Advertisement

ವಿದ್ಯಾರ್ಥಿಗಳ ಜ್ಞಾನವೃದ್ಧಿಯಿಂದ ಅಭಿವೃದ್ಧಿ ಸಾಧ್ಯ

07:28 PM Mar 21, 2021 | Team Udayavani |

ತರೀಕೆರೆ: ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಪೋಷಕರು ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ವಿದ್ಯಾರ್ಥಿಗಳಿಗೆ ಜ್ಞಾನ ಸಂಪತ್ತು ಹೆಚ್ಚಿದಲ್ಲಿ ಗ್ರಾಮದ ಮತ್ತು ಕುಟುಂಬದ ಅಭಿವೃದ್ಧಿಗೆ ಕಾರಣವಾಗುತ್ತದೆ. ಜಿಲ್ಲಾ  ಧಿಕಾರಿಗಳ ಗ್ರಾಮ ವಾಸ್ತವ್ಯದ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುವುದು.

Advertisement

ಹಳ್ಳಿ ಮಕ್ಕಳಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಗೊಳ್ಳುವ ಬಗ್ಗೆ ಕೀಳರಿಮೆ ಇದೆ. ಇದನ್ನು ಅವರು ತೊರೆಯಬೇಕು ಮತ್ತು ನಿರ್ದಿಷ್ಟವಾದ ಗುರಿ ಮತ್ತು ಛಲ ಹೊಂದಿರಬೇಕು. ಇದು ಯೋಚನೆ ಮತ್ತು ಮಾರ್ಗದರ್ಶನದಿಂದ ಸಾದ್ಯ ಎಂದು ಜಿಲ್ಲಾ ಧಿಕಾರಿ ಡಾ| ರಮೇಶ ನುಡಿದರು. ನಂದಿಬಟ್ಟಲು ಕಾಲೋನಿಯಲ್ಲಿ ನಡೆದ “ಜಿಲ್ಲಾ ಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿ ಮತ್ತು ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಗ್ರಾಮ ವಾಸ್ತವ್ಯ ನಡೆಸಲಾಗುತ್ತಿದೆ. ಸಮಸ್ಯೆಗಳ ಪರಿಹಾರ ಮತ್ತು ಅಭಿವೃದ್ಧಿ ಕೇವಲ ಅಧಿ ಕಾರಿಗಳು ಮತ್ತು ಜನಪ್ರತಿನಿ ಧಿಗಳಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಜನರ ಸಹಕಾರವೂ ಮುಖ್ಯ.

ಸಮಸ್ಯೆಗಳನ್ನು ತಮ್ಮ ಬಳಿಗೆ ನೇರವಾಗಿ ತರಬಹುದು. ಜನಪ್ರತಿನಿಧಿ ಗಳ ಮೂಲಕ ಮುಟ್ಟಿಸಬಹುದು ಅಥವಾ ಪ್ರತಿಕೆಗಳ ಮುಖಾಂತರ ತಲುಪಿಸಬಹುದು. ಆದರೆ ಇವೆಲ್ಲವೂ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿರಬೇಕು. ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇರಬಾರದು ಎಂದರು. ಜಿಲ್ಲಾಧಿ ಕಾರಿಗಳ ಬಳಿಗೆ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ನೇರವಾಗಿ ತಮ್ಮ ಕಚೇರಿಗೆ ಬರಬಹುದು. ಇದಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಸದಾ ತೆರೆದಿರುತ್ತದೆ.

ಒಂದೊಮ್ಮೆ ಜಿಲ್ಲಾ ಧಿಕಾರಿಗಳನ್ನು ಭೇಟಿ ಮಾಡಲು ಸಾದ್ಯವಾಗದ ಪಕ್ಷದಲ್ಲಿ ತಮ್ಮ ಆಪ್ತ ಸಹಾಯಕರ ಬಳಿ ದೂರು ನೀಡಬಹುದು. ಅವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಆನೇಕ ಇಲಾಖೆಗಳ ಜೊತೆಗೆ ಕೆಲಸ ನಿರ್ವಹಿಸಬೇಕಾಗಿರುವುದರಿಂದ ಇಲಾಖಾ ಧಿಕಾರಿಗಳ ಜೊತೆ ಸಮನ್ವಯ ಸಾಧಿ ಸಿ ಕೆಲಸ ನಿರ್ವಹಿಸಲಾಗುವುದು ಎಂದರು. ಗ್ರಾಮ ವಾಸ್ತವ್ಯದಲ್ಲಿ ಬಂದಿರುವ ಅರ್ಜಿಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಅವುಗಳಿಗೆ ಪರಿಹಾರ ನೀಡುವುದರ ಜೊತೆಗೆ ಅವುಗಳಿಗೆ ತಾತ್ವಿಕ ಅಂತ್ಯವನ್ನು ನೀಡಲಾಗುವುದು. ಇತರೆ ಇಲಾಖೆಗಳಿಗೆ ಸಂಬಂಧಿಸಿದಲ್ಲಿ ಅವುಗಳನ್ನು ನಿದಿ ìಷ್ಟ ಸಮಯದಲ್ಲಿ ಸಮಸ್ಯೆ ಪರಿಹರಿಸುವಂತೆ ಅ ಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಮತ್ತು ಇವುಗಳನ್ನು ನೋಡಿಕೊಳ್ಳಲು ನೋಡೆಲ್‌ ಅಧಿ ಕಾರಿಯನ್ನು ನೇಮಿಸಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next