ಲೈನ್‌ಗಳ ಸ್ಥಳಾಂತರ ಕೆಲಸ, ಮೂಲಸೌಕರ್ಯ ಗಳನ್ನು ಸ್ಥಳಾಂತರಿಸಲಾಗಿದೆ. ರಸ್ತೆ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಅವುಗಳನ್ನು ಮತ್ತೆ ಮೊದಲಿನಂತೆ ಅಳವಡಿಸಲಾಗುತ್ತದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಮೂಲಸೌಕರ್ಯ ಅಳವಡಿಕೆ
ರಸ್ತೆ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಉಬ್ಬುತಗ್ಗು ನಿರ್ಮಾಣ ಸಹಿತ ಅಪಘಾತ ನಡೆಯುವ ಸ್ಥಳಗಳನ್ನು ಗುರುತಿಸಿ ಎಚ್ಚರಿಕೆ ಫ‌ಲಕ ಸಹಿತ ಅಗತ್ಯ ಕ್ರಮಗಳನ್ನು ಅಳವಡಿಸಲಾಗುತ್ತದೆ.

Advertisement

ರಸ್ತೆ ದುರಸ್ತಿ, ಅಭಿವೃದ್ಧಿ
ಉಡುಪಿ-ಮಣಿಪಾಲ ಭಾಗದಲ್ಲಿ ಲೋಕೋ ಪಯೋಗಿ ಇಲಾಖೆಯ ವತಿಯಿಂದ ವಿವಿಧ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸುವ ರಸ್ತೆಯು 2-3 ದಿನಗಳೊಳಗೆ ಪೂರ್ಣಗೊಳ್ಳಲಿದೆ. ಇತರ ರಸ್ತೆಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.

– ಜಗದೀಶ್‌ ಭಟ್‌, ಸಹಾಯಕ ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next