Advertisement

ಉತ್ತಮ ಶಿಕ್ಷಣ-ಸಂಸ್ಕಾರದಿಂದ ದೇಶದ ಅಭಿವೃದ್ಧಿ: ಮನಗೂಳಿ

03:34 PM Aug 16, 2017 | |

ಸಿಂದಗಿ: ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ, ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷ ಎಂ.ಸಿ.ಮನಗೂಳಿ ಹೇಳಿದರು. ಮಂಗಳವಾರ ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್‌.ಜಿ.ಪದವಿ ಪೂರ್ವ ಕಾಲೇಜಿನ ಆವಣರದಲ್ಲಿ 71ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ
ನೇರವೆರಿಸಿ ಅವರು ಮಾತನಾಡಿದರು. ಶಾಲಾ-ಕಾಲೇಜುಗಳಲ್ಲಿ ತಿನ, ನೈತಿಕ ಮೌಲ್ಯಗಳ ಪಾಠಬೋಧನೆ ಮಾಡಬೇಕು. ಎಲ್ಲಿ ನೀತಿ, ಧರ್ಮ, ನ್ಯಾ ಇರುತ್ತದೆ ಅಲ್ಲಿ ದೇಶದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಈ ಮೌಲ್ಯಗಳನ್ನು ಯುವಕರು ಅಳವಡಿಸಿಕೋಳ್ಳ ಬೇಕು ಎಂದರು. ಇದೇ ಸಂದರ್ಭದಲ್ಲಿ ವಿಶ್ರಾಂತ ಉಪನ್ಯಾಸಕ, ಪತ್ರಕರ್ತ ಶಾಂತು ಹಿರೇಮಠ, ವಿಶ್ರಾಂತ ಪ್ರಾಚಾರ್ಯ ಎಸ್‌.ಎಸ್‌.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸನ್ಮಾನೋತ್ತರವಾಗಿ ಅವರು ಮಾತನಾಡಿದರು. ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರುಗಳು, ಪ್ರಾಚಾರ್ಯರು ಹಾಗೂ ವಿವಿಧ ಅಂಗ-ಸಂಸ್ಥೆಗಳ ಮುಖ್ಯಸ್ಥರು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ, ಬ್ಯಾಂಕ್‌, ಸಂಘ-ಸಂಸ್ಥೆಗಳಲ್ಲಿ ಮಂಗಳವಾರ 71ನೇ ಸ್ವಾತಂತ್ರ್ಯದಿನಾಚರಣೆ ಸಂಭ್ರಮದಿಂದ ಆಚರಿಸಿದರು. ಪ್ರೇರಣಾ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ಡಿ.ಎಸ್‌.ಕುಲಕರ್ಣಿ ಧ್ವಜಾರೋಹಣ ನೆರವೇರಿಸಿದರು. ಆರ್‌.ಡಿ.ಕುಲಕರ್ಣಿ, ಎಸ್‌.ಡಿ.ಕುಲಕರ್ಣಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂಧಿ ವರ್ಗ ಭಾಗವಹಿಸಿದ್ದರು. ರಮಾನಂದ ತೀರ್ಥ ಪದವಿ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ಶಂಬುಲಿಂಗ ಕಕ್ಕಳಮೇಲಿ ಧ್ವಜಾರೋಹಣ ನೇರವೆರಿಸಿದರು. ಪ್ರಾಚಾರ್ಯರ ಹಾಗೂ ಸಿಬ್ಬಂಧಿ ವರ್ಗ ಭಾಗವಹಿಸಿದ್ದರು. ಅಬು ಶಿಕ್ಷಣ ಸಂಸ್ಥೆಯ ಆವರಣದಲ್ಲಿ  ತಂತ್ರ್ಯದಿನಾಚರಣೆ
ಆಚರಿಸಲಾಯಿತು. ಸಂಸ್ಥೆ ನಿರ್ದೇಶಕ ಎಂ.ಎಚ್‌. ಮರ್ತೂರ ಧ್ವಜಾರೋಹಣ ನೇರವೆರಿಸಿದರು. ಪ್ರಧಾನಕಾರ್ಯದರ್ಶಿ ಆರ್‌.ಎ.ಖತಿಬ, ಎ.ಎ.ಖತಿಬ, ನಿರ್ದೇಶಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂಧಿ ವರ್ಗ ಭಾಗವಹಿಸಿದ್ದರು. ಭೀಮಾ ಸೇಂಟ್ರಲ್‌ ಸ್ಕೂಲ್‌ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ವಿಠ್ಠಲ ಕೊಳ್ಳೂರ ಧ್ವಜಾರೋಹಣ ನೇರವೆರಿಸಿದರು. ನಿರ್ದೇಶಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂಧಿ ವರ್ಗ ಭಾಗವಹಿಸಿದ್ದರು. ನಿವೃತ್ತ ನೌಕರರ ಸಂಘದ ತಾಲೂಕಾ ಘಟಕದವತಿಯಿಂದ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ವಿ.ಬಿ.ಕುರಡೆ ಧ್ವಜಾರೋಹಣ ನೇರವೆರಿಸಿದರು. ಡಾ|ಎಸ್‌.ಬಿ.ಚಿಕ್ಕಳಗಿ, ಎಸ್‌.ಎನ್‌.ಬಿರಾದಾರ ಸೇರಿದಂತೆ ಇತರರು ಭಾಗವಹಿಸಿದ್ದರು. ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್‌ ಪ್ರಧಾನ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು. ಬ್ಯಾಂಕ್‌ ಅಧ್ಯಕ್ಷ ಶರಣಪ್ಪ ವಾರದ ಧ್ವಜಾರೋಹಣ ನೇರವೆರಿಸಿದರು. ಬ್ಯಾಂಕ ಉಪಾಧ್ಯಕ್ಷ ಸುರೇಶಬಾಬು ಎಂ.ಜೋಗುರ, ನಿರ್ದೇಶಕರಾದ ಅಂಬಪ್ಪ ಸರ್ವಂದಿ, ನಿಹಾಲಚಂದ ಪೋರವಾಲ, ಪ್ರಕಾಶ ಕೋರಿ, ಬಸವರಾಜ ಶಹಾಪೂರ, ಮಹಾದೇವಪ್ಪ ಸಿಂದಗಿ, ಮಹಾದೇವಿ ಬಮ್ಮಣ್ಣಿ, ಮಹಾದೇವಿ ಪಟ್ಟಣಶೆಟ್ಟಿ, ರವಿ ನಾಗೂರ, ಡಾ|ವಿಜಯಕುಮಾರ ಜಿ. ವಾರದ, ಸಿದ್ಲಿಂಗಪ್ಪ ವಡ್ಡೋಡಗಿ  ಚನಮಲ್ಲಪ್ಪ ಶಹಾಪೂರ, ಶಿವಲಿಂಗಯ್ಯ
ಗಾಳಿಮಠ, ಪ್ರಧಾನ ವ್ಯವಸ್ಥಾಪಕ ಮುರಗೇಶ ಜಿ. ಬಮ್ಮಣ್ಣಿ ಸೇರಿಂದತೆ ಇತರರು ಭಾಗವಹಿಸಿದ್ದರು. ಜಿಓಸಿಸಿ ಬ್ಯಾಂಕನ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ನಿರ್ದೇಶಕಿ ಜಯಶ್ರೀ ಬೆಣ್ಣಿ ಧ್ವಜಾರೋಹಣ ನೇರವೆರಿಸಿದರು. ವ್ಯವಸ್ಥಾಪಕ ಎಂ.ಎಸ್‌.ಪೂಜಾರಿ, ಬಿ.ಎಂ.ಗೋರ್ಪಡಿ, ಎಸ್‌.ಸಿ.ಬಿಜ್ಜರಗಿ, ಬಿ.ಆಯ್‌.ಹತ್ತಿನಿರ್ದೇಶಕರು ಹಾಗೂ ಸಿಬ್ಬಂಧಿ ವರ್ಗ ಭಾಗವಹಿಸಿದ್ದರು. ಬಿರೇಶ್ವರ ಕೋ-ಆಪ್ರಟಿವ್‌ ಕ್ರೇಡಿಟ್‌ ಸೋಸೈಯಿಟಿ ಆರ್ವಣದಲ್ಲಿ ಆವರಣದಲ್ಲಿ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು. ಸಲಹಾಸಮಿತಿ ಅಧ್‌ ಯಕ್ಷರಾದ ನೀಲಪ್ಪಗೌಡ ಪಾಟೀಲ ಧ್ವಜಾರೋಹಣ ನೇರವೆರಿಸಿದರು. ವ್ಯವಸ್ಥಾಪಕ ಪ್ರವೀಣ ದೊಡಮನಿ
ಹಾಗೂ ಸಿಬ್ಬಂಧಿ ವರ್ಗ ಭಾಗವಹಿಸಿದ್ದರು. ಬಾಪೂಜಿ ಬ್ಯಾಂಕಿನ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಚಂದ್ರಶೇಖರ ದೇವರೆಡ್ಡಿ ಧ್ವಜಾರೋಹಣ ನೇರವೆರಿಸಿದರು. ವ್ಯವಸ್ಥಾಪಕ ಎ.ಜಿ.ಮಕ್ತೇದಾರ, ಎಚ್‌.ಎಂ.ಹೇಮರೆಡ್ಡಿ, ಬಿ.ಜಿ.ಬಾಡ ಅವರು ಭಾಗವಹಿಸಿದ್ದರು. ಹಡಪದ ಅಪ್ಪಣ್ಣ ಬ್ಯಾಂಕದ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಆಚರಿಸಲಾಯಿತು. ಅಧ್ಯಕ್ಷ ಶಿವಾನಂದ ಹಡಪದ ಧ್ವಜಾರೋಹಣ ನೇರವೆರಿಸಿದರು. ವ್ಯವಸ್ಥಾಪಕ ಎಂ.ಎಂ.ಹಡಪದ ಹಾಗೂ ಸಿಬ್ಬಂಧಿ ವರ್ಗ ಭಾಗವಹಿಸಿದ್ದರು. ವೀರಮಹೇಶ್ವರಿ ಬ್ಯಾಂಕನ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಉಪಾಧ್ಯಕ್ಷೆ ಮಹಾನಂದ ಎಸ್‌.ಹಿರೇಮಠ ಧ್ವಜಾರೋಹಣ ನೇರವೆರಿಸಿದರು. ವ್ಯವಸ್ಥಾಪಕ ಸಂಗಯ್ಯ ಮಠ, ನಿರ್ದೇಶಕರು ಹಾಗೂ
ಸಿಬ್ಬಂಧಿ ವರ್ಗ ಭಾಗವಹಿಸಿದ್ದರು. ಕೃಷಿ ಉತ್ಪನ್‌ ಮಾರುಕಟ್ಟೆಯ ಆವರಣದಲ್ಲಿ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ಕೆಂಚಪ್ಪ ಕತ್ನಳ್ಳಿ ಧ್ವಜಾರೋಹಣ ನೇರವೆರಿಸಿದರು. ನಿರ್ದೇಶಕರು ಹಾಗೂ ಸಿಬ್ಬಂಧಿ ವರ್ಗ ಭಾಗವಹಿಸಿದ್ದರು. ಸಿಂದಗಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಧ್ವಜಾರೋಹಣ ನೇರವೆರಿಸಿದರು. ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಸಿಬ್ಬಂಧಿವರ್ಗ ಭಾಗವಹಿಸಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ಶಾಂತವೀರ ಬಿರಾದಾರ ಧ್ವಜಾರೋಹಣ ನೇರವೆರಿಸಿದರು. ವ್ಯವಸ್ಥಾಪಕ ಸುರೇಶ ಮಲಗೊಂಡ, ನಿರ್ದೇಶಕ ಮಂಡಳಿ ಸದಸ್ಯರು
ಹಾಗೂ ಸಿಬ್ಬಂಧಿವರ್ಗ ಭಾಗವಹಿಸಿದ್ದರು. ತಾಲೂಕಿನ ಗೋಲಗೇರಿಯ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು. ಐಪಂ ಸದಸ್ಯೆ ಮಹಾದೇವಿ ಪಾಟೀಲ ಡಂಬಳ ಧ್ವಜಾರೋಹಣ ನೇರವೆರಿಸಿದರು. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next