ಬನ್ನೂರು: ಸಾರ್ವಜನಿಕ ಒಲಯಕ್ಕೆ ಬೇಕಾದಂತ ಅನುಕೂಲವನ್ನು ಒದಗಿಸಿಕೊಡುವುದೇ ರಾಜ್ಯ ಸರ್ಕಾರದ ಕರ್ತವ್ಯ ಎಂದು ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಬನ್ನೂರಿನ ಕಾವೇರಿ ನದಿ ತೀರದಲ್ಲಿ ಗುರುವಾರ ಕಾವೇರಿ ನಸಿ ನೀರಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಏರೋಫಿಲ್ ವಿಯರ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆಯ ಕಾವು ಹೆಚ್ಚುತ್ತಿದಂತೆ ಪ್ರತ್ಯಕ್ಷರಾಗುವ ವಿರೋಧ ಪಕ್ಷದ ನಾಯಕರು ಕ್ಷೇತ್ರದ ಅಭಿವೃದ್ಧಿಯೇ ಆಗಿಲ್ಲದಂತೆ ಜನರ ಮನಸ್ಸನ್ನು ವಿಲಕ್ಷಣಗೊಳಿಸುವುದು ಸರಿಯಲ್ಲ ಎಂದು ಆರೋಪಿಸಿದರು.
ರೈತರ ಬವಣೆ ಅರಿತು ಎಲ್ಲಾ ಕಾಲುವೆಗಳನ್ನು ಸಮರ್ಪಕಗೊಳಿಸಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಲಾಗಿದ್ದು, 2008ರಲ್ಲಿ ಇಲ್ಲಿ ನಡೆದ ಮರಳು ಕೊರೆತದಿಂದ ನದಿಯ ನೀರು ಸುಮಾರು ಒಂದೂವರೆ ಅಡಿಗಳಷ್ಟು ಕೆಳಗೆ ಹೋಗಿದ್ದು, ಅದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಎರಡು ಕೋಟಿ ರೂ.ವೆಚ್ಚದಲ್ಲಿ ಅಡ್ಡಲಾಗಿ ಗೋಡೆ ನಿರ್ಮಿಸಲಾಗುತ್ತಿದೆ ಎಂದರು.
ದಿನದ 24ಗಂಟೆ ಕುಡಿವ ನೀರು ಮತ್ತು ಕೃಷಿ ಅನುಕೂಲಕ್ಕಾಗಿ ಈ ಕೆಲಸ ಕೈಗೆತ್ತಿಕೊಂಡು ರೈತರಿಗೆ ಮತ್ತು ಸಾರ್ವಜನಿಕರಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು. ಇದರಿಂದ ಬನ್ನೂರು ಅಭಿವೃದ್ಧಿಗೆ ಒಟ್ಟಾರೆ ಇದುವರೆಗೂ 55 ಕೋಟಿ ರೂ.ಅಭಿವೃದ್ದಿ ಕೆಲಸ ಮಾಡಲಾಗಿದೆ ಎಂದರು.
ಮುಖ್ಯಾಧಿಕಾರಿ ಗಂಗಾಧರ್, ಪುರಸಭಾ ಅಧ್ಯಕ್ಷೆ ಮಂಜುಳಾಶ್ರೀನಿವಾಸ್, ವಸತಿ ಯೋಜನೆ ಅಧ್ಯಕ್ಷ ಸುನಿಲ್‌ಬೋಸ್, ಉಪಾಧ್ಯಕ್ಷ ಬಿ.ಎಸ್.ರಾಮಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಚಲುವರಾಜು, ಚಾಮೇಗೌಡ, ಮಾಜಿ ಅಧ್ಯಕ್ಷ ಮುನಾವರ್‌ಪಾಷ,
ಬಿ.ಎಸ್.ರವೀಂದ್ರ ಕುಮಾರ್, ವಿಷಕಂಠಯ್ಯ, ರಾಮಲಿಂಗಯ್ಯ, ಬಸುರಾಜು, ಶಂಕರೇಗೌಡ, ಧನಲಕ್ಷ್ಮೀ, ಅಜ್ಮಲ್, ಬಿ.ಸಿ.ಕೃಷ್ಣ, ಮುರಳಿ, ಬೈರನಮೂರ್ತಿ, ಪೀರ್‌ಖಾನ್, ರಮೇಶ್, ಬಸವಣ್ಣ, ಮಂಜುನಾಥ್, ಶಾಯೀನ್‌ತಾಜ್, ಅಸದ್, ಮೈಮುನ್ನಿಸ್ಸಾ, ಸುಮಿತ್ರ, ಮನು ಸೇರಿದಂತೆ ಹಲವರು ಉಪಸ್ಥಿತರಿದ್ದರು.