Advertisement

96 ಲಕ್ಷ ಕೋಟಿ ರೂ. ಪರಿಹಾರ ನೀಡಿ! ಮಾಲಿನ್ಯದ ದುಷ್ಪರಿಣಾಮ ತಡೆಗೆ ಆರ್ಥಿಕ ಸಹಾಯ ಕೋರಿಕೆ

09:01 PM Nov 10, 2021 | Team Udayavani |

ನವದೆಹಲಿ: ಜಾಗತಿಕ ಮಾಲಿನ್ಯದ ದುಷ್ಪರಿಣಾಮಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಮಾಡುತ್ತಿರುವ ಪ್ರಯತ್ನಗಳಿಗೆ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳು 96 ಲಕ್ಷ ಕೋಟಿ ರೂ.ಗಳನ್ನು ಪರಿಹಾರ ರೂಪವಾಗಿ ನೀಡಬೇಕೆಂದು ಭಾರತ ಸೇರಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಆಗ್ರಹಿಸಿವೆ.

Advertisement

ಈ ಹಿಂದೆ, ಅಭಿವೃದ್ಧಿಗೊಂಡ ರಾಷ್ಟ್ರಗಳು ಪರಿಹಾರ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದವು. ಆದರೆ, ಇಲ್ಲಿಯವರೆಗೆ ಆ ಭರವಸೆ ಈಡೇರಿಲ್ಲ. ಹಾಗಾಗಿ, ಈಗಿನ ಅಂದಾಜಿನ ಪ್ರಕಾರ ನಿಗದಿಪಡಿಸಲಾಗಿರುವ 96 ಲಕ್ಷ ಕೋಟಿ ರೂ. ಹಣವನ್ನು 2025ರಿಂದ 2030ರ ಅವಧಿಯೊಳಗೆ ನೀಡಬೇಕು ಎಂದು ಈ ರಾಷ್ಟ್ರಗಳು ಆಗ್ರಹಿಸಿವೆ.

ಸಮಾನ ಮನಸ್ಕ ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟದ (ಎಲ್‌ಎಂಡಿಸಿ) ರಾಷ್ಟ್ರಗಳು ಒಕ್ಕೊರಲಿನ ಬೇಡಿಕೆಯನ್ನು ಮಂಡಿಸಿವೆ. ಸೋಮವಾರದಂದು ಈ ಪ್ರಸ್ತಾವನೆಯನ್ನು ಮಂಡಿಸಿ ಚರ್ಚಿಸಲಾಗಿದ್ದು, ಈಗ ಅದನ್ನು ವಿಶ್ವಸಮುದಾಯದ ಗಮನಕ್ಕೆ ತರಲಾಗಿದೆ.

ಭಾರತ, ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ಇರಾನ್‌, ಬಾಂಗ್ಲಾದೇಶ, ಶ್ರೀಲಂಕಾ, ಫಿಲಿಪ್ಪೀನ್ಸ್‌ ಹಾಗೂ ಇತರ ರಾಷ್ಟ್ರಗಳು ಈ ಒಕ್ಕೂಟದಲ್ಲಿ ಸೇರಿವೆ. ಇತ್ತೀಚೆಗೆ, ಗ್ಲಾಸ್ಗೋದಲ್ಲಿ ನಡೆದಿದ್ದ ಜಾಗತಿಕ ಹವಾಮಾನ ಸಮ್ಮೇಳನದಲ್ಲಿ ಇದೇ ವಿಚಾರವನ್ನು ಭಾರತ ಪ್ರಸ್ತಾಪಿಸಿತ್ತು. ಆಗಲೂ, ಅಭಿವೃದ್ಧಿಶೀಲ ರಾಷ್ಟ್ರಗಳು ಇದಕ್ಕೆ ಅನುಮೋದನೆ ನೀಡಿದ್ದವು. ಆ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯಗಳನ್ನು ಎಲ್ಲಾ ಎಲ್‌ಎಂಡಿಸಿ ಸದಸ್ಯ ರಾಷ್ಟ್ರಗಳು ಸೋಮವಾರ ಮತ್ತೂಮ್ಮೆ ಚರ್ಚಿಸಿ ಅನುಮೋದನೆ ನೀಡಿವೆ.

ಇದನ್ನೂ ಓದಿ : ಸಕಲೇಶಪುರ : ಬೈಕ್ ಗಳ ನಡುವೆ ಡಿಕ್ಕಿ, ನಾಲ್ವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ

Advertisement

ಜಾಗತಿಕ ತಾಪಮಾನದ ಮೊದಲ ದುರ್ದೈವಿ?
ಕೆನಡಾದ ಡಾ. ಕೈಲ್‌ ಮೆರಿಟ್‌ ಆಫ್ ಕೂಟೆನರಿ ಲೇಕ್‌ ಆಸ್ಪತ್ರೆಗೆ ದಾಖಲಾಗಿರುವ ಕೆನಡಾದ 70ರ ವೃದ್ಧೆಯೊಬ್ಬರು, ಜಾಗತಿಕ ತಾಪಮಾನ ದುಷ್ಪರಿಣಾಮದಿಂದ ಅನಾರೋಗ್ಯಕ್ಕೀಡಾದ ಮೊದಲ ಮಹಿಳೆಯಾಗಿರಬಹುದು ಎಂದು ವೈದ್ಯರು ಖಚಿತಪಡಿಸಿದ್ದಾರೆ. ಉಷ್ಣ ಹವೆಯಿಂದಾಗಿ ಅವರು ಅನಾರೋಗ್ಯಕ್ಕೆ ಈಡಾಗಿದ್ದು, ಅದರ ಪರಿಣಾಮದಿಂದ ಹಲವು ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next