Advertisement

ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಪರ್ವ ಶುರು

09:00 AM Jan 31, 2019 | Team Udayavani |

ಕಲಬುರಗಿ: ಚುನಾವಣೆ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ನೀಡಲಾದ ಭರವಸೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

Advertisement

ಬುಧವಾರ ಕಲಬುರಗಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ವಿ.ಕೆ. ಸಲಗರ, ಅಂಬಲಗಾ, ಅಪಚಂದ, ಜವಳಗಾ, ಮಡಕಿ, ಲಾಡಮುಗಳಿ, ಶ್ರೀಚಂದ, ಮಡಕಿ, ಕಮಲಾ ನಗರ, ಬೆಟ್ಟಜೇವರ್ಗಿ, ವಾಗ್ಧಾರಗಿ ಗ್ರಾಮಗಳಲ್ಲಿ ಸಿಸಿ ರಸ್ತೆಗಳು, ಅಂಗನವಾಡಿ ಕೇಂದ್ರ, ಶಾಲಾ ಆಟದ ಮೈದಾನ ನಿರ್ಮಾಣ ಸೇರಿದಂತೆ ಒಟ್ಟಾರೆ 40 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸ್ಪಂದಿಸುವುದರ ಜತೆಗೆ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಹಾಗೂ ಶೈಕ್ಷಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಮುಂದಾಗಲಾಗಿದೆ. ಇದೇ ನಿಟ್ಟಿನ ಕಾಮಗಾರಿಗಳಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕ್ಷೇತ್ರದ ಶಹಾಬಾದ ನಗರಸಭೆ ಸೇರಿದಂತೆ ಇತರ ಎಲ್ಲ ಹಳ್ಳಿಗಳಲ್ಲಿ ಯಾವ್ಯಾವ ಸಮಸ್ಯೆಗಳಿವೆ ಎನ್ನುವುದನ್ನು ಪಟ್ಟಿ ಮಾಡಲಾಗಿದೆ. ಇವುಗಳಿಗೆ ಸ್ಪಂದಿಸಲು ದೃಢ ಹೆಜ್ಜೆ ಇಡಲಾಗಿದೆ. ಎಲ್ಲರ ಆಶೀರ್ವಾದದಿಂದ ವಿಧಾನ ಸಭೆಗೆ ಹೋಗಿದ್ದೇನೆ. ಈಗಲೂ ಎಲ್ಲರ ಸಲಹೆ-ಸೂಚನೆ ಪಡೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಪ್ರಸಕ್ತವಾಗಿ ಬರಗಾಲ ಛಾಯೆ ವ್ಯಾಪಕವಾಗಿದ್ದರಿಂದ ಕಂಗಾಲಾಗಿರುವ ರೈತರಿಗೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಉದ್ಯೋಗ ಕಲ್ಪಿಸಿಕೊಡಲು ಕೃಷಿ ಇಲಾಖೆ, ಅರಣ್ಯ ಸೇರಿದಂತೆ ಇತರ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಿ ಕಾರ್ಯಾನುಷ್ಠಾನಕ್ಕೆ ಮುಂದಾಗಲಾಗಿದೆ. ಜತೆಗೆ ಉದ್ಯೋಗ ಖಾತ್ರಿ ಅಡಿ ಹೊಲದಲ್ಲಿ ಕಲ್ಲುಗಳನ್ನು ಆಯುವುದು, ಹೊಲ ಸ್ವಚ್ಛತೆ, ಬದುಗಳ ನಿರ್ಮಾಣ ಸೇರಿದಂತೆ ಇತರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಹಾಗೂ ಮರಗಳನ್ನು ಬೆಳೆಸುವ ಮುಖಾಂತರ ಜತೆಗೆ ರೇಷ್ಮೆ, ತೋಟಗಾರಿಕೆ ಕ್ಷೇತ್ರದಲ್ಲೂ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ವ್ಯಾಪಕವಾಗಿ ಕೈಗೊಳ್ಳಬೇಕು. ರೇಷ್ಮೆ ಬೆಳೆಗಳಿಗೆ ಅನುಕೂಲವಾಗಲು ಕೃಷಿ ಹೊಂಡಗಳನ್ನು ನಿರ್ಮಿಸಬೇಕು. ಈಗಲೇ ಎನ್‌ಎಂಆರ್‌ ನೀಡಿ ಎಂದು ತಾಕೀತು ಮಾಡಿದ್ದಲ್ಲದೇ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಸಮುದಾಯವಾಗಿರಲಿ ಎಂಬುದಾಗಿ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.

Advertisement

ಮುಖಂಡರಾದ ಕಲ್ಯಾಣರಾವ ಗೊನಾಕಿ, ಸಿದ್ಧಣ್ಣಗೌಡ ಧಮ್ಮೂರ, ಶಿವರಾಯಗೌಡ ಮುದ್ದಡಗಾ, ಸತೀಶ ಸೋರಡೆ, ಸಿದ್ರಾಮಪ್ಪ ಮಾಲಿಪಾಟೀಲ ಕಮಲಾನಗರ, ರೇವಣಸಿದ್ದಪ್ಪ ಮೂಲಗೆ, ರೇಣುಕಾಚಾರ್ಯ, ವೀರೂ ಸ್ವಾಮಿ, ನರೋಣಾ, ಬಸವರಾಜ ವಾಲಿ, ಶಂಭು ಗೂಗಳೆ, ನಾಗರಾಜ ಮೂಲಗೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next