Advertisement
ದತ್ತು ಪಡೆದ ಮೂರು ಶಾಲೆಗಳಲ್ಲಿಬಹುಮುಖ್ಯವಾಗಿ ಕೊಠಡಿಗಳದ್ದೇ ಸಮಸ್ಯೆಯಿದೆ. ಶಾಲಾ ಕೊಠಡಿಗಳುಶಿಥಿಲಾವಸ್ಥೆ ತಲುಪಿವೆ. ಕೆಲವು ಶಾಲೆಗಮೇಲ್ಛಾವಣಿ ಪದೇ ಪದೆ ಉದುರಿ ಮಕ್ಕಳ ಮೇಲೆ ಬೀಳುತ್ತಿದೆ. ಇದರಿಂದವಿದ್ಯಾರ್ಥಿಗಳು ಆತಂಕದಲ್ಲೇ ಪಾಠ ಕೇಳುವಂತ ಸ್ಥಿತಿಯಿದೆ. ಶಿಕ್ಷಕರೂ ಸಹಿತ ಮಕ್ಕಳ ಯೋಗ ಕ್ಷೇಮ ನೋಡುವ ಹೊಣೆಗಾರಿಕೆಯೂ ಹೆಚ್ಚಾಗಿದೆ. ಇದಲ್ಲದೇ ಶೌಚಾಲಯ ಹಾಗೂ ಕುಡಿಯುವ ನೀರು, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್‌ಗಳ ಅಗತ್ಯವಿದೆ. ಒಟ್ಟಿನಲ್ಲಿ ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿಯೇ ದತ್ತು ಪಡೆದ ಶಾಲೆಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದೆ. ಶಿಕ್ಷಣ ಇಲಾಖೆ ಇನ್ನೂ ಕ್ರಿಯಾಯೋಜನೆ ರೂಪಿಸಿಲ್ಲ. ಶಾಸಕರು ಶಾಲೆಯಲ್ಲಿಕೈಗೊಳ್ಳಬೇಕಾದ ಯೋಜನೆಗಳ ಕುರಿತು ಮಾಹಿತಿ ಕೇಳಿದೆ. ಶಾಲೆಯಲ್ಲಿನಸಮಸ್ಯೆಗಳ ಕುರಿತು ಶಾಸಕರು ಕಾಳಜಿ ವಹಿಸುವ ಜೊತೆಗೆ ಅಭಿವೃದ್ಧಿಗೆ ಒತ್ತು ನೀಡಿ ಮಕ್ಕಳ ಶಿಕ್ಷಕಣಕ್ಕೆ ಆದ್ಯತೆ ನೀಡಬೇಕಿದೆ.
Related Articles
Advertisement
ನಮ್ಮ ಶಾಲೆ ಕೊಠಡಿಗಳ ಮೇಲ್ಛಾವಣಿ ಉದುರಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದಲ್ಲದೇ ಸ್ಮಾರ್ಟ್ ಕ್ಲಾಸ್, ಶೌಚಾಲಯ ನಿರ್ಮಾಣ ಮಾಡುವುದು ಬಾಕಿಯಿದೆ. ನಮ್ಮ ಶಾಲೆ ಶಾಸಕರು ದತ್ತು ಪಡೆದಿದ್ದು ಸಂತಸ ತಂದಿದೆ. ಅವರು ಶಾಲೆಗೆ ಭೇಡಿ ನೀಡಿದ ವೇಳೆ ಇಲ್ಲಿನ ಹಲವು ಸಮಸ್ಯೆಗಳ ಕುರಿತು ಅವರ ಗಮನಕ್ಕೆ ತರಲಿದ್ದೇವೆ. – ಎ. ಶಾಂಬಾಚಾರಿ, ಅಳವಂಡಿ ಶಾಲೆ ಮುಖ್ಯಶಿಕ್ಷಕ
ಹಿರೇಸಿಂದೋಗಿ ಕ. ಪಬ್ಲಿಕ್ ಶಾಲೆ : ತಾಲೂಕಿನ ಹಿರೇಸಿಂದೋಗಿ ಪಬ್ಲಿಕ್ ಶಾಲೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ಹೊಂದಿದೆ. ಈಶಾಲೆ 50 ವರ್ಷ ಹಳೆಯದಾಗಿದ್ದು, ಇಲ್ಲಿ 15 ಕೊಠಡಿಶಿಥಿಲಾವಸ್ಥೆಯಲ್ಲಿವೆ. ಇವುಗಳ ತೆರವಿಗೆ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಕ-ಕ ಮಂಡಳಿಯಿಂದ 2 ಕೋಟಿ ಅನುದಾನ ಮಂಜೂರಾಗಿದೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅಗತ್ಯವಾಗಿ 10-11 ಕೊಠಡಿಗಳು ನಿರ್ಮಾಣವಾಗಬೇಕಿದೆ. ಗ್ರಂಥಾಲಯ ನಿರ್ಮಾಣ, ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ ಅವಶ್ಯವಾಗಿದೆ. ಈ ಬಗ್ಗೆ ಶಾಸಕರು ಗಮನ ನೀಡಬೇಕಿದೆ.
ನಮ್ಮ ಶಾಲಾ ಕೊಠಡಿಗಳು ತುಂಬಹಳೆಯದಾಗಿವೆ. ಅವುಗಳನ್ನು ನೆಲಸಮಗೊಳಿಸಿ15 ಕೊಠಡಿ ನಿರ್ಮಾಣ ಮಾಡುವ ಅಗತ್ಯವಿದೆ.ಇದಲ್ಲದೇ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೇರಿಗಾರ್ಡನ್ ನಿರ್ಮಾಣ ಮಾಡಬೇಕಿದೆ. ಇಲ್ಲಿನ ಸಮಸ್ಯೆ ಕುರಿತು ಶಾಸಕರ-ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇವೆ.- ದೇವೇಂದ್ರಪ್ಪ ಕುರಡಗಿ, ಹಿರೇಸಿಂದೋಗಿ ಶಾಲೆ ಮುಖ್ಯಶಿಕ್ಷಕ
ನನ್ನ ಕ್ಷೇತ್ರದಲ್ಲಿ ಮೂರು ಶಾಲೆಗಳನ್ನು ದತ್ತು ಪಡೆದಿದ್ದೇನೆ. ಆ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವೆ. ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಏನು ಬೇಕೋಅದೆಲ್ಲವೂ ಮಾಡುವೆ. ಶಾಲಾ ಅಭಿವೃದ್ಧಿಗೆ ಯೋಜನೆ ರೂಪಿಸಲು ಸೂಚನೆ ನೀಡಿದ್ದೇನೆ. – ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ
–ದತ್ತು ಕಮ್ಮಾರ