Advertisement
ನಗರದ ಸ್ಥಿತಿಸ್ಥಾಪಕತ್ವ ಹಾಗೂ ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ “ಪರಿಷ್ಕೃತ ನಗರ ಮಹಾಯೋಜನೆ -2031′ ಮುಂದಿನ ಎರಡು ದಶಕಗಳ ಅಂದರೆ2050ರ ಗುರಿ ಇಟ್ಟುಕೊಂಡಿರುವುದು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಕರಡು ಸಿದ್ಧಪಡಿಸಬೇಕಿದೆ. ಬಿಬಿಎಂಪಿ, ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಸೇರಿದಂತೆ ಇತರೆ ಸರ್ಕಾರಿ ಸಂಸ್ಥೆಗಳನ್ನು ಯೋಜನೆ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತಾಗಬೇಕು ಎಂದೂ ಈ ಸಂಬಂಧದ ಸಮಿತಿ
ಅಭಿಪ್ರಾಯಪಟ್ಟಿದೆ.
ಮೀಸಲಿ ಟ್ಟಿದ್ದು, ಬಹುತೇಕ ಖರ್ಚಾಗಿದೆ. ಆದರೆ, ಇದುವರೆಗೆ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಯೋಜನೆ ಸಿದ್ಧಪಡಿಸಿಕೊಡಲು ನಿಯೋಜಿಸಿದ ಕನ್ಸಲ್ಟೆಂಟ್
ಸಂಸ್ಥೆಯನ್ನೂ ಕೈಬಿಡುವ ಬಗ್ಗೆ ಚರ್ಚೆ ನಡೆ ದಿದೆ. ಆದರೆ, ಈ ಚರ್ಚೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಮಂಡಳಿಯ ಮುಂದೆ ಬಂದಿಲ್ಲ ಎನ್ನಲಾಗಿದೆ.
Related Articles
ಸರ್ಕಾರದಲ್ಲಿ ಇದಕ್ಕೆ ಅಂತಿಮ ಸ್ಪರ್ಶ ನೀಡಲಾಗಿತ್ತು. ಇನ್ನೇನೂ ಅನುಮೋದನೆಗೊಳ್ಳುವಷ್ಟರಲ್ಲಿ ಸರ್ಕಾರ ಪತನಗೊಂಡು, ಬಿಜೆಪಿ ಅಧಿಕಾರಕ್ಕೆ ಬಂದಿತು. ಈ
ಸರ್ಕಾರ ಕೆಲವು ಮಾರ್ಪಾಡುಗಳೊಂದಿಗೆ ಮತ್ತೆ ಕರಡು ಸಲ್ಲಿಸುವಂತೆ ಸೂಚನೆ ನೀಡಿದೆ. ಇದರೊಂದಿಗೆ ಸತತ ಮೂರು ಸರ್ಕಾರಗಳು ಕೂಡ ಕರಡು ಸಿಡಿಪಿಯನ್ನು ಮೂಲೆಗುಂಪು ಮಾಡಿದಂತಾಗಿದೆ. ಸರ್ಕಾರ ಪರಿಷ್ಕೃತ ರೂಪದಲ್ಲಿ ಸಿದ್ಧಪಡಿಸಲು ಆದೇಶಿಸಿದ್ದರಿಂದ ನಗರಾಭಿವೃದ್ಧಿ ಇಲಾಖೆ ಹಂತದಲ್ಲಿ ಮತ್ತೆ ಸರಣಿ ಸಭೆಗಳು ನಡೆದು ಮಾರ್ಗಸೂಚಿ ಸಿದ್ಧಗೊಳ್ಳಬೇಕು. ನಂತರವೇ ಬಿಡಿಎಯಿಂದ ಪರಿಷ್ಕೃತ ಕಾರ್ಯ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ
ನೀಡಿದರು. “ಪರಿಷ್ಕೃತ ನಗರ ಮಹಾ ಯೋಜನೆ’ 2031ಕ್ಕೇ ಸೀಮಿತವಾಗಿರಲಿದೆ. ಆದರೆ, ನಮ್ಮ ಫೋಕಸ್ 2050ರ ಮೇಲಿರಲಿದೆ. ಅಂದರೆ, ಯೋಜನೆಯನ್ನು 2031ರ ನಂತರದ ಮುಂದಿನ ಎರಡು ದಶಕಗಳಲ್ಲಿ ನಗರದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರಡು ಸಿದ್ಧಪಡಿಸಲು ಉದ್ದೇಶಿ ಸಲಾಗಿದೆ. ಇದಲ್ಲದೆ, ಈಗಿರುವ ಕನ್ಸಲ್ಟೆಂಟ್ ಸಂಸ್ಥೆಯನ್ನು ಮುಂದುವರಿಸ ಬೇಕೇ ಅಥವಾ ಹೊಸ ಕನ್ಸಲ್ಟೆಂಟ್ ಅನ್ನು ನೇಮಿಸಬೇಕೇ ಎಂಬುದರ ಬಗ್ಗೆಯೂ ಪ್ರಾಥಮಿಕ ಹಂತದಲ್ಲಿ ಚರ್ಚೆ ನಡೆಸಲಾಗಿ ದೆ. ಶೀಘ್ರ ಇದನ್ನು ಮಂಡಳಿ ಸಭೆ ಮುಂದೆ ತಂದು ಅಂತಿಮ ಗೊಳಿಸಲಾಗುವುದು’ ಎಂದು
ಬಿಡಿಎ ಆಯುಕ್ತ ಎಚ್.ಆರ್. ಮಹದೇವ್ “ಉದಯವಾಣಿ’ಗೆ ತಿಳಿಸಿದರು.
Advertisement
ಸಮಯ ವ್ಯರ್ಥ; ಸಿಟಿಜನ್ ಆ್ಯಕ್ಷನ್ ಫೋರಂ: “ಇದೊಂದು ವ್ಯರ್ಥ ಪ್ರಯತ್ನ. ಈ ಮೂಲಕ ಸರ್ಕಾರ ಅಥವಾ ಬಿಡಿಎ ಸಮಯ ವ್ಯಯ ಮಾಡುತ್ತಿದೆ ಹೊರತು, ಬೇರೇನೂ ಇಲ್ಲ. ಯಾಕೆಂದರೆ, ಈ ವಿಚಾರ ನ್ಯಾಯಾಲಯದ ಮುಂದಿದ್ದು, ಅಲ್ಲಿ ತೀರ್ಮಾನ ಆಗುವವರೆಗೂ ಏನೂ ಮಾಡುವಂತಿಲ್ಲ. ಅಷ್ಟಕ್ಕೂ ಸರ್ಕಾರಕ್ಕೆ ಮೆಟ್ರೋಪಾಲಿಟನ್ ಪ್ಲಾನಿಂಗ್ ಕಮಿಟಿ (ಎಂಪಿಸಿ) ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಇಚ್ಛೆಯೇ ಇದ್ದಂತಿಲ್ಲ’ ಎಂದು ಪರಿಷ್ಕೃತ ನಗರಮಹಾಯೋಜನೆ-2031ಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸಿಟಿಜನ್ ಆ್ಯಕ್ಷನ್ ಫೋರಂನ ಹಿರಿಯ
ಸದಸ್ಯ ವಿಜಯನ್ ಮೆನನ್ ಹೇಳುತ್ತಾರೆ. ಯೋಜನೆ ಸಿದ್ಧತೆಯಲ್ಲಿ ಇತರೆ ಇಲಾಖೆಗಳ ಪಾತ್ರ
1 ಅಭಿವೃದ್ಧಿಯ ರೋಡ್‌ಮ್ಯಾಪ್ ಮತ್ತು ಸಂಪೂರ್ಣ ಸಹಭಾಗಿತ್ವ
2 ಯೋಜನೆ ನಿರೂಪಣೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ, ಬಿಎಂಆರ್‌ಸಿಎಲ್, ಡಿಯುಎಲ್‌ಟಿ, ಬೆಸ್ಕಾಂ, ಜಲಮಂಡಳಿಯಂತಹ ಸಂಸ್ಥೆಗಳಿಗೆ ಒಂದು ಪ್ರಕ್ರಿಯೆಯನ್ನು ಸಿದ್ಧಪಡಿಸುವುದು.
3 ಜಿಐಎಸ್ ಮತ್ತು ಡಾಟಾ ಅಪ್‌ಲೋಡ್‌ಗೆ ಶಿಷ್ಟಾಚಾರಗಳನ್ನು ರೂಪಿಸುವುದು.
4 ಮಾಡಬೇಕಾದ ಕಾರ್ಯಚಟುವಟಿಕೆಗಳನ್ನು ಬಿಡಿಎ ಮತ್ತು ಇತರೆ ಏಜೆನ್ಸಿಗಳು ಸೇರಿ ಪಟ್ಟಿ ಮಾಡುವುದು. ಮಾರ್ಪಾಡುಗಳೇನು?
1 2031ರ ಬದಲಿಗೆ 2050ರ ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸುವುದು.
2 ಸಂಚಾರ ಆಧಾರಿತ ಅಭಿವೃದ್ಧಿಗೆ ಆದ್ಯತೆ. ಇದಕ್ಕೆ ಡಿಯುಎಲ್‌ಟಿ, ಬಿಎಂಟಿಸಿ, ಬಿಎಂಆರ್‌ಸಿಎಲ್ ನೆರವು
3 ಪ್ರಸ್ತುತ ಅಭಿವೃದ್ಧಿ ಆಧರಿಸಿ ಯೋಜನೆ ಮತ್ತು ನೀತಿಗಳ ರಚನೆ
4 ನಗರ ಅಭಿವೃದ್ಧಿಗೆ ಸ್ಪಷ್ಟ ದೃಷ್ಟಿ-ಗುರಿ ನಿಗದಿಗೆ ಕ್ರಮ
5 ವಾಣಿಜ್ಯ, ಕೈಗಾರಿಕೆ, ಹಸಿರು ವಲಯ ಹೆಚ್ಚಳಕ್ಕೆ ಆದ್ಯತೆ
6 ರಸ್ತೆ, ಉದ್ಯಾನ, ಮೂಲಸೌಕರ್ಯ ಅಭಿವೃದ್ಧಿ ಖಾತರಿಗೆ ಚೌಕಟ್ಟು ವಿಜಯಕುಮಾರ್ ಚಂದರಗಿ