Advertisement

ವೈಮನಸ್ಸು ಬಿಟ್ಟು ಸಂಘಟಿತರಾದರೆ ಸಮಾಜದ ಅಭಿವೃದ್ಧಿ: ಡಾ|ಅರಿಕೇರಿ

11:44 AM Feb 12, 2018 | |

ಕಾಳಗಿ: ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕೋಲಿ ಸಮಾಜಕ್ಕೆ ರಾಜಕೀಯ ಸ್ಥಾನಮಾನ ದೊರೆತಿಲ್ಲ. ಆಂತರಿಕ ಭಿನ್ನಾಭಿಪ್ರಾಯ ಮತ್ತು ವೈಮನಸ್ಸು ತೊರೆದು ಎಲ್ಲರು ಒಗ್ಗೂಡಿ ಸಂಘಟನೆ ಮಾಡಿದಾಗ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ ಎಂದು ಉಪನ್ಯಾಸಕ ಡಾ| ಭೀಮರಾವ ಅರಿಕೇರಿ ಹೇಳಿದರು. ಇಲ್ಲಿನ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಪ್ರಚಾರ ಸಮಿತಿ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಕೋಲಿ ಸಮಾಜ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದೆ. ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ರೀತಿಯ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಹೇಳಿದರು.

Advertisement

ತೊನಸನಳ್ಳಿ ಅಲ್ಲಮಪ್ರಭು ಮಠದ ಪೂಜ್ಯ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಗೌರಿಗುಡ್ಡ ರಟಕಲ್‌ನ ಪೂಜ್ಯ ರೇವಣಸಿದ್ದ ಶರಣರು, ದತ್ತಾತ್ರೇಯ ಮಹಾಸ್ವಾಮಿಗಳು, ಸಾಲಹಳ್ಳಿ ಸಂತಾಶ್ರಮದ ಬಾಲಯೋಗಿನಿ ಅಕ್ಕಮಹಾದೇವಿ ಅಮ್ಮನವರು, ಕೋಲಿ ಸಮಾಜದ ಯುವ ನಾಯಕ ವಿಕ್ರಮ ನಾಮದಾರ, ಪ್ರಭು ರಟಕಲ್‌, ಭೀಮರಾಯ ಚಿತ್ತಾಪುರ, ಪೃಥ್ವಿರಾಜ ನಾಮದಾರ, ಮಾರುತಿ ನಾಯಿಕೊಡಿ,
ರಮೇಶ ನಾಮದಾರ, ಭಾಗಣ್ಣ ಪೊಲೀಸ್‌, ಶರಣು ತಳವಾರ, ಅಮೃತಪ್ಪ ಹುಸೇನಗೋಳ, ಸಿದ್ದು ಹಲಚೇರಾ, ಮಾರುತಿ ಕೋಡ್ಲಿ ಇದ್ದರು.

ಪ್ರವೀಣ ನಾಮದಾರ ಸ್ವಾಗತಿಸಿದರು. ನಾಗಣ್ಣ ಕಮಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಪಂಗರಗಾ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next